ಬೆಂಕಿ ಹಚ್ಚಿ ಗರ್ಭಿಣಿಯ ಹತ್ಯೆಗೆ ಯತ್ನ..!

ಈ ಸುದ್ದಿಯನ್ನು ಶೇರ್ ಮಾಡಿ

Prefnent-Women--01
ಬೆಳಗಾವಿ,ಆ.1-ಗರ್ಭಿಣಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿರುವ ಅಮಾನವೀಯ ಘಟನೆ ಕುಲಗೋಡ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಅನುಸೂಯ(27) ಗಂಭೀರ ಗಾಯಗೊಂಡಿರುವ ಗರ್ಭಿಣಿ. ಪತಿ ಸಿದ್ದಪ್ಪ ಅನುಸೂಯ ಅವರಿಗೆ ವರದಕ್ಷಿಣೆ ತರುವಂತೆ ಒತ್ತಾಯಿಸುತ್ತಿದ್ದು, ಆಕೆಯ ತಂದೆಯ ಹೆಸರಿನಲ್ಲಿರುವ ಜಮೀನನ್ನು ತನ್ನ ಹೆಸರಿಗೆ ಮಾಡಿಕೊಡುವಂತೆ ಹಿಂಸಿಸುತ್ತಿದ್ದನು.

ಇದಕ್ಕೆ ಅನುಸೂಯ ಒಪ್ಪದಿದ್ದಕ್ಕೆ ಸಿದ್ದಪ್ಪ ಮತ್ತು ಆತನ ತಂದೆತಾಯಿ ಆಕೆಗೆ ಬೆಂಕಿ ಹಚ್ಚಿ ಹತ್ಯೆ ಮಾಡಲು ಯತ್ನಿಸಿದ್ದು, ಆಕೆಯ ಮೈಗೆ ಸುಟ್ಟ ಗಾಯಗಳಾಗಿವೆ. ಅನುಸೂಯಳ ಕಿರುಚಾಟ ಕೇಳಿದ ಅಕ್ಕಪಕ್ಕದ ಮನೆಯವರು ಸ್ಥಳಕ್ಕೆ ಬಂದು ತಕ್ಷಣವೆ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಕುಟುಂಬಸ್ಥರು ಪರಾರಿಯಾಗಿದ್ದಾರೆ. ಕುಲಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Facebook Comments

Sri Raghav

Admin