ಅಂತರಿಕ್ಷಕ್ಕೆ ಪ್ರಥಮ ವಾಣಿಜ್ಯ ರಾಕೆಟ್‍ಯಾನ, ಭಾರತದ ಸುನಿತಾ ಸೇರಿ 9 ಖಗೋಳಯಾತ್ರಿಕರಿಗೆ ಸ್ಥಾನ..!

ಈ ಸುದ್ದಿಯನ್ನು ಶೇರ್ ಮಾಡಿ

Sunita-williams
ಹೌಸ್ಟನ್, ಆ.4-ವಾಣಿಜ್ಯ ರಾಕೆಟ್‍ಗಳು ಮತ್ತು ಕ್ಯಾಪ್ಸುಲ್‍ಗಳೊಂದಿಗೆ ಬಾಹ್ಯಾಕಾಶಕ್ಕೆ ಪ್ರಥಮ ಬಾರಿ ಯಾನ ಕೈಗೊಳ್ಳುವ ಒಂಭತ್ತು ಖಗೋಳ ಯಾತ್ರಿಕರ ತಂಡದಲ್ಲಿ ಭಾರತೀಯ ಸಂಜಾತೆ ಸುನಿತಾ ವಿಲಿಯಮ್ಸ್ ಸ್ಥಾನ ಪಡೆದಿದ್ದಾರೆ.  ಮುಂದಿನ ವರ್ಷದಿಂದ ಆರಂಭವಾಗುವ ಈ ವಾಣಿಜ್ಯ ಬಾಹ್ಯಾಕಾಶ ಯಾತ್ರೆಯಲ್ಲಿ ಸುನಿತಾ ಅವರ ಹೆಸರನ್ನೂ ಅಮೆರಿಕ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ-ನಾಸಾ ಸೇರಿಸಿರುವುದು ಭಾರತೀಯರ ಹೆಮ್ಮೆಗೆ ಕಾರಣವಾಗಿದೆ.

ಖಗೋಳ ನೌಕೆಯ ಅಭಿವೃದ್ಧಿ ಮತ್ತು ನಿರ್ಮಾಣಕ್ಕಾಗಿ ಹಲವು ವರ್ಷಗಳ ಶ್ರಮದ ನಂತರ ನ್ಯಾಷನಲ್ ಏರೋನಾಟಿಕ್ಸ್ ಅಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್ (ನಾಸಾ) ಈಗ ವಾಣಿಜ್ಯ ಗಗನನೌಕೆಯಲ್ಲಿ ಸುನಿತಾ ವಿಲಿಯಮ್ಸ್ ಸೇರಿದಂತೆ ನವ ಖಗೋಳಯಾತ್ರಿಗಳನ್ನು ಅಂತರಿಕ್ಷಕ್ಕೆ ರವಾನಿಸಲಿದೆ.  ಬೋಯಿಂಗ್ ಕಂಪನಿ ಮತ್ತು ಸ್ಪೇಸ್-ಎಕ್ಸ್‍ನಿಂದ ನಿರ್ಮಿಸಿ ನಿರ್ವಹಣೆ ಮಾಡಲಾಗುವ ಹೊಸ ವಾಣಿಜ್ಯ ವ್ಯೂಮನೌಕೆ ಮೊದಲ ಸಿಬ್ಬಂದಿ ಹಾರಾಟ ಪರೀಕ್ಷೆಗಳು 9 ಖಗೋಳಯಾನಿಗಳೊಂದಿಗೆ ಆರಂಭವಾಗಲಿದೆ ಎಂದು ಬಾಹ್ಯಾಕಾಶ ಸಂಸ್ಥೆ ನಿನ್ನೆ ಅಧಿಕೃತವಾಗಿ ಪ್ರಕಟಿಸಿದೆ.

ಸುನಿತಾ ವಿಲಿಯಮ್ಸ್(52) ಅವರೊಂದಿಗೆ ನಾಸಾದ ಖಗೋಳ ವಿಜ್ಞಾನಿಗಳಾದ ಜೋಶ್ ಕ್ಯಾಸಾಡ, ರಾಬರ್ಟ್ ಬೆನ್‍ಹಿನ್, ಡಗ್ಲಸ್ ಹರ್ಲೆ, ಎರಿಕ್ ಬೋಯಿ, ನಿಕೋಲ್ ಮ್ಯಾನ್, ಕ್ರಿಸ್ಟೋಫರ್ ಫರ್‍ಗುಸೆನ್, ವಿಕ್ಟರ್ ಗ್ಲೋವರ್ ಹಾಗೂ ಮೈಕೆಲ್ ಹಾಪ್‍ಕಿನ್ಸ್ ಈ ಯಾನದಲ್ಲಿ ಪಾಲ್ಗೊಳ್ಳುವರು.  ಇದು ಭವಿಷ್ಯದ ಅಂತರಿಕ್ಷ ವಾಣಿಜ್ಯ ಯಾನಕ್ಕೆ ದೊಡ್ಡ ಮಟ್ಟದಲ್ಲಿ ನೆರವಾಗಲಿದೆ. ಮುಂದಿನ ವಾಣಿಜ್ಯ ಸಿಬ್ಬಂದಿ ಖಗೋಳ ಯಾನಿಗಳು ಸ್ಪೆಸ್-ಎಕ್ಸ್ ಮತ್ತು ಬೋಯಿಂಗ್ ಸ್ಪೇಸ್‍ನಿಂದ ನಿರ್ಮಾಣ ಮಾಡಲಾಗುವ ಸಹಭಾಗಿತ್ವ ವಾಹನಗಳಲ್ಲಿ ನಭೋ ಮಂಡಲಕ್ಕೆ ಪ್ರಯಾಣ ಬೆಳೆಸುವರು ಎಂದು ನಾಸಾ ಟ್ವೀಟ್‍ನಲ್ಲಿ ತಿಳಿಸಿದೆ.

Facebook Comments

Sri Raghav

Admin