ಆ್ಯಂಬುಲೆನ್ಸ್‍ನಲ್ಲೇ ಅವಳಿ ಮಕ್ಕಳಿಗೆ ಜನ್ಮ ನೀಡಿದ ತಾಯಿ..

ಈ ಸುದ್ದಿಯನ್ನು ಶೇರ್ ಮಾಡಿ

Dellivery-in-ambulkence
ಜಗಳೂರು, ಆ.4- ಹೆರಿಗೆ ನೋವಿನಿಂದ ನರಳಾಡುತ್ತಿದ್ದ ಗರ್ಭಿಣಿಗೆ ಆ್ಯಂಬುಲೆನ್ಸ್‍ನಲ್ಲಿ ಹೆರಿಗೆ ಮಾಡಿಸಿ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಮಾನವೀಯತೆ ಮೆರೆದಿದ್ದಾರೆ.
ತಾಲ್ಲೂಕಿನ ಧರ್ಮಾಪುರ ಎಂಬ ಗ್ರಾಮದ ಆಂಜನಮ್ಮ ಎಂಬುವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು , ಕೂಡಲೇ ಅವರನ್ನು 108 ಆ್ಯಂಬುಲೆನ್ಸ್‍ನಲ್ಲಿ ದಾವಣಗೆರೆ ಆಸ್ಪತ್ರೆಗೆ ಕರೆದೊಯ್ಯುವಾಗ ಮಹಿಳೆಗೆ ವಿಪರೀತ ನೋವು ಕಾಣಿಸಿಕೊಂಡಿದ್ದರಿಂದ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಮಾರ್ಗ ಮಧ್ಯೆ ಹೆರಿಗೆ ಮಾಡಿಸಿದ್ದಾರೆ.
ಮಹಿಳೆ ಅವಳಿ-ಜವಳಿ ಮಕ್ಕಳಿಗೆ ಜನ್ಮ ನೀಡಿದ್ದು , ಒಂದು ಗಂಡು ಇನ್ನೊಂದು ಹೆಣ್ಣು ಮಗುವಾಗಿದೆ. ಅವಳಿ ಮಕ್ಕಳು ಆರೋಗ್ಯದಿಂದಿದ್ದು ನಂತರ ದಾವಣಗೆರೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆರೋಗ್ಯ ಇಲಾಖೆ ಸಿಬ್ಬಂದಿಗಳಾದ ಸುರೇಶ್, ರುದ್ರಪ್ಪ ಎನ್ನುವ ಸಿಬ್ಬಂದಿಗಳು ಮಹಿಳೆಗೆ ಹೆರಿಗೆ ಮಾಡಿಸಿದ್ದು ಇವರ ಮಾನವೀಯತೆಗೆ ಗ್ರಾಮವೇ ಶ್ಲಾಘನೆ ವ್ಯಕ್ತಪಡಿಸಿದೆ.

Facebook Comments

Sri Raghav

Admin