4 ವಾರಗಳಲ್ಲಿ ಜಾಹೀರಾತಿ ನೀತಿ ರೂಪಿಸಲು ಬಿಬಿಎಂಪಿಗೆ ಹೈಕೋರ್ಟ್ ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

bbmp2
ಬೆಂಗಳೂರು, ಆ.1- ಉದ್ಯಾನನಗರಿಯ ಸೌಂದರ್ಯವನ್ನು ಹಾಳುಗೆಡವುತ್ತಿರುವ ಅನಧಿಕೃತ ಜಾಹೀರಾತಿ ಫಲಕಗಳ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಹೈಕೋರ್ಟ್ ಕೆಲಸ ಮಾಡಲು ಸಾಧ್ಯವಾಗದಿದ್ದರೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು (ಬಿಬಿಎಂಪಿ) ಮುಚ್ಚುವಂತೆ ತೀವ್ರ ಅಸಮಾಧಾನದಿಂದ ನುಡಿದಿದೆ.

ನಗರದ ರಿಚ್ಮಂಡ್ ವೃತ್ತದಲ್ಲಿರುವ ಬೃಹತ್ ಜಾಹೀರಾತು ಫಲಕ ಕುರಿತು ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಇಂದು ವಿಚಾರಣೆ ನಡೆಸಿದ ಹೈಕೋರ್ಟ್ ಇನ್ನು 4 ವಾರಗಳ ಒಳಗೆ ಜಾಹೀರಾತು ನೀತಿ ರೂಪಿಸುವಂತೆ ಬಿಬಿಎಂಪಿಗೆ ತಾಕೀತು ಮಾಡಿದೆ. ಜಾಹೀರಾತು ಹಿಂದೆ ನೀಡಿದ್ದ ಭರವಸೆ ಏನಾಯಿತು ಎಂದು ಬಿಬಿಎಂಪಿ ವಕೀಲರಿಗೆ ಪ್ರಶ್ನಿಸಿದ ನ್ಯಾಯಾಲಯ ಈ ಬಗ್ಗೆ ಇನ್ನೊಂದು ತಿಂಗಳಿನಲ್ಲಿ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿತ್ತು.

Facebook Comments

Sri Raghav

Admin