ನಿಮ್ಮ ಬದುಕನ್ನು ಆನಂದಮಯವಾಗಿ ಸಂಭ್ರಮಿಸಲು ಇವುಗಳನ್ನು ಅನುಸರಿಸಿ..!

ಈ ಸುದ್ದಿಯನ್ನು ಶೇರ್ ಮಾಡಿ

Article-1

ಮನುಷ್ಯ ಹುಟ್ಟಿದಾಗ ಹೆಸರು ಇರುವುದಿಲ್ಲ ಬರೀ ಉಸಿರು ಇರುತ್ತದೆ. ಸತ್ತಾಗ ಉಸಿರು ಇರುವುದಿಲ್ಲ ಬರೀ ಹೆಸರು ಇರುತ್ತದೆ. ಈ ಉಸಿರು ಮತ್ತು ಹೆಸರಿನ ಅಂತರವೇ ಜೀವನ. ಈ ಜೀವನ ಸಾರ್ಥಕ ಮತ್ತು ಪರಿಪೂರ್ಣವಾಗಬೇಕಾದರೆ ಸ್ವಾರ್ಥ ರಹಿತ ಸೇವೆ ಮಾಡಬೇಕು. ನಾನು ನನ್ನ ಸಂಸಾರ, ನನ್ನ ವ್ಯವಹಾರ ಇದೆಲ್ಲ ದೊಡ್ಡದಲ್ಲ. ಇದನ್ನು ಮೀರಿ ಸಮಾಜ ಸೇವೆ, ಪುಣ್ಯ ಕಾರ್ಯಗಳನ್ನು ಮಾಡುವುದರಿಂದ ತೃಪ್ತಿ ಪಡೆಯಬಹುದು. ಹೆತ್ತ ತಾಯಿಯ ಋಣ, ಹೊತ್ತ ನಾಡಿನ ಋಣಗಳನ್ನು ನಾವು ತೀರಿಸಲೇಬೇಕು.

ಆಧುನಿಕ ಯುಗದಲ್ಲಿ ಎಲ್ಲ ಕ್ಷೇತ್ರಗಳಲ್ಲಿಯೂ ಮನುಷ್ಯ ಕಲ್ಪನೆಗೆ ಮೀರಿ ಊಹಿಸಿಲಾರದಷ್ಟು ಎತ್ತರಕ್ಕೆ ಬೆಳೆದಿದ್ದಾನೆ. ಹಣದಿಂದಲೇ ಸರ್ವ ಸುಖ, ನೆಮ್ಮದಿ, ಶಾಂತಿ ದೊರಕುತ್ತದೆ ಎಂಬ ಹುಚ್ಚು ಕಲ್ಪನೆಯ ಹಿಂದೆ ಹುಚ್ಚು ಕುದುರೆಯಂತೆ ಓಡುತ್ತಿದ್ದಾನೆ. ಆದರೆ ಈ ಸುಖ, ಸಂಪತ್ತು ಆನಂದ ಎಲ್ಲವೂ ಸಹ ತನ್ನಲ್ಲಿಯೇ, ತನ್ನ ಅಂತರಾತ್ಮದಲ್ಲಿಯೇ ಇವೆ ಎಂಬುದನ್ನು ಅರಿಯುವುದೇ ಇಲ್ಲ. ಇದನ್ನೆಲ್ಲ ಹೊರಗೆ ಎಲ್ಲಿಯೂ ಹುಡುಕುವ ಅಗತ್ಯವಿಲ್ಲ ಎಂಬುದನ್ನು ಕೆಲವೇ ಕೆಲವು ಅನುಭವಿಗಳು, ವಿಚಾರವಾದಿಗಳು ಮತ್ತು ಆಧ್ಯಾತ್ಮಿಗಳು ತಿಳಿದಿದ್ದಾರೆ.

