ದೀನ್ ದಯಾಳ್ ಉಪಾಧ್ಯಾಯ ಎಂದು ಮರುನಾಮಕರಣವಾದ ಮೊಘಲ್‍ಸರಾಯ್ ರೈಲು ನಿಲ್ದಾಣ

ಈ ಸುದ್ದಿಯನ್ನು ಶೇರ್ ಮಾಡಿ

DIN-DAYAL-RAILWAY-STATION
ಲಕ್ನೋ, ಆ. 5- ಉತ್ತರ ಪ್ರದೇಶದ ಮೊಘಲ್‍ಸರಾಯ್ ಜಂಕ್ಷನ್ ರೈಲು ನಿಲ್ದಾಣಕ್ಕೆ ಇಂದು ಅಧಿಕೃತವಾಗಿ ದೀನ್ ದಯಾಳ್ ಉಪಾಧ್ಯಾಯ ರೈಲು ನಿಲ್ದಾಣ ಮರುನಾಮಕರಣ ಮಾಡಲಾಗುತ್ತಿದೆ. ಭಾರತೀಯ ರೈಲ್ವೆ ಇತಿಹಾಸದಲ್ಲೇ ಮೊದಲ ಬಾರಿಗೆ ಎಲ್ಲ ಮಹಿಳಾ ಸಿಬ್ಬಂದಿಯನ್ನು ಒಳಗೊಂಡ ಪ್ಯಾಸೆಂಜರ್ ರೈಲು ಹಾಗೂ ಗೂಡ್ಸ್ ರೈಲಿಗೆ ಹಸಿರು ನಿಶಾನೆ ದೊರೆಯಲಿದೆ. ದೆಹಲಿ- ಹೌರಾ ಮಾರ್ಗಮಧ್ಯದ ಈ ಶತಮಾನದಷ್ಟು ಹಳೆಯ ನಿಲ್ದಾಣದಲ್ಲಿ ಸ್ಮಾರ್ಟ್ ಯಾರ್ಡ್ ಯೋಜನೆಗೂ ಇದೇ ವೇಳೆ ಚಾಲನೆ ದೊರೆಯಲಿದೆ.

ಮೊಘಲ್‍ಸರಾಯ್ ರೈಲು ನಿಲ್ದಾಣಕ್ಕೆ ಮರುನಾಮಕರಣ ಮಾಡುವ ಪ್ರಸ್ತಾವಕ್ಕೆ ಉತ್ತರ ಪ್ರದೇಶ ರಾಜ್ಯಪಾಲ ರಾಮ್ ನಾಯ್ಕೆ ಅವರು ಈಗಾಗಲೇ ಒಪ್ಪಿಗೆ ಸೂಚಿಸಿದ್ದಾರೆ. ನಿಲ್ದಾಣದ ಕಟ್ಟಡಕ್ಕೆ ಕೇಸರಿ ಬಣ್ಣ ಬಳಿಯಲಾಗಿದ್ದು, ಎಲ್ಲ ನಾಮಫಲಕಗಳಲ್ಲಿ ಹೊಸ ಹೆಸರು ಬರೆಯಲಾಗಿದ್ದು, ನಾಮಕರಣ ಸಮಾರಂಭದಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಷಾ, ರೈಲ್ವೆ ಸಚಿವ ಪಿಯೂಶ್ ಗೋಯಲ್ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಪಾಲ್ಗೊಳ್ಳಲಿದ್ದರೆ.

Facebook Comments

Sri Raghav

Admin