ಮುಂಬೈಗೆ ತೆರಳುತ್ತಿದ್ದ ವಿಮಾನ ರನ್‍ವೇಯ್ಲಲೇ ಸ್ಕಿಡ್, 150 ಪ್ರಯಾಣಿಕರು ಸೇಫ್..!

ಈ ಸುದ್ದಿಯನ್ನು ಶೇರ್ ಮಾಡಿ

Jet-Airways

ನವದೆಹಲಿ, ಆ.3-ರಿಯಾದ್‍ನಿಂದ ಮುಂಬೈಗೆ ತೆರಳುತ್ತಿದ್ದ ಜೆಟ್ ಏರ್‍ವೇಸ್ ವಿಮಾನವೊಂದು ರನ್‍ವೇನಲ್ಲಿ ಮುಗ್ಗರಿಸಿದ ಘಟನೆ ರಿಯಾದ್‍ನ ಏರ್ಪೋರ್ಟ್’ನಲ್ಲಿ ಸಂಭವಿಸಿದೆ. ಈ ಘಟನೆಯಲ್ಲಿ ವಿಮಾನದಲ್ಲಿದ್ದ 150 ಮಂದಿ ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ. ರಿಯಾದ್ ವಿಮಾನನಿಲ್ದಾಣದಿಂದ ಮುಂಬೈಗೆ ತೆರಳಲು ರನ್‍ವೇನಲ್ಲಿ ಸಾಗುತ್ತಿದ್ದ ವಿಮಾನ(9ಡಬ್ಲ್ಯು523) ದೋಷಪೂರಿತ ಟೇಕಾಫ್‍ನಿಂದ ಮುಗ್ಗರಿಸಿತು. 143 ಪ್ರಯಾಣಿಕರು ಮತ್ತು 7 ಸಿಬ್ಬಂದಿ ಇದರಲ್ಲಿದ್ದರು. ಈ ಘಟನೆಯಲ್ಲಿ ಯಾವ ಪ್ರಯಾಣಿಕರಿಗೂ ಗಾಯಗಳಾಗಿಲ್ಲ. ಎಲ್ಲರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು ಎಂದು ಏರ್‍ಲೈನ್ಸ್ ಸಂಸ್ಥೆ ಟ್ವಿಟರ್‍ನಲ್ಲಿ ತಿಳಿಸಿದೆ.  ವಿಮಾನ ಮೇಲೇರುವಾಗ ಹಠಾತ್ ವೇಗೋತ್ಕರ್ಷದಿಂದ ಸ್ಕಿಡ್ ಆಯಿತು. ಅದೃಷ್ಟವಶಾತ್ ಯಾರಿಗೂ ಗಾಯಗಳಾಗಲಿಲ್ಲ. ಈ ಘಟನೆ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Facebook Comments

Sri Raghav

Admin