Article

ಮನುಷ್ಯ ಬರುವಾಗ ಏನೂ ತಂದಿರುವುದಿಲ್ಲ, ಹೋಗುವಾಗ ಏನೂ ಒಯ್ಯುವುದಿಲ್ಲ. ಈ ಮಧ್ಯದ ಬದುಕನ್ನು ಸಾರ್ಥಕಗೊಳಸಿಕೊಳ್ಳಬೇಕು. ನಿನಗೆ ನೀನೇ ದೀಪ ಎಂದು ತಿಳಿದುಕೊಳ್ಳುವಷ್ಟರಲ್ಲಿಯೇ ಆತನ ಅರ್ಧ ವಯಸ್ಸು ಸವೆದು ಹೋಗಿರುತ್ತದೆ. ನಿನ್ನೆ ನಾನು ಹೇಗಿದ್ದೆ, ಹೇಗೆ ನಡೆದುಕೊಂಡಿದ್ದೆ ಎನ್ನುವುದರ ಮೇಲೆ ಇವತ್ತಿನ ದಿನ ರೂಪುಗೊಳ್ಳುತ್ತದೆ. ಇವತ್ತು ನಾನು ಹೇಗೆ ಇರುತ್ತೇನೆ ಮತ್ತು ಹೇಗೆ ನಡೆದುಕೊಳ್ಳುತ್ತೇನೆ ಎನ್ನುವುದರ ಮೇಲೆ ನಾಳಿನ ಭವಿಷ್ಯ ರೂಪುಗೊಳ್ಳುತ್ತದೆ. ಒಟ್ಟಿನಲ್ಲಿ ನಮ್ಮ ಭವಿಷ್ಯ ನಮ್ಮ ಕೈಯಲ್ಲೇ ಇದೆ. ನಾವೇ ರೂಪಿಸಿಕೊಳ್ಳಬೇಕು ಈ ಜಗತ್ತಿನಲ್ಲಿ ವಯಸ್ಸಾದರೂ ಬದುಕನ್ನು ಅರ್ಥ ಮಾಡಿಕೊಳ್ಳಲಾಗದ ಜನಗಳ ಸಂಖ್ಯೆ ಹೆಚ್ಚಿದೆ. ಇದಕ್ಕೆ ಆಧ್ಯಾತ್ಮ ಮತ್ತು ಅನುಭವದ ಅರಿವಿನ ಕೊರತೆ ಕಾರಣ.

ಈಗಿನ ಸ್ಪರ್ಧಾತ್ಮಕ ಮತ್ತು ಒತ್ತಡದ ಯುಗದಲ್ಲಿ ಸಮಸ್ಯೆ ಇಲ್ಲದ ಮನುಷ್ಯ ಇಲ್ಲ. ಸಮಸ್ಯೆ ಇಲ್ಲದ ಸಂಸಾರವಿಲ್ಲ. ಸಮಸ್ಯೆ ಇಲ್ಲದ ಸಂಘ-ಸಂಸ್ಥೆಗಳಿಲ್ಲ ಮತ್ತು ಅಂತಹ ಸಮಾಜವಿಲ್ಲ. ಬರುವ ಸಮಸ್ಯೆಯನ್ನು ಯಾವ ರೀತಿ ಗಟ್ಟಿಯಾಗಿ ನಿಂತು ಎದೆಗುಂದದೆ ಎದುರಿಸುತ್ತಾನೋ ಹಾಗೆ ಮನುಷ್ಯ ಗಟ್ಟಿಗೊಳ್ಳುತ್ತಾ ಹೋಗುತ್ತಾನೆ. ಹೀಗೆ ಸಮಸ್ಯೆಗಳು ಮತ್ತು ಕಷ್ಟಗಳು ಒಂದರ ಹಿಂದೆ ಒಂದು ಬರುತ್ತಲೇ ಇರುತ್ತವೆ. ಹಣದ ಸಮಸ್ಯೆ, ಸಂಸಾರದ ಸಮಸ್ಯೆ, ಆರೋಗ್ಯದ ಸಮಸ್ಯೆ ಮತ್ತು ಕೆಲವರಿಗೆ ಕೀರ್ತಿ ಮತ್ತು ಅಧಿಕಾರದ ಮುಖಾಂತರ ಹಣ ಗಳಿಸುವ ಸಮಸ್ಯೆ ಹೀಗೆ ಸಮಸ್ಯೆಗಳು ಒಬ್ಬೊಬ್ಬರಿಗೆ ಒಂದೊಂದು ರೀತಿ ಕಾಡುತ್ತಲೇ ಇರುತ್ತವೆ. ಕಷ್ಟಗಳು ಸಮುದ್ರದ ಅಲೆಗಳಂತೆ ಬರುತ್ತಲೇ ಇರುತ್ತವೆ.

