ಬ್ರಿಟನ್ ಜಲಧಾಮದಲ್ಲಿ ಜಲಾಂತರ್ಗಾಮಿಗಳ ರೇಸ್..!

ಈ ಸುದ್ದಿಯನ್ನು ಶೇರ್ ಮಾಡಿ

Ds-2
ನೀವು ಅನೇಕ ಜಲ ಕ್ರೀಡೆಗಳು ಮತ್ತು ನೀರಿನ ಮೇಲೆ ನಡೆಯುವ ರೇಸ್‍ಗಳನ್ನು ನೋಡಿರುತ್ತೀರಿ. ಆದರೆ ಇಂಗ್ಲೆಂಡ್‍ನಲ್ಲಿ ನಡೆದ ರೇಸ್ ವಿಭಿನ್ನವಾಗಿತ್ತು. ಜಲಧಾಮದಲ್ಲಿ ಮಾನವ ಶಕ್ತಿ ಚಾಲಿತ ಜಲಾಂತರ್ಗಾಮಿಗಳ ರೇಸ್ ವಿಶಿಷ್ಟ ಎನಿಸಿತು. ಮಿನಿ ಸಬ್‍ಮರೀನ್ ರೇಸ್ ಕುರಿತು ಇಲ್ಲೊಂದು ವರದಿ.  ದಕ್ಷಿಣ ಇಂಗ್ಲೆಂಡ್‍ನ ಗೋಸ್‍ಪೋರ್ಟ್ ಪಟ್ಟಣದ ಬೃಹತ್ ಜಲಧಾಮದಲ್ಲಿ ನಾಲ್ಕನೇ ದ್ವೈವಾರ್ಷಿಕ ಐರೋಪ್ಯ ಅಂತಾರಾಷ್ಟ್ರೀಯ ಜಲಾಂತರ್ಗಾಮಿ ರೇಸ್ ನಡೆಯಿತು. ಈ ವಿಭಿನ್ನ ರೀತಿಯ ಸ್ಪರ್ಧೆಯಲ್ಲಿ ಮಾನವ ಶಕ್ತಿ ಚಾಲಿತ ಮಿನಿ ಸಬ್‍ಮರೀನ್‍ಗಳು ಭಾಗವಹಿಸಿದ್ದವು. ಡಿಸೇಲ್ ಅಥವಾ ಅಣುಶಕ್ತಿ ಚಾಲಿತ ನೌಕೆಗಳು ಇದಾಗಿರಲಿಲ್ಲ. ಬದಲಿಗೆ ಸ್ಕೂಬಾ ಡೈವರ್‍ಗಳು ನೀರಿನ ಆಳದಲ್ಲಿ ಪೆಡಲ್ ಮಾಡುವ ಜಲಾಂತರ್ಗಾಮಿಗಳನ್ನು ವೇಗವಾಗಿ ಮುನ್ನಡೆಸುವ ವಿಶಿಷ್ಟ ಸ್ಪರ್ಧೆ ಇದಾಗಿತ್ತು.

Ds

ವಿಶ್ವ ವಿದ್ಯಾಲಯದ ವಿದ್ಯಾರ್ಥಿ ಗಳ ತಂಡ ವಿನ್ಯಾಸಗೊಳಿಸ ನಿರ್ಮಿಸಿದ ಸಬ್‍ಮರೀನ್‍ಗಳು ಕ್ರೀಡಾ ಮತ್ತು ಎಂಜಿನಿಯರಿಂಗ್ ಕೌಶಲ್ಯಕ್ಕೆ ಸಾಕ್ಷಿಯಾಗಿತ್ತು.
ಇದೊಂದು ಅಂಡರ್‍ವಾಟರ್ ಬೈಸಿಕಲ್.. ವಿವಿಧ ವಿಶ್ವವಿದ್ಯಾಲಯಗಳ ಎಂಜಿಯರ್‍ಗಳ ತಂಡವು ಮೂರು ಮೀಟರ್ ಉದ್ದದ ಸ್ಟ್ರೀಮ್‍ಲೈನ್ ಸಬ್‍ಮರೀನ್‍ಗಳನ್ನು ನಿರ್ಮಿಸಿದ್ದಾರೆ. ಮಾನಸ ಶಕ್ತಿಯಿಂದ ಮಾತ್ರ ಇದು ಚಲಿಸುತ್ತದೆ ಎಂದು ರೇಸ್ ನಿರ್ದೇಶಕ ವಿಲಿಯಮ್ ಮೆಗಿಲ್ ವಿವರಿಸಿದರು.  ನೆದರ್‍ಲೆಂಡ್ಸ್ ಮತ್ತು ಕೆನಡಾ ತಂಡಗಳು ಈ ಸ್ಪರ್ಧೆಗಾಗಿ ತಮ್ಮ ಸಬ್‍ಮರೀನ್‍ಗಳನ್ನು ತಂದಿದ್ದರು. ಅನ್ವೇಷನೆ, ವೇಗ ಮತ್ತು ಸಾಮಥ್ರ್ಯ ಪರಿಗಣಿಸಿ ಬಹುಮಾನಗಳನ್ನು ನೀಡಲಾಯಿತು.

Ds-1

Facebook Comments