ಫಿಜಿ ಇಂಟರ್‌ನ್ಯಾಷನಲ್‌ ಗಾಲ್ಫ್ ಪ್ರಶಸ್ತಿ ಗೆದ್ದ ಗಗನ್‍ಜೀತ್‍

ಈ ಸುದ್ದಿಯನ್ನು ಶೇರ್ ಮಾಡಿ

Golf-Player--Gaganjeet-Bhul
ನಾಟಡೊಲಾ ಬೇ(ಫಿಜಿ), ಆ. 5-ಭಾರತದ ಪ್ರತಿಭಾವಂತ ಗಾಲ್ಫ್ ಆಟಗಾರ ಗಗನ್‍ಜೀತ್ ಭುಲ್ಲರ್ ಫಿಜಿ ಇಂಟರ್‍ನ್ಯಾಷನಲ್ ಪ್ರಶಸ್ತಿ ಗೆದ್ದಿದ್ದಾರೆ. ಇದು ಐರೋಪ್ಯ ಪ್ರವಾಸದ ಗಾಲ್ಫ್ ಟೂರ್ನಿಯಲ್ಲಿ ಗಗನ್ ಗೆಲ್ಲುತ್ತಿರುವ ಪ್ರಥಮ ಟೈಟಲ್ ಆಗಿದೆ.  ದಕ್ಷಿಣ ಫೆಸಿಫಿಕ್ ದ್ವೀಪರಾಷ್ಟ್ರ ಫಿಜಿಯ ನಾಟಡೊಲಾ ಕೊಲ್ಲಿಯಲ್ಲಿ ನಡೆದ ಅಂತಾರಾಷ್ಟ್ರೀಯ ಗಾಲ್ಫ್ ಪಂದ್ಯದ ಅಂತಿಮ ಸುತ್ತಿನಲ್ಲಿ 30 ವರ್ಷದ ಗಗನ್‍ಜೀತ್ ಭುಲ್ಲರ್ ಸಿಕ್ಸ್ ಅಂಡರ್ 66 ಗುರಿ ತಲುಪಿ ಪ್ರಶಸ್ತಿ ಮುಡಿಗೇರಿಸಿದರು.
ಈ ಗೆಲುವಿನೊಂದಿಗೆ ಏಷ್ಯನ್ ಗಾಲ್ಫ್ ಪ್ರವಾಸ ಅತ್ಯಂತ ಯಶಸ್ವಿ ಭಾರತೀಯ ಆಟಗಾರ ಹಾಗೂ ಆಸ್ಟ್ರೇಲಿಯ ಪ್ರವಾಸದಲ್ಲಿ ಈ ಪ್ರಶಸ್ತಿ ಗಳಿಸಿದ ಪ್ರಥಮ ಭಾರತೀಯ ಪಟು ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ಅಂತಿಮ ಸುತ್ತಿನಲ್ಲಿ ಇವರು ಆಸ್ಟ್ರೇಲಿಯಾದ ಪ್ರಬಲ ಆಟಗಾರ ಅಂಥೋನಿ ಕ್ವಾಯೆಲ್ ಅವರನ್ನು ನಿರ್ಣಾಯ ಹಣಾಹಣಿಯಲ್ಲಿ ಮಣಿಸುವಲ್ಲಿ ಸಫಲರಾದರು.
ಗಗನ್‍ಜೀತ್ ಐದು ಬರ್ಡಿಗಳು, ಒಂದು ಈಗಲ್ ಮತ್ತು ಒಂದು ಬೋಗಿ ಮೂಲಕ ಗಾಲ್ಫ್ ಚೆಂಡಿನ ಮೇಲೆ ನಿಯಂತ್ರಣ ಸಾಧಿಸಿ ಉತ್ತಮ ಪ್ರದರ್ಶನ ತೋರಿದರು. ಇದರೊಂದಿಗೆ ನಾಲ್ಕು ದಿನಗಳ ಪಂದ್ಯದಲ್ಲಿ ಒಟ್ಟು 14-ಅಂಡರ್ 274 ಸ್ಕೋರ್ ದಾಖಲಿಸಿ ಪ್ರಶಸ್ತಿಗೆ ಮುತ್ತಿಟ್ಟರು.  ಒಂದು ಸ್ಟ್ರೋಕ್ ಪರಾಭವದೊಂದಿಗೆ ಆಸ್ಟ್ರೇಲಿಯಾದ ಅಂಥೋನಿ ಎರಡನೇ ಸ್ಥಾನಕ್ಕೆ ಸಮಾಧಾನಪಟ್ಟುಕೊಳ್ಳಬೇಕಾಯಿತು.ದಕ್ಷಿಣ ಆಫ್ರಿಕಾದ ಎರ್ನಿ ಎಲ್ಸ್ ಮತ್ತು ಆಸ್ಟ್ರೇಲಿಯಾದ ಬೆನ್ ಕ್ಯಾಂಪ್‍ಬೆಲ್ ಮೂರನೇ ಸ್ಥಾನ ಹಂಚಿಕೊಂಡರು.

Facebook Comments

Sri Raghav

Admin