ಮಾಲೂರು ಶಾಲಾ ವಿದ್ಯಾರ್ಥಿನಿಯನ್ನು ಭೀಕರವಾಗಿ ಕೊಲೆ ಮಾಡಿದ್ದ ಆರೋಪಿ ಅರೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

murder-and-arrest-1

ಕೋಲಾರ, ಆ.3- ಶಾಲೆ ಮುಗಿಸಿ ಸ್ನೇಹಿತೆಯೊಂದಿಗೆ ಮನೆಗೆ ಹೋಗುತ್ತಿದ್ದ 10ನೇ ತರಗತಿ ವಿದ್ಯಾರ್ಥಿನಿಯನ್ನು ಪೊದೆಯೊಳಗೆ ಎಳೆದೊಯ್ದು ಭೀಕರವಾಗಿ ಹತ್ಯೆ ಮಾಡಿ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಮಾಲೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಾಲೂರಿನ ಟೇಕಲ್‍ಬಳಿಯ ನಿವಾಸಿ ಬಾಬು ಅಲಿಯಾಸ್ ರಂಜಿತ್ ಬಂಧಿತ ಆರೋಪಿಯಾಗಿದ್ದು, ಈತ ಸಲ್ಯೂಷನ್ ಸೇವನೆ ಹಾಗೂ ಗಾಂಜಾ ವೆಸನಿಯಾಗಿದ್ದನು.

ಮಾಲೂರಿನ ಇಂದಿರಾನಗರ ನಿವಾಸಿಯಾದ 10ನೇ ತರಗತಿ ವಿದ್ಯಾರ್ಥಿನಿ ಮನೆ ಬಳಿ ಆರೋಪಿ ಬಾಬು ಗಾರೆ ಕೆಲಸಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ಮೂರ್ನಾಲ್ಕು ಬಾರಿ ಮಾತನಾಡಿಸಿದ್ದನು. ಇದನ್ನೇ ಸಲುಗೆಯಾಗಿ ಬೆಳೆಸಿಕೊಂಡ ಬಾಬು ಆಕೆಯ ಹಿಂದೆ ಸುತ್ತಾಡುತ್ತಿದ್ದ ಸಂದರ್ಭದಲ್ಲಿ ವಿದ್ಯಾರ್ಥಿನಿ ಆತನಿಗೆ ಬುದ್ದಿವಾದ ಹೇಳಿದರೂ ಕೇಳದಿದ್ದರಿಂದ ನಿಂದಿಸಿದ್ದಳು ಎನ್ನಲಾಗಿದೆ. ಇದೇ ಜಿದ್ದಿನಿಂದ ಸೇಡು ತೀರಿಸಿಕೊಳ್ಳಲು ನಿರ್ಧರಿಸಿದ ಆರೋಪಿ ಬಾಬು ಬುಧವಾರ ಸಂಜೆ ಈಕೆ ಶಾಲೆಯಿಂದ ಬರುವುದನ್ನೇ ಕಾದು ಪೊದೆಯೊಳಗೆ ಎಳೆದೋಯ್ದು ಭೀಕರವಾಗಿ ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದನು. ವಿದ್ಯಾರ್ಥಿನಿಯ ಕೊಲೆ ಖಂಡಿಸಿ ಮಾಲೂರಿನ ಶಾಲಾ-ಕಾಲೇಜು ವಿದ್ಯಾರ್ಥಿಗಳು ಸ್ವಯಂ ಪ್ರೇರಿತವಾಗಿ ಕಾಲೇಜ್ ಬಂದ್ ಮಾಡಿ ಆರೋಪಿಯನ್ನು ಶೀಘ್ರ ಬಂಧಿಸುವಂತೆ ಪ್ರತಿಭಟನೆ ನಡೆಸಿದ್ದರು. ತನಿಖೆ ಕೈಗೊಂಡಿದ್ದ ಮಾಲೂರು ಠಾಣೆ ಪೊಲೀಸರು ಆರೋಪಿಯ ಬಗ್ಗೆ ಮಾಹಿತಿ ಕಲೆ ಹಾಕಿ ಕಾರ್ಯಾಚರಣೆ ನಡೆಸಿದಾಗ ಮಾಲೂರಿನ ರೈಲ್ವೆ ನಿಲ್ದಾಣದಲ್ಲಿ ಆರೋಪಿ ಮಲಗಿದ್ದಾಗ ಬಂಧಿಸಿ ಠಾಣೆಗೆ ಕರೆತಂದು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.

Facebook Comments

Sri Raghav

Admin