Article-2

ಎಷ್ಟು ಕಷ್ಟಗಳ ಮಧ್ಯೆ ಜೀವಿಸುವುದನ್ನು ಕಲಿಯುತ್ತೇವೆಯೋ ಅಷ್ಟು ಸಹನೆ ಹೆಚ್ಚುವುದು ಮತ್ತು ಜೀವನ ಎದುರಿಸಲು ಸಮರ್ಥರಾಗುತ್ತೇವೆ. ಅಡ್ಡಿ-ಆತಂಕಗಳನ್ನು ಎದುರಿಸದೆ ಗುರಿಯನ್ನು ಸಾಧಿಸುವುದು ಸಾಧ್ಯವಿಲ್ಲ. ಈ ಅಡೆ-ತಡೆಗಳನ್ನು ಜೀವನದ ಅವಿಭಾಜ್ಯ ಅಂಗವೆಂದು ತಿಳಿದು ಅವುಗಳನ್ನು ಸಕಾರಾತ್ಮಕ ಭಾವನೆಯಿಂದ ಧೈರ್ಯವಾಗಿ ಎದುರಿಸಿದರೆ ಮಾತ್ರ ಜೀವನ ನಡೆಸಲು ಸಾಧ್ಯ. ಇದಕ್ಕೆ ನಿರಂತರ ಪ್ರಯತ್ನ, ತಾಳ್ಮೆ ಮತ್ತು ಸಾಧನೆ ಬೇಕು. ಹಿಂದಿನ ಅನುಭವವೇ ಮುಂದಿನ ಪಾಠವೆಂದು ಅರಿತು ಹಿಂದಿನದನ್ನು ಚಿಂತಿಸದೆ ಸಮಸ್ಯೆಗಳಿಗೆ ಪರಿಹಾರ ಹುಡುಕಿಕೊಳ್ಳಬೇಕು.  ಎಲ್ಲ ಸಮಸ್ಯೆಗಳನ್ನು ಅನುಭವಿಸಿ ದಾಟಿ ಹೊರಬರಲು ಮನುಷ್ಯನಿಗೆ ಮುಖ್ಯವಾಗಿ ಜÁ್ಞನ, ಅನುಭವ, ತಾಳ್ಮೆ ಮತ್ತು ಸಂಸ್ಕಾರ ಇರಬೇಕು. ಎಲ್ಲಿ ಸಂಸ್ಕಾರ ಮತ್ತು ಜÁ್ಞನವಿರುತ್ತವೆಯೋ ಅಲ್ಲಿ ಸಮಸ್ಯೆಗಳು ಸುಳಿಯುವುದಿಲ್ಲ, ಎಲ್ಲಿ ಇರುವುದಿಲ್ಲವೋ ಅಲ್ಲಿ ಸಮಸ್ಯೆಗಳ ಸರಮಾಲೆ ಇರುತ್ತದೆ. ಜೇಬಿನಲ್ಲಿ ಮತ್ತು ಬ್ಯಾಂಕಿನಲ್ಲಿ ಎಷ್ಟು ಹಣ, ಆಸ್ತಿ ಇದ್ದರೇನು, ಮುಖದಲ್ಲಿ, ಬದುಕಿನಲ್ಲಿ ನಗು ಇಲ್ಲದಿದ್ದರೆ. ಹಣವಿದ್ದರೂ ಶ್ರೀಮಂತ ನೆಮ್ಮದಿಯಿಲ್ಲದೆ ಬಡವನಾಗಿರುತ್ತಾನೆ.

