ಅಸ್ಸಾಂ ಎನ್‌ಆರ್‌ಸಿ : ಲೋಕಸಭೆಯಲ್ಲಿ ಟಿಎಂಸಿ ಪ್ರತಿಭಟನೆ, ಸದನ ಮುಂದೂಡಿಕೆ

ಈ ಸುದ್ದಿಯನ್ನು ಶೇರ್ ಮಾಡಿ

Parliament
ನವದೆಹಲಿ, ಆ.3- ಅಸ್ಸೊಂನಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಅಂತಿಮ ಕರಡು ಪಟ್ಟಿಯಲ್ಲಿ 40ಲಕ್ಷಕ್ಕೂ ಹೆಚ್ಚು ಜನರ ಹೆಸರು ಕೈ ಬಿಟ್ಟಿರುವ ಪ್ರಕರಣ ಮತ್ತು ಸಿಲ್‍ಚಾರ್ ವಿಮಾನ ನಿಲ್ದಾಣದಲ್ಲಿ ಸಂಸದರ ಬಂಧನ  ಪ್ರಕರಣ ಲೋಕಸಭೆಯಲ್ಲಿಂದು ಪ್ರತಿಧ್ವನಿಸಿತು. ತೃಣಮೂಲ ಕಾಂಗ್ರೆಸ್ ನಾಯಕರು ಈ ವಿಷಯವನ್ನು ಪ್ರಸ್ತಾಪಿಸಿ ಪ್ರತಿಭಟನೆ ನಡೆಸಿದ್ದರಿಂದ ಕೆಲ ಕಾಲ ಸದನವನ್ನು ಮುಂದೂಡಲಾಯಿತು.

ಎನ್‍ಆರ್‍ಸಿ ನಂತರ ಅಸ್ಸೊಂನಲ್ಲಿ ಉದ್ಬವಿಸಿರುವ ಪರಿಸ್ಥಿತಿಯನ್ನು ಅವಲೋಕಿಸಲು ತೆರಳುತ್ತಿದ್ದ ಟಿಎಂಸಿ ನಿಯೋಗವನ್ನು ಸಿಲ್‍ಚಾರ್ ವಿಮಾನ ನಿಲ್ದಾಣದಲ್ಲಿ ತಡೆದು ನಿಲ್ಲಿಸಿದ ಬಗ್ಗೆ ಪಕ್ಷದ ಸದಸ್ಯರು ಸದನದಲ್ಲಿ ಗದ್ದಲ ನಡೆಸಿ ಕೋಲಾಹಲದ ವಾತಾವರಣ ಸೃಷ್ಟಿಸಿದರು. ಇದರಿಂದಾಗಿ ಸಭಾಧ್ಯಕ್ಷೆ ಸುಮಿತ್ರಾ ಮಹಾಜನ್ ಸದನವನ್ನು ಕೆಲ ಕಾಲ ಮುಂದೂಡಿದರು.

Facebook Comments

Sri Raghav

Admin