ಕೆಲಸಕ್ಕೆ ಸೇರಿದ ತಿಂಗಳಲ್ಲೇ ಮನೆ ದೋಚಿದ್ದ ಚಾಲಾಕಿ ಕಳ್ಳಿ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

Lady-Robber
ಬೆಂಗಳೂರು, ಆ.3- ಮನೆಕೆಲಸಕ್ಕೆ ಸೇರಿದ ಕೇವಲ ಒಂದು ತಿಂಗಳಲ್ಲೇ 150 ಗ್ರಾಂ ಚಿನ್ನಾಭರಣ, 1.9 ಕೆಜಿ ಬೆಳ್ಳಿ ವಸ್ತುಗಳನ್ನು ದೋಚಿದ್ದ ಚಾಲಾಕಿ ಮನೆಕೆಲಸದಾಕೆಯನ್ನು ಶ್ರೀರಾಮಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೂಡಲಪಾಳ್ಯದ ನಿವಾಸಿ ಕಮಲ ಅಲಿಯಾಸ್ ಕಮಲಾಬಾಯಿ (26) ಬಂಧಿತ ಮನೆಕೆಲಸದಾಕೆ. ಶ್ರೀರಾಮಪುರದ 3ನೆ ಕ್ರಾಸ್‍ನಲ್ಲಿರುವ ಸತ್ಯನಾರಾಯಣ ಎಂಬುವವರ ಮನೆಯಲ್ಲಿ ಕೇವಲ ಒಂದು ತಿಂಗಳ ಹಿಂದೆ ಅಷ್ಟೇ ಮನೆ ಕೆಲಸಕ್ಕೆ ಈಕೆ ಸೇರಿಕೊಂಡಿದ್ದಳು.

ಸತ್ಯನಾರಾಯಣ ಅವರ ಪತ್ನಿ ಅನಾರೋಗ್ಯದ ನಿಮಿತ್ತ ಆಸ್ಪತ್ರೆಗೆ ದಾಖಲಾಗಿದ್ದರು. ಈ ಸಂದರ್ಭದಲ್ಲಿ ಮನೆ ಕೆಲಸಕ್ಕೆ ಬರುತ್ತಿದ್ದ ಈಕೆ ಮನೆಯಲ್ಲಿದ್ದ ಚಿನ್ನಾಭರಣಗಳನ್ನು ಕಳ್ಳತನ ಮಾಡಿದ್ದಳು. ಮನೆಯಲ್ಲಿ ಆಭರಣ ಕಳ್ಳತನವಾಗಿದ್ದ ಬಗ್ಗೆ ಶ್ರೀರಾಮಪುರ ಠಾಣೆಯಲ್ಲಿ ದೂರು ದಾಖಲಾಗಿತ್ತು. ತನಿಖೆ ಕೈಗೊಂಡ ಪೊಲೀಸರು ಮನೆ ಕೆಲಸಕ್ಕೆ ಬರುತ್ತಿದ್ದ ಈಕೆಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಆಭರಣ ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದಾಳೆ. ಈಕೆಯಿಂದ 150 ಗ್ರಾಂ ಚಿನ್ನಾಭರಣ, 1.9 ಕೆಜಿ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.

Facebook Comments

Sri Raghav

Admin