ಕಾಶ್ಮೀರದಲ್ಲಿ ತೀವ್ರಗೊಂಡ ಉಗ್ರ ನಿಗ್ರಹ ಕಾರ್ಯಾಚರಣೆ, ಎನ್’ಕೌಂಟರ್’ನಲ್ಲಿ ಇಬ್ಬರು ಉಗ್ರರು ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

Militpory

ಶ್ರೀನಗರ, ಅ.3-ಕಾಶ್ಮೀರ ಕಣಿವೆಯಲ್ಲಿ ಉಗ್ರ ನಿಗ್ರಹ ಕಾರ್ಯಾಚರಣೆ ಮತ್ತಷ್ಟು ತೀವ್ರಗೊಂಡಿದೆ. ಜಮ್ಮು ಮತ್ತು ಕಾಶ್ಮೀರದ ಸೋಪೊೀರ್ ಜಿಲ್ಲೆಯ ಡ್ರುಸು ಗ್ರಾಮದಲ್ಲಿ ಇಂದು ಮುಂಜಾನೆ ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಉಗ್ರಗಾಮಿಗಳು ಹತರಾಗಿದ್ದಾರೆ.  ಹತರಾದ ಉಗ್ರರನ್ನು ಹಿಜ್‍ಬುಲ್ ಮುಜಾಹಿದ್ದೀನ್(ಎಚ್‍ಎಂ) ಭಯೋತ್ಪಾದಕ ಸಂಘಟನೆಗೆ ಸೇರಿದವರೆಂದು ಗುರುತಿಸಲಾಗಿದೆ. ಈ ಭಯೋತ್ಪಾದಕರು ಭದ್ರತಾ ಪಡೆ ಮೇಲೆ ನಡೆದ ಕೆಲವು ದಾಳಿ ಪ್ರಕರಣಗಳಲ್ಲಿ ಶಾಮೀಲಾಗಿದ್ದರು ಎಂದು ಹಿರಿಯ ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮೃತರಿಂದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಳೆದ ವಾರ ಉತ್ತರ ಕಾಶ್ಮೀರದ ಕುಪ್ವಾರ ಜಿಲೆಯಲ್ಲಿ ಪೊಲೀಸ್ ಸಿಬ್ಬಂದಿಯಿಂದ ಕಸಿದಿದ್ದ ಇನ್ಸಾಸ್ ರೈಫಲ್ ಕೂಡ ಇದರಲ್ಲಿ ಸೇರಿದೆ. ಗಸ್ತು ಕಾರ್ಯದಲ್ಲಿದ್ದ ಭದ್ರತಾ ಪಡೆ ಯೋಧರಿಗೆ ಉಗ್ರರ ಚಲನವಲನದ ಬಗ್ಗೆ ಖಚಿತ ಸುಳಿವು ಲಭಿಸಿ ಆ ಪ್ರದೇಶ ವನ್ನು ಸುತ್ತಿವರೆದರು. ಈ ಸಂದರ್ಭ ದಲ್ಲಿ ಉಗ್ರಗಾಮಿಗಳು ಗುಂಡಿನ ಮಳೆಗರೆ ಯಲು ಪ್ರಾರಂಭಿಸಿದರು. ನಂತರ ನಡೆದ ಗುಂಡಿನ ಕಾಳಗದಲ್ಲಿ ಇಬ್ಬರು ಹತರಾದರು. ಈ ಪ್ರದೇಶದಲ್ಲಿರಬಹುದಾದ ಇತರ ಉಗ್ರರ ಬೇಟೆ ಕಾರ್ಯಾಚರಣೆ ಆರಂಭವಾಗಿದೆ.

Facebook Comments

Sri Raghav

Admin