ವಿದ್ಯಾರ್ಥಿನಿಯನ್ನು ಪೊದೆಯೊಳಗೆ ಎಳೆದೊಯ್ದ ಅತ್ಯಾಚಾರಕ್ಕೆ ಯತ್ನಿಸಿ, ಕೊಲೆ

ಈ ಸುದ್ದಿಯನ್ನು ಶೇರ್ ಮಾಡಿ

Student-Girl-Rape

ಮಾಲೂರು, ಆ.2- ಸ್ನೇಹಿತೆ ಜತೆ ಶಾಲೆಯಿಂದ ಮನೆಗೆ ತೆರಳುತ್ತಿದ್ದ 10ನೆ ತರಗತಿ ವಿದ್ಯಾರ್ಥಿನಿಯನ್ನು ಪೊದೆಯೊಳಗೆ ಎಳೆದೊಯ್ದ ದುಷ್ಕರ್ಮಿ ಅತ್ಯಾಚಾರಕ್ಕೆ ಯತ್ನಿಸಿ ಕೊಲೆ ಮಾಡಿರುವ ಘಟನೆ ಮಾಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ನಿನ್ನೆ ಎಂದಿನಂತೆ ಶಾಲೆ ಮುಗಿಸಿಕೊಂಡು ಕ್ರೀಡಾ ತರಬೇತಿ ಮುಗಿಸಿ ಸಂಜೆ 5 ಗಂಟೆಯಲ್ಲಿ 10ನೆ ತರಗತಿ ವಿದ್ಯಾರ್ಥಿನಿ ಸ್ನೇಹಿತೆ ಜತೆ ಇಂದಿರಾನಗರ ಮೂಲಕ ಕಾಲುದಾರಿಯಲ್ಲಿ ನಡೆದುಕೊಂಡು ಮನೆಗೆ ಹೋಗುತ್ತಿದ್ದಳು.

ಈ ವೇಳೆ ಎದುರಿಗೆ ಬಂದ ಯುವಕ ಈ ವಿದ್ಯಾರ್ಥಿನಿಯನ್ನು ಎಳೆದುಕೊಂಡು ಪೊದೆಯೊಳಗೆ ಹೋಗಿದ್ದಾನೆ. ಇದರಿಂದ ಗಾಬರಿಯಾದ ಸ್ನೇಹಿತೆ ಅಲ್ಲಿಂದ ಓಡಿ ಹೋಗಿದ್ದಾಳೆ.ಸಂಜೆಯಾದರೂ ಶಾಲೆಗೆ ಹೋದ ಮಗಳು ಮನೆಗೆ ಬಾರದಿರುವುದನ್ನು ಗಮನಿಸಿದ ಪೊೀಷಕರು ಎಲ್ಲ ಕಡೆ ಹುಡುಕಿ ಈ ಮಾರ್ಗದಲ್ಲಿ ಬಂದಾಗ ಪೊದೆ ಬಳಿ ಮಗಳ ಶವ ಪತ್ತೆಯಾಗಿದೆ.  ಮಗಳ ಶವ ಕಂಡು ಪೋಷಕರ ಆಕ್ರಂಧನ ಮುಗಿಲುಮುಟ್ಟಿತ್ತು. ಸುದ್ದಿ ತಿಳಿದ ಮಾಲೂರು ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಶವವನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments

Sri Raghav

Admin