ಲೊಮ್‍ಬೊಕ್‍ನಲ್ಲಿ ಅಪಾಯಕ್ಕೆ ಸಿಲುಕಿದ್ದ 560 ಪರ್ವತಾರೋಹಿಗಳ ರಕ್ಷಣೆ

ಈ ಸುದ್ದಿಯನ್ನು ಶೇರ್ ಮಾಡಿ

56-Rescued
ಲೊಮ್‍ಬೊಕ್(ಇಂಡೋನೆಷ್ಯಾ), ಜು.31- ಇಂಡೋನೆಷ್ಯಾದ ವಿಹಾರ ದ್ವೀಪದಲ್ಲಿ ಪ್ರಬಲ ಭೂಕಂಪದಿಂದ ಸಾವು-ನೋವು ಸಂಭವಿಸಿದ ಬೆನ್ನಲ್ಲೇ ಲೊಮ್‍ಬೊಕ್‍ನಲ್ಲಿ ಸಕ್ರಿಯ ಜ್ವಾಲಾಮುಖಿ ಬಳಿ ಭೂಕುಸಿತ ಉಂಟಾಗಿ ಅಪಾಯಕ್ಕೆ ಸಿಲುಕಿದ್ದ 560 ಪರ್ವತಾರೋಹಿಗಳು ಮತ್ತು ಮಾರ್ಗದರ್ಶಕರನ್ನು ರಕ್ಷಿಸಲಾಗಿದೆ.

ಪ್ರವಾಸಿಗರು ಶಿಖರ ಏರುವ ಮಾರ್ಗವಾದ ಮೌಂಟ್ ರಿನ್‍ಜನಿ ಪರ್ವತದಲ್ಲಿ ಅಪಾಯಕ್ಕೆ ಸಿಲುಕಿದವರು. ಹೆಲಿಕಾಪ್ಟರ್‍ಗಳು ಮತ್ತು ರಕ್ಷಣಾ ತಂಡ ಪರ್ವತಾರೋಹಿಗಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿವೆ ಎಂದು ರಾಷ್ಟ್ರೀಯ ಉದ್ಯಾನವನ ಉನ್ನತಾಧಿಕಾರಿಯೊಬ್ಬರು ತಿಳಿಸಿದ್ದಾರೆ.

560 ಮಂದಿ ಪರ್ವತ ಪ್ರದೇಶದಲ್ಲಿ ಅಪಾಯಕಾರಿ ಪರಿಸ್ಥಿತಿಯಲ್ಲಿ ಸಿಲುಕಿದ್ದರು. ಸೆಗಾರ ಅನಕನ್ ಪ್ರದೇಶದಲ್ಲಿ 500 ಮಂದಿ ಹಾಗೂ ಬಟು ಸೆಪರ್ ಪರ್ವತದಲ್ಲಿ 60 ಜನರು ಅಪಾಯದಲ್ಲಿದ್ದರು.  ಇದೇ ಪ್ರದೇಶದಲ್ಲಿ ಭಾನುವಾರ 6.4 ತೀವ್ರತೆಯ ಭೂಕಂಪದಿಂದ 18 ಮಂದಿ ಮೃತಪಟ್ಟು, ಅನೇಕರು ಗಾಯಗೊಂಡಿದ್ದರು. ನೂರಾರು ಕಟ್ಟಡಗಳು ನಾಶವಾಗಿ ಅಪಾರ ನಷ್ಟ ಸಂಭವಿಸಿದೆ.

Facebook Comments

Sri Raghav

Admin