ಡ್ರಗ್ಸ್ ನೀಡಿ ಬಾಲಕಿಯನ್ನು ವೇಶ್ಯಾವಾಟಿಕೆಗೆ ದೂಡಿದ್ದ ಜಾಲ ಪತ್ತೆ

ಈ ಸುದ್ದಿಯನ್ನು ಶೇರ್ ಮಾಡಿ

drugs

ಲಖ್ನೋ,ಆ.4- ಮಹಿಳೆಯೊಬ್ಬಳು ಹುಡುಗಿಯರಿಗೆ ಡ್ರಗ್ಸ್ ನೀಡಿ ವೇಶ್ಯಾವಾಟಿಕೆ ನಡೆಸುತ್ತಿದ್ದಾರೆ ಎಂದು ಸಂತ್ರಸ್ತೆ ಬಾಲಕಿಯೊಬ್ಬಳು ಲಲಿತ್ಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.  ಮಹಿಳೆ ಕಪಿಮುಷ್ಠಿಯಲ್ಲಿದ್ದ ಬಾಲಕಿ ಅಲ್ಲಿಂದ ತಪ್ಪಿಸಿಕೊಂಡು ಬಂದು ಲಲಿತ್ಪುರ ಪೊಲೀಸರಿಗೆ ವಿಷಯ ತಿಳಿಸಿದ್ದಾಳೆ. ಪೊಲೀಸರು ಮಹಿಳೆಯ ಹುಡುಕಾಟದಲ್ಲಿ ತೊಡಗಿದ್ದಾರೆ. ಬಾಲಕಿಯನ್ನು ಅಪಹರಿಸಿದ್ದ ಮಹಿಳೆ ಸುಮಾರು ಒಂದು ತಿಂಗಳಿಂದ ಉತ್ತರ ಪ್ರದೇಶದ ಕೊತ್ವಾಲಿಯಲ್ಲಿ ಬಂಧಿಸಿಟ್ಟಿದ್ದಳಂತೆ. ಮಹಿಳೆ ಕುಡಿಯುವ ನೀರಿನಲ್ಲಿ ನಶೆ ಪದಾರ್ಥ ಹಾಕಿ ಪುರುಷರಿಗೆ ಒಪ್ಪಿಸುತ್ತಿದ್ದಳು. ಆಕೆಯ ಮಾತು ಕೇಳದ ಹುಡುಗಿಯರನ್ನು ಮಾರಾಟ ಮಾಡುತ್ತಿದ್ದಳು ಎಂದು ಬಾಲಕಿ ತಿಳಿಸಿದ್ದಾಳೆ.

ಮಹಿಳೆ ಹುಡುಗಿಯರ ವಿಡಿಯೋ ಕೂಡ ಮಾಡಿದ್ದಳಂತೆ. ವೇಶ್ಯಾವಾಟಿಕೆಗೆ ಒಲ್ಲೆ ಎನ್ನುವವರಿಗೆ ವಿಡಿಯೋ ತೋರಿಸಿ ಬ್ಲಾಕ್ಮ್ೀಲ್ ಮಾಡುತ್ತಿದ್ದಳು ಎಂದು ಬಾಲಕಿ ದೂರಿನಲ್ಲಿ ತಿಳಿಸಿದ್ದಾರೆ. ಬಾಲಕಿ ನೀಡಿದ ದೂರಿನ ಮೇರೆಗೆ ಪೊಲೀಸರು ಮಹಿಳೆ ಮನೆ ಮೇಲೆ ದಾಳಿ ನಡೆಸಿದ್ದಾರೆ. ಆದ್ರೆ ಮಹಿಳೆ ತಪ್ಪಿಸಿಕೊಂಡಿದ್ದಾಳೆ. ಮೂರ್ನಾಲ್ಕು ಮೊಬೈಲ್, ಬಾಲಕಿಯರ ವಿಡಿಯೋ ಸಿಕ್ಕಿದೆ.

Facebook Comments

Sri Raghav

Admin