ಪೈಲೆಟ್‍ಗೆ ಅನಾರೋಗ್ಯದಿಂದ ಕೊನೆ ಗಳಿಗೆಯಲ್ಲಿ ವಿಮಾನ ರದ್ದು, ಪ್ರಯಾಣಿಕರ ಆಕ್ರೋಶ

ಈ ಸುದ್ದಿಯನ್ನು ಶೇರ್ ಮಾಡಿ

Spice-JEt--01

ಮಂಗಳೂರು,ಆ.1-ಸ್ಪೈಸ್ ಜೆಟ್ ವಿಮಾನದ ಪೈಲೆಟ್‍ಗೆ ಅನಾರೋಗ್ಯದ ನಿಮಿತ್ತ ಮಂಗಳೂರಿನಿಂದ ದುಬೈಗೆ ತೆರಳಬೇಕಿದ್ದ ವಿಮಾನವನ್ನು ಯಾವುದೆ ಮುನ್ಸೂಚನೆ ನೀಡದೇ ರದ್ದು ಮಾಡಿದ್ದರಿಂದ ಪ್ರಯಾಣಿಕರು ವಿಮಾನ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಂಗಳೂರು ನಿಲ್ದಾಣದಿಂದ ರಾತ್ರಿ 12 ಗಂಟೆಗೆ ದುಬೈಗೆ ತೆರಳಬೇಕಾಗಿದ್ದ ಸ್ಪೈಸ್ ಜೆಟ್ ವಿಮಾನ ಕೊನೆ ಗಳಿಗೆಯಲ್ಲಿ ರದ್ದುಪಡಿಸಲಾಯಿತು.

ಕೇರಳ ಹಾಗೂ ಮಂಗಳೂರು ಮೂಲದ ಸುಮಾರು 155 ಪ್ರಯಾಣಿಕರು ಈ ವಿಮಾನದಲ್ಲಿ ಪ್ರಯಾಣಿಸಬೇಕಿತ್ತು. ಕೊನೆ ಕ್ಷಣದಲ್ಲಿ ಪೈಲೆಟ್‍ಗೆ ಅನಾರೋಗ್ಯದ ಕಾರಣ ನೀಡಿ ಏಕಾಏಕಿ ವಿಮಾನವನ್ನು ರದ್ದು ಗೊಳಿಸಿದ್ದರಿಂದ ಪ್ರಯಾಣಿಕರು ಊಟವಿಲ್ಲದೆ ಪರದಾಡುವಂತಾಯಿತು.
ಯಾವುದೇ ಮುನ್ಸೂಚನೆ ನೀಡದೆ ವಿಮಾನ ರದ್ದುಗೊಳಿಸಿದ್ದರಿಂದ ಆಕ್ರೋಶಗೊಂಡ ಪ್ರಯಾಣಿಕರು ಸ್ಪೈಸ್ ಜೆಟ್ ವಿಮಾನ ಸಿಬ್ಬಂದಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ನಂತರ ಪ್ರಯಾಣಿಕರನ್ನು ಸಮಾಧಾನಪಡಿಸಿ ಸಂಜೆ 5.30ಕ್ಕೆ ದುಬೈಗೆ ಸ್ಪೈಸ್ ಜೆಟ್ ವಿಮಾನ ತೆರಳಲಿದೆ ಎಂದು ಘೋಷಿಸಲಾಯಿತು.

Facebook Comments

Sri Raghav

Admin