ಎಚ್ಚರಿಕೆ, ಸಾರ್ವಜನಿಕವಾಗಿ ಆಧಾರ್ ಸಂಖ್ಯೆ ಹಂಚಿಕೊಳ್ಳಬೇಡಿ ..!

ಈ ಸುದ್ದಿಯನ್ನು ಶೇರ್ ಮಾಡಿ

Aadhaar--01

ನವದೆಹಲಿ, ಆ.1-ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ಅಧ್ಯಕ್ಷ ಆರ್.ಎಸ್.ಶರ್ಮ ಅವರು ಆಧಾರ್ ಕುರಿತು ನೀಡಿರುವ ಸವಾಲಿನ ಹೇಳಿಕೆಯೊಂದು ಈಗ ಭಾರೀ ಗೊಂದಲ ಮತ್ತು ವಿವಾದಕ್ಕೆ ಕಾರಣವಾಗಿದೆ. ಟ್ರಾಯ್ ಅಧ್ಯಕ್ಷರ ಸವಾಲಿನ ಹೇಳಿಕೆಯಿಂದ ಎಚ್ಚೆತ್ತುಕೊಂಡ ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ(ಯುಐಡಿಎಐ) ಸಾರ್ವಜನಿಕವಾಗಿ ನಿಮ್ಮ ಆಧಾರ್ ಸಂಖ್ಯೆಯನ್ನು ಹಂಚಿಕೊಳ್ಳಬೇಡಿ ಎಂದು ಜನರಿಗೆ ಮನವಿ ಮಾಡಿದ್ದಾರೆ. ಈ ಕುರಿತು ಪ್ರಾಧಿಕಾರ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

ಆಧಾರ್ ಸಂಖ್ಯೆಯನ್ನು ಸಾರ್ವಜನಿಕವಾಗಿ ಹಂಚಿಕೊಳ್ಳುವ ಚಟುವಟಿಕೆ ಕಾನೂನಿಗೆ ವಿರುದ್ಧವಾಗಿದೆ ಎಂದು ಯುಐಡಿಎಐ ಹೇಳಿದೆ. ಅಲ್ಲದೇ ಇತರೆ ಯಾವುದೇ ಉದ್ದೇಶಕ್ಕೆ ಮತ್ತೊಬ್ಬರ ಆಧಾರ್ ನಂಬರ್ ಉಪಯೋಗಿಸಿದರೆ ಆಧಾರ್ ಕಾಯ್ದೆ ಅಡಿ ಅಪರಾಧವಾಗುತ್ತದೆ ಮತ್ತು ತಪ್ಪಿತಸ್ಥರಿಗೆ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಲಾಗಿದೆ.

ಟ್ರಾಯ್ ಅಧ್ಯಕ್ಷ ಶರ್ಮ ಅವರು ಟ್ವಿಟರ್‍ನಲ್ಲಿ ತಮ್ಮ ಆಧಾರ್ ನಂಬರ್ ಪ್ರಕಟಿಸಿ ಅದನ್ನು ಬಳಸಿ ನನಗೆ ಯಾರಾದರೂ ಹಾನಿ ಉಂಟು ಮಾಡುತ್ತಾರೋ ಮಾಡಿ ತೋರಿಸಿ ಎಂದು ಸವಾಲು ಹಾಕಿದ್ದರು. ಶರ್ಮ ಸವಾಲು ಸ್ವೀಕರಿಸಿದ್ದ ಫ್ರಾನ್ಸ್ ಮೂಲದ ಹ್ಯಾಕರ್ ಎಲಿಯಟ್ ಅಲ್ವರ್‍ಸನ್ ಟ್ರಾಯ್ ಮುಖ್ಯಸ್ಥರ ಮೊಬೈಲ್ ನಂಬರ್, ಪ್ಯಾನ್ ಸಂಖ್ಯೆ ಸೇರಿದಂತೆ ಹಲವು ವೈಯಕ್ತಿಕ ಮಾಹಿತಿಗಳನ್ನು ಸಾರ್ವಜನಿಕವಾಗಿ ಟ್ವೀಟ್ ಮಾಡಿ ಆತಂಕ ಸೃಷ್ಟಿಸಿದ್ದರು.

Facebook Comments

Sri Raghav

Admin