ರಾಜ್ಯಸಭೆಯಲ್ಲಿ ಕೋಲಾಹಲ ಸೃಷ್ಟಿಸಿದ ಅಸ್ಸಾಂ ಎನ್‌ಆರ್‌ಸಿ ವರದಿ

ಈ ಸುದ್ದಿಯನ್ನು ಶೇರ್ ಮಾಡಿ

Rajyasabha--01
ನವದೆಹಲಿ, ಜು.31- ಅಸ್ಸೋಂ ರಾಷ್ಟ್ರೀಯ ಪೌರತ್ವ ನೋಂದಣಿಯಲ್ಲಿ 40 ಲಕ್ಷಕ್ಕೂ ಅಧಿಕ ಜನರ ಹೆಸರು ಸೇರ್ಪಡೆಯಾಗದಿರುವ ವಿಚಾರ ರಾಜ್ಯಸಭೆಯಲ್ಲಿ ಇಂದು ಮತ್ತೆ ಪ್ರತಿಧ್ವನಿಸಿ ಭಾರೀ ಗದ್ದಲ ಕೋಲಾಹಲದ ವಾತಾವರಣ ನಿರ್ಮಾಣವಾಯಿತು. ಇದರಿಂದ ಸದನದ ಕಲಾಪವನ್ನು ನಾಳೆಗೆ ಮುಂದೂಡಲಾಯಿತು.
ಸಂಸತ್ತಿನ ಮೇಲ್ಮನೆಯಲ್ಲಿ ಮುಂಗಾರು ಅಧಿವೇಶನದ ಇಂದಿನ ಕಲಾಪ ಆರಂಭವಾಗುತ್ತಿದ್ದಂತೆ ತೃಣ ಮೂಲ ಕಾಂಗ್ರೆಸ್ ನಾಯಕ ಡೆರೆಕ್ ಓಬ್ರಿಯಾನ್, ಪ್ರಶ್ನೋತ್ತರ ವೇಳೆಯನ್ನು ರದ್ದುಗೊಳಿಸಿ ನಿಯಮ 267ರ ಅಡಿಯಲ್ಲಿ ಈ ಕುರಿತು ತಾವು ನೀಡಿರುವ ನೋಟಿಸ್ ಕುರಿತು ಚರ್ಚೆಗೆ ಅವಕಾಶ ನೀಡಬೇಕೆಂದು ಪಟ್ಟು ಹಿಡಿದರು. ಇದಕ್ಕೆ ಪಕ್ಷದ ಇತರ ಸದಸ್ಯರೂ ಕೂಡ ಧನಿಗೂಡಿಸಿದರು.

ಗದ್ದಲದ ನಡುವೆ ಸಭಾಪತಿ ಡಾ.ಎಂ.ವೆಂಕಯ್ಯ ನಾಯ್ಡು, ಗೃಹ ಸಚಿವ ರಾಜನಾಥ್ ಸಿಂಗ್ ಲೋಕಸಭೆ ಕಲಾಪದ ಕರ್ತವ್ಯದಲ್ಲಿದ್ದಾರೆ ಅವರು ಈ ಸೂಕ್ಷ್ಮ ಮತ್ತು ಗಂಭೀರ ವಿಷಯದ ಬಗ್ಗೆ ಉತ್ತರಿಸುತ್ತಾರೆ ಎಂದು ಹೇಳಿದರು. ಆದರೆ, ಇದಕ್ಕೆ ಒಪ್ಪದ ಸದಸ್ಯರು ಪ್ರತಿಭಟನೆ ತೀವ್ರಗೊಳಿಸಿದ್ದರಿಂದ ಗದ್ದಲ ಹೆಚ್ಚಾಗಿ ಸಭಾಪತಿ ಅವರು ಕಲಾಪವನ್ನು ಮಧ್ಯಾಹ್ನಕ್ಕೆ ಮುಂದೂಡಿದರು. ನಿನ್ನೆ ಸಹ ಇದೇ ವಿಷಯವಾಗಿ ಪ್ರತಿಭಟನೆ-ಧರಣಿ ಕಲಾಪ ನಡೆಯದೇ ಸದನವನ್ನು ಮುಂದೂಡಲಾಗಿತ್ತು.

Facebook Comments

Sri Raghav

Admin