ಮನುಷ್ಯ ಕಷ್ಟಪಟ್ಟು ತನ್ನೆಲ್ಲ ಬುದ್ಧಿ ಶಕ್ತಿ ವಿನಿಯೋಗಿಸಿ ಆರೋಗ್ಯ ಲೆಕ್ಕಿಸದೆ ಕೋಟ್ಯಾಂತರ ರೂಪಾಯಿ ದುಡಿಯುತ್ತಾನೆ. ಆದರೆ ಎಂತಹ ವಿಪರ್ಯಾಸ ನೋಡಿ..! ಕಳೆದುಹೋದ ಆರೋಗ್ಯವನ್ನು ವಾಪಸ್ಸು ಸಂಪಾದಿಸಿಕೊಳ್ಳುವುದಕ್ಕೋಸ್ಕರ ಆ ತನಕ ದುಡಿದ ಕೋಟ್ಯಾಂತರ ಹಣ ಖರ್ಚು ಮಾಡುತ್ತಾನೆ. ಈ ವಿಷಯದಲ್ಲಿ ಮನುಷ್ಯ ತುಂಬಾ ಅವಿವೇಕಿ. ಇವನಿಗೆ ಗೊತ್ತಿಲ್ಲ, ತನ್ನ ಪರಿಶ್ರಮದ ದುಡಿಮೆಯ ಜತೆ ಜತೆಗೆ ತನ್ನನ್ನು ಅವಲಂಬಿಸಿರುವ ಕುಟುಂಬದವರ ಮತ್ತು ಹಿತೈಷಿಗಳ ಜೊತೆಗೆ ಸಮಾಜದಲ್ಲಿ ಸುಖ ಸಂತೋಷ ಮತ್ತು ಪ್ರೀತಿಯಿಂದ ಬಾಳಬೇಕು ಎಂಬ ವಿಚಾರ ಕೆಲವರಿಗೆ ತಿಳಿಯುವುದಿಲ್ಲ. ಮುಪ್ಪಿನಲ್ಲಿ ಸಂತೋಷವಾಗಿ ಕಾಲ ಕಳೆಯುವುದು ಬಿಟ್ಟು, ಯೋಚನೆಗಳ ಸುಳಿಯಲ್ಲಿ ಬೀಳುತ್ತಾರೆ. ತಾನು ದುಡಿದ ಹಣವನ್ನು ಮತ್ತೊಬ್ಬರು ಸುಖಪಡುವುದಕ್ಕೆ ಬಿಟ್ಟು ಹೋಗುತ್ತಾರೆ. ಹುಟ್ಟಿದ ಮಕ್ಕಳ ಮುಪ್ಪಿನಲ್ಲಿ ಎಷ್ಟರ ಮಟ್ಟಿಗೆ ನೋಡಿಕೊಳ್ಳಬಹುದು..?

