ಮೆಕ್ಸಿಕೋ ವಿಮಾನ ದುರಂತದಲ್ಲಿ ಸಿಬ್ಬಂದಿ ಸೇರಿ 101 ಮಂದಿ ಪ್ರಾಣಾಪಾಯದಿಂದ ಪಾರು..!

ಈ ಸುದ್ದಿಯನ್ನು ಶೇರ್ ಮಾಡಿ

Mexico--01

ಡುರಾಂಗೋ, ಆ.1-ಭಾರೀ ಆಲಿಕಲ್ಲು ಮಳೆ ವೇಳೆ ಮೇಲೇರುತ್ತಿದ್ದ ಏರ್‍ಮೆಕ್ಸಿಕೋ ವಿಮಾನವೊಂದು ಅಪಘಾತಕ್ಕೀಡಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ 85ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ಉತ್ತರ ಮೆಕ್ಸಿಕೋದಲ್ಲಿ ನಿನ್ನೆ ಸಂಜೆ ಸಂಭವಿಸಿದೆ. ಅದೃಷ್ಟವಶಾತ್ ಯಾವುದೇ ಸಾವು ಸಂಭವಿಸಿಲ್ಲ. ಡುರಾಂಗೋ ಮತ್ತು ಮಕ್ಸಿಕೋ ಸಿಟಿ ನಡುವೆ ಸಂಚರಿಸುತ್ತಿದ್ದ ಎಬ್ರಾಯಿರ್ 190 ವಿಮಾನವು ಸ್ಥಳೀಯ ಕಾಲಮಾನ ಸಂಜೆ 4ರ ಸುಮಾರಿನಲ್ಲಿ ಭಾರೀ ಆಲಿಕಲ್ಲು ಮಳೆಯಿಂದಾಗಿ ಅಪಘಾತಕ್ಕೀಡಾಯಿತು. ಈ ವಿಮಾನದಲ್ಲಿ 97 ಪ್ರಯಾಣಿಕರು ಮತ್ತು ನಾಲ್ವರು ಸಿಬ್ಬಂದಿ ಇದ್ದರು ಎಂದು ಮೆಕ್ಸಿಕೋದ ಸಾರಿಗೆ ಸಚಿವ ಗೆರಾರ್ಡೊ ರೂಯಿಜ್ ಎಸ್‍ಪಾರ್ಝಾ ತಿಳಿಸಿದ್ಧಾರೆ.

ಈ ದುರಂತದಲ್ಲಿ ಯಾವ ಪ್ರಯಾಣಿಕರೂ ಮೃತಪಟ್ಟಿಲ್ಲ. 85 ಜನರಿಗೆ ಗಾಯಗಳಾಗಿವೆ. ಕೆಲವರಿಗೆ ತೀವ್ರ ಸ್ವರೂಪದ ಪೆಟ್ಟಾಗಿದೆ. ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಅವರು ಹೇಳಿದ್ದಾರೆ. ವಿಮಾನ ನಿಲ್ದಾಣದ ರನ್‍ವೇ ಕೊನೆಯಲ್ಲಿ ಮೇಲೇರುತ್ತಿದ್ದ ವಿಮಾನ ಅಪಘಾತಕ್ಕೀಡಾಗಿ ಮೈದಾನದಲ್ಲಿ ಬಿದ್ದು, ಬೆಂಕಿ ಹೊತ್ತಿಕೊಂಡಿತು. ವಿಮಾನದಿಂದ ದಟ್ಟ ಹೊಗೆ ಏಳುತ್ತಿದ್ದ ದೃಶ್ಯಗಳು ಸಾಮಾಜಿಕ ಜಾಲ ತಾಣಗಳಲ್ಲಿ ಬಿತ್ತರವಾಗಿದೆ.

Facebook Comments

Sri Raghav

Admin