ರಾಜತಾಂತ್ರಿಕ ಪ್ರೌಢತೆ ಮೂಲಕ ಡೊಕ್ಲಂ ವಿವಾದ ಇತ್ಯರ್ಥ : ಸುಷ್ಮಾ

ಈ ಸುದ್ದಿಯನ್ನು ಶೇರ್ ಮಾಡಿ

Sushma--01

ನವದೆಹಲಿ, ಆ.1-ಭಾರತ-ಚೀನಾ ನಡುವೆ ಉದ್ಭವಿಸಿದ್ದ ಡೊಕ್ಲಂ ಬಿಕ್ಕಟ್ಟನ್ನು ಯಾವುದೇ ಪ್ರದೇಶದ ನಷ್ಟವಿಲ್ಲದೇ ರಾಜತಾಂತ್ರಿಕ ಪರಿಪಕ್ವತೆ ಮತ್ತು ಪ್ರೌಢತೆ ಮೂಲಕ ಇತ್ಯರ್ಥಗೊಳಿಸಲಾಗಿದ್ದು, ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ.
ಲೋಕಸಭೆಯಲ್ಲಿಂದು ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯರಿಗೆ ಉತ್ತರ ನೀಡಿದ ಅವರು, ಉಭಯ ರಾಷ್ಟ್ರಗಳ ನಡುವೆ ತಲೆದೋರಿದ್ದ ಡೊಕ್ಲಂ ವಿವಾದವನ್ನು ಕಳೆದ ವರ್ಷ ಆಗಸ್ಟ್ 26ರಂದು ಬಗೆಹರಿಸಲಾಗಿದೆ ಎಂದರು.

ಚೀನಾದ ವುಹನ್‍ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‍ಪಿನ್ ಅವರ ನಡುವೆ ನಡೆದ ಔಪಚಾರಿಕೆ ಮಾತುಕತೆಯ ಮುಖ್ಯ ಉದ್ದೇಶದ ಬಗ್ಗೆ ತಿಳಿಸಿದ ಸುಷ್ಮಾ, ಎರಡೂ ದೇಶಗಳ ನಡುವೆ ಪರಸ್ಪರ ಹೊಂದಾಣಿಕೆ ಮತ್ತು ನಂಬಿಕೆಗೆ ಈ ಮಾತುಕತೆ ವೇಳೆ ಒತ್ತು ನೀಡಲಾಗಿದೆ. ಎಲ್ಲ ಮೂರು ಪ್ರಮುಖ ಉದ್ದೇಶಗಳು ಈಡೇರಿವೆ ಎಂದು ತಿಳಿಸಿದರು.

Facebook Comments

Sri Raghav

Admin