ನಿಜವಾದ ಮನಃಶಾಂತಿಯೇ ಮುಖ್ಯವಾದರೆ, ನಿಮಗೆ ಹೆಚ್ಚು ಆದಾಯ ಕೊಡುವಂತಹ ನಿಮ್ಮ ಮನಸ್ಸಿಗೆ ಒಪ್ಪಿಗೆ ಇಲ್ಲದ ಕೆಲಸವನ್ನು ಮಾಡುವುದಕ್ಕಿಂತ ಆದಾಯ ಕಡಿಮೆ ಆದರೂ ಪರವಾಗಿಲ್ಲ ನಿಮ್ಮ ಮನಸ್ಸಿಗೆ ಒಪ್ಪುವಂತಹ ಕೆಲಸವನ್ನು ಇಷ್ಟಪಟ್ಟು ಮಾಡಿರಿ. ನಿಮ್ಮ ಪರಿಸರವನ್ನು ಮತ್ತು ಮತ್ತೊಬ್ಬರನ್ನು ಬದಲಾಯಿಸಲಾಗುವುದಿಲ್ಲ. ಅದರ ಬದಲು ನಾವೇ ಪರಿಸ್ಥಿತಿಗೆ ಹೊಂದಿಕೊಳ್ಳಬೇಕು ಮತ್ತು ನಮ್ಮನ್ನು ನಾವು ಶುದ್ಧಪಡಿಸಿಕೊಳ್ಳುತ್ತಾ ಹೋಗಬೇಕು.
ಹೌದು ಇದೆಲ್ಲ ಸರಿ. ಇವುಗಳಿಗೆ ಪರಿಹಾರ ಏನು ಎಂದು ಕೇಳಬಹುದು. ಪರಿಹಾರಗಳನ್ನು ಒಂದೇ ಮಾತಿನಲ್ಲಿ ಅಥವಾ ಒಂದೇ ಸಾಲಿನಲ್ಲಿ ಸಂಕ್ಷಿಪ್ತವಾಗಿ ಹೇಳಲಿಕ್ಕೆ ಬರುವುದಿಲ್ಲ. ನಡೆದು ಹೋದ ಕೆಟ್ಟ ಘಟನೆಗಳನ್ನು ನೆನೆಸಿಕೊಂಡು ಕೊರಗಬೇಡಿ, ಮುಂದಿನ ಜೀವನ ಹೇಗೆ ಎಂದು ಸಹ ಯೋಚಿಸಿ ಹೆದರಬೇಡಿ.
ಒಳ್ಳೆಯ ಪುಸ್ತಕಗಳನ್ನು ಓದುವುದು, ಸತ್ಸಂಗದಲ್ಲಿ ಪಾಲ್ಗೊಳ್ಳುವುದು, ಪ್ರಾರ್ಥನೆ, ಧ್ಯಾನ, ಯೋಗ ಮತ್ತು ನಿಮಗೆ ಇಷ್ಟವಾದ ಕೆಲಸ ಕಾರ್ಯಗಳನ್ನು ಮಾಡುವುದು, ಕೈಲಾದ ಮಟ್ಟಿಗೆ ಸಹಾಯ ಹಾಗೂ ಸೇವೆ ಮಾಡುವುದರಿಂದ ಮಾತ್ರ ನಿಜವಾದ ಮನಃಶ್ಯಾಂತಿ ಸಿಗಲು ಸಾಧ್ಯ. ಪೂಜೆ ಮಾಡುವ ಕೈಗಳಿಗಿಂತ ಸೇವೆ ಮಾಡುವ ಕೈಗಳು ಶ್ರೇಷ್ಠ.

ಹಸಿದ ಹೊಟ್ಟೆಗೆ ಹಿಟ್ಟನು ನೀಡದವನು
ದೀನ ದಲಿತರ ಕೂಗನು ಕೇಳದವನು
ಕಷ್ಟದಲ್ಲಿ ಇರುವವರನ್ನು ನೋಡಿ ಅಯ್ಯೋ ಪಾಪ ಎನ್ನದವನು
ಯಾವ ಗುಡಿಗೋಪರಗಳಿಗೆ ಹೋಗಿ ದೀಪವಚ್ಚಿ, ಘಂಟೆ ಬಾರಿಸಿ
ಮೃಷ್ಟಾನ್ನ ಭೋಜನ ನೈವೇದ್ಯ ಮಾಡಿದರೇನು ಪ್ರಯೋಜನ..?

