ರಷ್ಯಾ ಕಾಪ್ಟರ್’ಗಳ ಪತನ, 18 ಮಂದಿ ದುರ್ಮರಣ

ಈ ಸುದ್ದಿಯನ್ನು ಶೇರ್ ಮಾಡಿ

Helicapter

ಮಾಸ್ಕೋ, ಆ.4- ಉತ್ತರ ಸರ್ಬಿಯಾದಲ್ಲಿ ಎರಡು ಹೆಲಿಕಾಪ್ಟರ್‍ಗಳ ನಡುವೆ ಸಂಭವಿಸಿದ ಡಿಕ್ಕಿಯಲ್ಲಿ 18 ಮಂದಿ ಮೃತಪಟ್ಟಿರುವ ಘಟನೆ ಇಂದು ಮುಂಜಾನೆ ಸಂಭವಿಸಿದೆ. ಮೂವರು ಸಿಬ್ಬಂದಿ ಮತ್ತು 15 ಪ್ರಯಾಣಿಕರಿದ್ದ ಎಂಐ-8 ಹೆಲಿಕಾಪ್ಟರ್  ಯಂತ್ರೋಪಕರಣವನ್ನು ಸಾಗಿಸುತ್ತಿದ್ದ ಮತ್ತೊಂದು ಹೆಲಿಕಾಪ್ಟರ್‍ಗೆ ಡಿಕ್ಕಿ ಹೊಡೆಯಿತು ಎಂದು ರಷ್ಯಾ ಸಾರಿಗೆ ಸಚಿವಾಲಯ ತಿಳಿಸಿದೆ. ಹೆಲಿಕಾಪ್ಟರ್ ಮೇಲೇರುವ ಸಂದರ್ಭದಲ್ಲೇ ಈ ದುರ್ಘಟನೆ ಸಂಭವಿಸಿದೆ. ಯಂತ್ರೋಪಕರಣ ಸಾಗಿಸುತ್ತಿದ್ದ ಹೆಲಿಕಾಪ್ಟರ್ ಅಪಾಯದಿಂದ ಪಾರಾಗಿದ್ದು ಸುರಕ್ಷಿತವಾಗಿ ಭೂಸ್ಪರ್ಶ ಮಾಡಿದೆ.

Facebook Comments

Sri Raghav

Admin