ಕರ್ನಾಟಕ ಸೇರಿ ದೇಶದ್ಯಾಂತ 200 ಹೊಸ ರೈಲು ಮಾರ್ಗ

ಈ ಸುದ್ದಿಯನ್ನು ಶೇರ್ ಮಾಡಿ

Train
ನವದೆಹಲಿ, ಆ.2-ಕರ್ನಾಟಕದ 16 ಮಾರ್ಗಗಳೂ ಸೇರಿದಂತೆ ದೇಶಾದ್ಯಂತ 200ಕ್ಕೂ ಹೆಚ್ಚು ಹೊಸ ರೈಲ್ವೆ ಲೈನ್‍ಗಳನ್ನು ಭಾರತೀಯ ರೈಲ್ವೆ ಪರಿಚಯಿಸಲಿದೆ. ಲೋಕಸಭೆಯಲ್ಲಿಂದು ಸದಸ್ಯರ ಪ್ರಶ್ನೆಯೊಂದಕ್ಕೆ ರೈಲ್ವೆ ಖಾತೆ ರಾಜ್ಯ ಸಚಿವ ರಾಜನ್ ಗೊಹೈನ್ ಲಿಖಿತ ಉತ್ತರದಲ್ಲಿ ಈ ಮಾಹಿತಿ ನೀಡಿದ್ದಾರೆ. ಅನುಷ್ಠಾನಕ್ಕಾಗಿ ವಿವಿಧ ಹಂತಗಳಲ್ಲಿರುವ ಹಲವಾರು ಹೊಸ ರೈಲು ಮಾರ್ಗಗಳು ದೇಶದ ವಿವಿಧ ರಾಜ್ಯಗಳಲ್ಲಿ ಕಾರ್ಯಗತವಾಗಲಿವೆ ಎಂದು ಅಂಕಿ-ಅಂಶ ನೀಡಿದ್ದಾರೆ.

ಕರ್ನಾಟಕ 16, ಅಸ್ಸಾಂ ಮತ್ತು ಈಶಾನ್ಯ ಪಾಂತ್ಯಗಳಲ್ಲಿ 15, ಆಂಧ್ರಪ್ರದೇಶ 18, ಬಿಹಾರ 34, ಛತ್ತೀಸ್‍ಗಢ 8, ದೆಹಲಿ 1, ಗುಜರಾತ್ 4, ಹರ್ಯಾಣ 7, ಹಿಮಾಚಲ ಪ್ರದೇಶ 4, ಜಮ್ಮು ಮತ್ತು ಕಾಶ್ಮೀರ 1, ಜÁರ್ಖಂಡ್ 14, ಕೇರಳ 2, ಮಧ್ಯಪ್ರದೇಶ 8, ಮಹಾರಾಷ್ಟ್ರ 12, ಒಡಿಶಾ 10, ಪಂಜÁಬ್ 6, ರಾಜಸ್ತಾನ 10, ತೆಲಂಗಾಣ 9, ತಮಿಳುನಾಡು 8, ಉತ್ತರಪ್ರದೇಶ 15, ಉತ್ತರಾಖಂಡ್ 3 ಹಾಗೂ ಪಶ್ಚಿಮ ಬಂಗಾಳ 18 ಹೊಸ ರೈಲು ಮಾರ್ಗಗಳು ಸಂಚರಿಸಲಿವೆ ಎಂದು ಸಚಿವರು ತಿಳಿಸಿದ್ದಾರೆ.
ರೈಲು ಯೋಜನೆಗಳು ಪೂರ್ಣಗೊಳ್ಳಲು ಭೂ ಸ್ವಾಧೀನ, ಅರಣ್ಯ ಮತ್ತು ವನ್ಯಜೀವಿಯಂಥ ಶಾಸನಬದ್ಧ ಸಮ್ಮತಿ ಇತ್ಯಾದಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು ಹಾಗೂ ಕೇಂದ್ರ ಸಚಿವಾಲಯಗಳಿಂದ ಅನುಮತಿ ಪಡೆಯಬೇಕಾಗುತ್ತದೆ. ರೈಲ್ವೆ ಬಜೆಟ್‍ನಲ್ಲಿ ಹೊಸ ರೈಲು ಮಾರ್ಗಗಳ ಬಗ್ಗೆ ನಿರ್ಣಯ ಕೈಗೊಳ್ಳಲಾಗಿದೆ ಎಂದು ಅವರು ವಿವರಿಸಿದ್ದಾರೆ.

ಸ್ವಚ್ಛ ಭಾರತ ಆಂದೋಲನ ಅಡಿಯಲ್ಲಿ 2017-18ನೇ ಸಾಲಿನಲ್ಲಿ ರೈಲ್ವೆ 21 ಗ್ರೀನ್ ಕಾರಿಡಾರ್‍ಗಳನ್ನು(ಹಸಿರು ಪಥಗಳು) ಸ್ಥಾಪಿಸಿದೆ. ಕೆಲವು ರೈಲುಗಳಲ್ಲಿ ಬಯೋ ಟಾಯ್ಲೆಟ್‍ಗಳನ್ನು(ಜೈವಿಕ ಶೌಚಾಲಯಗಳು) ಪ್ರಾಯೋಗಿಕವಾಗಿ ಅಳವಡಿಸಲಾಗಿದೆ. ಹಂತಹಂತವಾಗಿ ಅವುಗಳನ್ನು ವಿಸ್ತರಿಸಲಾಗುವುದು ಎಂದು ರಾಜನ್ ಗೊಹೈನ್ ತಿಳಿಸಿದ್ದಾರೆ.

Facebook Comments

Sri Raghav

Admin