ಲವ್ ಸೆಕ್ಸ್ ದೋಖಾ : ಮಹಿಳೆ ಆತ್ಮಹತ್ಯೆ, ಆರೋಪಿ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

Love-sex-dokha-arrested
ಬೆಂಗಳೂರು, ಆ.4- ಮದುವೆಯಾಗುವುದಾಗಿ ನಂಬಿಸಿ ಯುವತಿಯನ್ನು ಲೈಂಗಿಕವಾಗಿ ಬಳಸಿಕೊಂಡು ಆಕೆಯ ಆತ್ಮಹತ್ಯೆಗೆ ಕಾರಣನಾಗಿದ್ದ ಆರೋಪಿ ರವಿ ಕಿರಣ್ ಎಂಬಾತನನ್ನು ಚಂದ್ರಾಲೇಔಟ್ ಪೊ ಲೀಸರು ಬಂಧಿಸಿದ್ದಾರೆ. ವಂಚಿಸಿದ ಪ್ರಿಯಕರನ ವಿರುದ್ಧ ದೂರು ಕೊಟ್ಟರೂ ಪೊ ಲೀಸರು ಆತನನ್ನು ಬಂಧಿಸಿಲ್ಲ ಎಂದು ನೊಂದುಕೊಂಡಿದ್ದ ಬೈರವೇಶ್ವರ ನಗರ ನಿವಾಸಿ ಮಂಜುಳಾ (23) ನಿನ್ನೆ ಮಧ್ಯಾಹ್ನ ಮನೆಯಲ್ಲೇ  ಆತ್ಮಹತ್ಯೆ ಮಾಡಿಕೊಂಡಿದ್ದರು.

ಆತ್ಮಹತ್ಯೆಗೆ ಮುನ್ನ ಡೆಟ್ ನೋಟ್ ಬರೆದಿಟ್ಟಿದ್ದ ಮಂಜುಳಾ ಅವರು, ನನಗೆ ವಂಚಿಸಿದ ರವಿಕಿರಣ್‍ನನ್ನು ನೀವು ಬಂಧಿಸಿಲ್ಲ , ನಾನು ಸಾಯುತ್ತಿದ್ದೇನೆ, ಇನ್ನಾದರೂ ಆತನನ್ನು ಬಂಧಿಸಿ ಕಾನೂನು ಪ್ರಕಾರ ಶಿಕ್ಷೆ ಕೊಡಿಸಿ ಎಂದು ಚಂದ್ರಾಲೇಔಟ್ ಪೊ ಲೀಸರಿಗೆ ಮನವಿ ಮಾಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಚಂದ್ರಾಲೇಔಟ್ ಪೊ ಲೀಸರು, ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.

ವಾಣಿಜ್ಯ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದ ಮಂಜುಳಾ ಹಾಗೂ ದೊರೆಸ್ವಾಮಿಪಾಳ್ಯದ ರವಿಕಿರಣ್ ನಡುವೆ ಪ್ರೀತಿ ಬೆಳೆದಿತ್ತು. ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ರವಿಕಿರಣ್, ಮದುವೆಯಾಗುವುದಾಗಿ ನಂಬಿಸಿ ದೈಹಿಕವಾಗಿ ಬಳಸಿಕೊಂಡು, ಮದುವೆಯಾಗದೆ ವಂಚಿಸಿದ್ದ ಎಂದು ಪೊ ಲೀಸರು ತಿಳಿಸಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇಂದು ಮಂಜುಳಾ ಅವರ ಶವಪರೀಕ್ಷೆ ನಡೆಸಿ ವಾರಸುದಾರರಿಗೆ ನೀಡಲಾಗಿದೆ.

Facebook Comments