ಬಡವರಿಗೆ, ದೀನ-ದಲಿತರಿಗೆ, ಅಂಗವಿಕಲರಿಗೆ, ಕುರುಡರಿಗೆ, ಬುದ್ಧಿಮಾಂದ್ಯ ಮಕ್ಕಳಿಗೆ, ಊಟ, ಮನೆ-ಮಠ ಕಳೆದುಕೊಂಡ ಅನಾಥರಿಗೆ ಸೇವೆ ಮಾಡುವುದರಿಂದ ನಿಜವಾದ ತೃಪ್ತಿ ಸಿಗಲು ಸಾಧ್ಯ. ಕೆಲಸ ಕಡಿಮೆಯಾದರೆ ಚಿಂತೆಯೂ ಕಡಿಮೆ. ಚಿಂತೆ ಕಡಿಮೆಯಾದಷ್ಟು ಹೆಚ್ಚು ಮನಃಶಾಂತಿ ಸಿಗುತ್ತದೆ. ಧ್ಯಾನದಿಂದ ನಿಮ್ಮ ಬುದ್ಧಿ ಶಕ್ತಿ ಹೆಚ್ಚುವುದು ಮತ್ತು ಮಾನಸಿಕವಾಗಿ, ದೈಹಿಕವಾಗಿ ಆರೋಗ್ಯ ಉತ್ತಮಗೊಳ್ಳುತ್ತದೆ. ಕಡಿಮೆ ಸಮಯದಲ್ಲಿ ಹೆಚ್ಚು ಕೆಲಸ ಮಾಡಲು ಶಕ್ತರಾಗುವಿರಿ. ಜೀವನದಲ್ಲಿ ಪ್ರತಿ ಕ್ಷಣವೂ ಅಮೂಲ್ಯವಾದುದು. ಅದನ್ನು ವ್ಯರ್ಥ ಮಾಡದೆ ಉಪಯುಕ್ತ ಕೆಲಸ-ಕಾರ್ಯಗಳಿಗೆ, ಸಮಾಜ ಸೇವೆಗಳಿಗೆ ವಿನಿಯೋಗಿಸಿ. ಇದರಿಂದ ನಿಮ್ಮ ಆತ್ಮಸ್ಥೈರ್ಯ ಹೆಚ್ಚುವುದು. ಮನಃಶಾಂತಿ ಮತ್ತು ಹೊರಗೆ ಕಾಣುವ ಪ್ರಾಪಂಚಿಕ ಐಷಾರಾಮಿ ವಸ್ತುಗಳು, ಬದ್ಧ ವೈರಿಗಳು. ಇವೆರಡೂ ಒಟ್ಟಿಗೆ ಇರಲು ಸಾಧ್ಯವಿಲ್ಲ ನಿಮಗೆ ಯಾವುದು ಬೇಕೋ ನೀವೇ ಆರಿಸಿಕೊಳ್ಳಿ. ನಿಮ್ಮ ಜೀವನ ಮಟ್ಟಕ್ಕೆ ಎಷ್ಟು ಅಗತ್ಯವೋ ಅಷ್ಟಕ್ಕೆ ಸೀಮಿತಗೊಳಿಸಿ.
ನಾವು ಬೇರೆಯವರ ಮನಸ್ಸನ್ನು ನೋಯಿಸಿದರೆ, ಮೋಸಗೊಳಿಸಿದರೆ ಮನಃಶಾಂತಿ ಸಿಗುವುದಿಲ್ಲ. ಯಾರಿಗೂ ಗೊತ್ತಾಗದ ರೀತಿಯಲ್ಲಿ ಒಬ್ಬರಿಗೆ ಮೋಸ ಮಾಡಬಹುದು. ಆದರೆ ಅದಕ್ಕೆ ಆತ್ಮ ಒಪ್ಪಿಕೊಳ್ಳವುದಿಲ್ಲ. ನಾವು ಒಳ್ಳೆಯ ಕೆಲಸ ಕಾರ್ಯ ಮಾಡಿದಾಗ ಆತ್ಮವೇ ಬಂಧುವಾಗುತ್ತದೆ.

ಎಚ್.ವಿ.ಮಂಜುನಾಥಸ್ವಾಮಿ

Facebook Comments

Sri Raghav

Admin