ಸಾವಿನಲ್ಲೂ ಒಂದಾದ ವೃದ್ಧ ದಂಪತಿ

ಈ ಸುದ್ದಿಯನ್ನು ಶೇರ್ ಮಾಡಿ

dead-cupals

ಮಳವಳ್ಳಿ, ಆ.4- ಕಷ್ಟ-ಸುಖ ಏನೇ ಬರಲಿ ಪ್ರತೀ ಕ್ಷಣವೂ ನಿನ್ನ ಜತೆ ಇರುತ್ತೇನೆ ಅಂತ ಸಪ್ತಪದಿ ತುಳಿಯುತ್ತಾರೆ. ಈ ಮಾತು ಎಷ್ಟು ಸತ್ಯವೋ ಗೊತ್ತಿಲ್ಲ. ಆದರೆ, ಇಲ್ಲಿ ವೃದ್ಧ ದಂಪತಿ ಸಾವಿನಲ್ಲೂ ಒಂದಾದ ಘಟನೆ ವರದಿಯಾಗಿದೆ. ತಾಲೂಕಿನ ಹುಲ್ಲಳ್ಳಿ ಗ್ರಾಮದ ಹೊಂಬೇಗೌಡ (70) ಇವರಿಗೆ ಎದೆನೋವು ಕಾಣಿಸಿಕೊಂಡಿದ್ದು, ಕೂಡಲೇ ಅವರನ್ನು ಮಳವಳ್ಳಿ ಸಾರ್ವಜನಿಕ ಆಸ್ಪತ್ರೆಗೆ ಕರೆತರುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಈ ವಿಷಯ ತಿಳಿದ ಕೂಡಲೇ ಪತ್ನಿ ಮಂಜಮ್ಮ (60)ರಿಗೂ ಹೃದಯಾಘಾತವಾಗಿದ್ದು, ಆಕೆಯೂ ಸಹ ಮೃತಪಟ್ಟಿದ್ದಾರೆ.  ಗಂಡ-ಹೆಂಡತಿ ಇಬ್ಬರೂ ಒಂದೇ ದಿನವೇ ಸಾವನ್ನಪ್ಪಿದ್ದಾರೆ. ಇವರ ದಾಂಪತ್ಯ ಜೀವನ ಎಷ್ಟರ ಮಟ್ಟಿಗೆ ಇತ್ತು ಎಂಬುದು ಇದರಿಂದಲೇ ತಿಳಿಯುತ್ತದೆ ಎಂದು ಗ್ರಾಮಸ್ಥರು ಮಾತನಾಡಿಕೊಳ್ಳುತ್ತಿದ್ದರು. ನಮ್ಮ ತಂದೆ-ತಾಯಿ ಬಹಳ ಅನ್ಯೋನ್ಯವಾಗಿದ್ದರು. ಒಬ್ಬರ ಕಷ್ಟವನ್ನು ಒಬ್ಬರು ಅರ್ಥ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಅವರ ಸಾವು ನಮಗೆ ಆಘಾತ ತಂದಿದೆ ಎಂದು ಮೃತರ ಮಕ್ಕಳು ಕಂಬನಿ ಮಿಡಿದಿದ್ದಾರೆ.

Facebook Comments

Sri Raghav

Admin