ಪೋಲೀಸರ ಎನ್’ಕೌಂಟರ್’ನಿಂದ ತಪ್ಪಿಸಿಕೊಂಡು ಗ್ರಾಮಕ್ಕೆ ಬಂದವನನ್ನು ಥಳಿಸಿ ಕೊಂದ ಗ್ರಾಮಸ್ಥರು..!

ಈ ಸುದ್ದಿಯನ್ನು ಶೇರ್ ಮಾಡಿ

killed
ತುರ(ಮೇಘಾಲಯ), ಆ.4- ಈಶಾನ್ಯ ರಾಜ್ಯ ಮೇಘಾಲಯದ ಗ್ರಾಮವೊಂದರಲ್ಲಿ ಉದ್ರಿಕ್ತ ಜನರ ಗುಂಪೊಂದು ಉಗ್ರಗಾಮಿಯೊಬ್ಬನನ್ನು ಥಳಿಸಿ ಕೊಂದಿರುವ ಘಟನೆ ನಿನ್ನೆ ನಡೆದಿದೆ.  ಬೋರೊಲ್ಯಾಂಡ್ ರಾಷ್ಟ್ರೀಯ ಪ್ರಜಾಸತ್ತಾತ್ಮಕ ರಂಗ(ಎನ್‍ಡಿಎಫ್‍ಬಿ) ಸದಸ್ಯ ಮತ್ತು ಉಗ್ರಗಾಮಿ ಐಟಾ ಬೊರೊ ಗ್ರಾಮಸ್ಥರ ಆಕ್ರೋಶಕ್ಕೆ ಬಲಿಯಾಗಿದ್ದಾರೆ. ಮೇಘಾಲಯದ ಈಸ್ಟ್ ಗಾರೋ ಪರ್ವತ ಜಿಲ್ಲಾ ಪ್ರದೇಶದ ಬರಿಂಗ್ರೆ ಗ್ರಾಮದಲ್ಲಿ ಈ ಘಟನೆ ನಡೆದಿರುವುದಾಗಿ ಪೊಲೀಸರು ಇಂದು ತಿಳಿಸಿದ್ದಾರೆ.

ತರಸಿನ್ ಪ್ರದೇಶದಲ್ಲಿ ನಿನ್ನೆ ಎನ್‍ಕೌಂಟರ್ ವೇಳೆ ಪೊಲೀಸ್ ಗುಂಡೇಟಿನಿಂದ ಪಾರಾಗಿ ಅಲ್ಲಿಂದ ತಪ್ಪಿಸಿಕೊಂಡು ಗ್ರಾಮದೊಳಗೆ ಅವಿತಿಟ್ಟುಕೊಳ್ಳಲು ಐಟಾ ಬೋರೋ ಬಂದಿದ್ದ. ರೊಂಗ್‍ಜೆಂಗ್ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರದೇಶದಲ್ಲಿ ಈತ ಗ್ರಾಮಸ್ಥರಿಗೆ ಸಿಕ್ಕಿಬಿದ್ದ. ಆತನನ್ನು ಸ್ಥಳೀಯರು ಮನಸೋ ಇಚ್ಛೆ ಥಳಿಸಿ ಕೊಂದರು ಎಂದು ಪೊಲೀಸ್ ವರಿಷ್ಠಾಧಿಕಾರಿ ಆರ್ ಮೊಮಿನ್ ತಿಳಿಸಿದ್ದಾರೆ.  ನಿನ್ನೆ ಪೊಲೀಸರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಎನ್‍ಡಿಎಫ್‍ಬಿ ಸಂಘಟನೆಯ ಮತ್ತೊಬ್ಬ ಉಗ್ರ ಹತನಾಗಿದ್ದಾನೆ.

Facebook Comments

Sri Raghav

Admin