ಬೆಂಗಳೂರಿನ ಒಂದೇ ಕುಟುಂಬದ ಆರು ಮಂದಿ ನಿಗೂಢವಾಗಿ ಕಣ್ಮರೆ..!

ಈ ಸುದ್ದಿಯನ್ನು ಶೇರ್ ಮಾಡಿ

Bangalore-6-members-missing

ಬೆಂಗಳೂರು, ಆ.3- ಒಂದೇ ಕುಟುಂಬದ ಆರು ಮಂದಿ ನಾಪತ್ತೆಯಾಗಿರುವ ಘಟನೆ ಮಹದೇವಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮೂಲತಃ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಅಧೋನಿ ತಾಲ್ಲೂಕಿನ ಮಧುರೆ ಗ್ರಾಮದ ನಿವಾಸಿಗಳಾದ ಭಾರತಿ(27), ಲಕ್ಷ್ಮಿ(25), ಮಕ್ಕಳಾದ ಸುದೀಪ್(7), ಭಾರ್ಗವಿ(6), ಶ್ರೀಕಾಂತ್(6) ಹಾಗೂ ಭಾಸ್ಕರ(5) ನಾಪತ್ತೆಯಾದವರು.

ಮಹದೇವಪುರದ ತಿಮ್ಮಾರೆಡ್ಡಿ ಲೇಔಟ್‍ನಲ್ಲಿ ಈ ಕುಟುಂಬ ವಾಸವಾಗಿತ್ತು. ಜು.29ರಿಂದ ಇವರೆಲ್ಲರೂ ನಿಗೂಢವಾಗಿ ನಾಪತ್ತೆಯಾಗಿದ್ದಾರೆ.  ಅಂದು ಇವರೆಲ್ಲರೂ ಹೊರಗೆ ಹೋಗಿರಬಹುದು, ಬರುವುದು ತಡವಾಗಿರಬಹುದೆಂದು ಭಾವಿಸಿ ಭಾರತಿ ಅವರ ಪತಿ ಮಹೇಶ್ ರಾತ್ರಿವರೆಗೂ ಕಾದಿದ್ದಾರೆ. ಆದರೆ ಇವರ್ಯಾರೂ ಮನೆಗೆ ಹಿಂದಿರುಗಿಲ್ಲ. ಮಹೇಶ್ ಎಲ್ಲಾ ಕಡೆ ವಿಚಾರಿಸಿದರೂ ಇವರ ಸುಳಿವು ಸಿಕ್ಕಿಲ್ಲ. ಈ ಸಂಬಂಧ ಮಹದೇವಪುರ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮಹೇಶ್‍ನನ್ನು ತೀವ್ರ ವಿಚಾರಣೆಗೊಳಪಡಿಸಿದ್ದು, ನಾಪತ್ತೆಯಾಗಿರುವ ಮಹಿಳೆಯರು ಹಾಗೂ ಮಕ್ಕಳಿಗಾಗಿ ಶೋಧ ಕೈಗೊಂಡಿದ್ದಾರೆ.

Facebook Comments