ಮಿನಿಮಮ್ ಬ್ಯಾಲೆನ್ಸ್ ಇಡದವರಿಂದ ವಸೂಲಿ ಮಾಡಿದ್ದು ಎಷ್ಟು ಸಾವಿರ ಕೋಟಿ ಗೊತ್ತಾ..!?

ಈ ಸುದ್ದಿಯನ್ನು ಶೇರ್ ಮಾಡಿ

Banking--01
ನವದೆಹಲಿ,ಆ.5- ಕಳೆದ ಹಣಕಾಸು ವರ್ಷದಲ್ಲಿ ತಮ್ಮ ಖಾತೆಗಳಲ್ಲಿ ಮಿನಮಮ್ ಬ್ಯಾಲೆನ್ಸ್ ನಿರ್ವಹಿಸದ ಗ್ರಾಹಕರಿಂದ ದೇಶದ ವಿವಿಧ ಬ್ಯಾಂಕ್‍ಗಳು 5000 ಕೋಟಿ ರೂ.ಗಳಿಗೂ ಹೆಚ್ಚು ಮೊತ್ತದ ಹಣವನ್ನು ದಂಡ ಶುಲ್ಕ ರೂಪದಲ್ಲಿ ವಸೂಲಿ ಮಾಡಲಾಗಿದೆ.  ದೇಶದ 21 ಸಾರ್ವಜನಿಕ ವಲಯದ ಬ್ಯಾಂಕ್‍ಗಳು ಮತ್ತು ಮೂರು ಪ್ರಮುಖ ಖಾಸಗಿ ವಲಯದ ಹಣಕಾಸು ಸಂಸ್ಥೆಗಳು 2017-18ನೇ ಆರ್ಥಿಕ ವರ್ಷದಲ್ಲಿ ಐದು ಸಾವಿರ ಕೋಟಿ ರೂ. ವಸೂಲಿ ಮಾಡಿದೆ ಎಂಬುದು ಅಂಕಿ ಅಂಶ ಮಾಹಿತಿಯಿಂದ ಲಭ್ಯವಾಗಿದೆ.

ಇದೇ ಅವಧಿಯಲ್ಲಿ 6547 ಕೋಟಿ ರೂ.ಗಳ ನಿವ್ವಳ ನಷ್ಟ ಅನುಭವಿಸಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯ ಮಿನಿಮಮ್ ಬ್ಯಾಲೆನ್ಸ್ ಇಡದ ಗ್ರಾಹಕರಿಂದ ಅತಿಹೆಚ್ಚು ದಂಡ ಶುಲ್ಕವನ್ನು ವಸೂಲಿ ಮಾಡಿ ಅಗ್ರಸ್ಥಾನದಲ್ಲಿದೆ. ಎಸ್‍ಬಿಐ ವಶ ಮಾಡಿರುವ ಈ ಶುಲ್ಕ 2,433.87 ಕೋಟಿ ರೂ.ಗಳು.  ಎಸ್‍ಬಿಐ ಬ್ಯಾಂಕ್ ನಂತರ ಅತಿಹೆಚ್ಚು ಪ್ರಮಾಣದಲ್ಲಿ ಈ ಶುಲ್ಕ ವಸೂಲಿ ಮಾಡಿದ ಎರಡನೇ ಸ್ಥಾನದಲ್ಲಿ ಎಫ್‍ಡಿಸಿ ಬ್ಯಾಂಕ್(590.84 ಕೋಟಿ ರೂ.) ಇದೆ. ಆಕ್ಸಿಸ್ ಬ್ಯಾಂಕ್(530.12 ಕೋಟಿ) ಹಾಗೂ ಐಸಿಐಸಿಐ ಬ್ಯಾಂಕ್( 317.06 ಕೋಟಿ) ನಂತರದ ಸ್ಥಾನಗಳಲ್ಲಿದೆ.

Facebook Comments

Sri Raghav

Admin