ಜಯನಗರ ವಾಣಿಜ್ಯ ಮಳಿಗೆಗೆ ಕಣಗಾಲ್ ಹೆಸರಿಡಲು ಮನವಿ

ಈ ಸುದ್ದಿಯನ್ನು ಶೇರ್ ಮಾಡಿ

Puttanna-jayanagara-Coplex
ಬೆಂಗಳೂರು,ಆ.5- ಜಯನಗರ ವಾಣಿಜ್ಯ ಮಳಿಗೆಗೆ ದಿವಂಗತ ಪುಟ್ಟಣ್ಣ ಕಣಗಾಲ್ ಹೆಸರನ್ನು ನಾಮಕರಣ ಮಾಡಬೇಕೆಂದು ಕನ್ನಡ ಕಟ್ಟೆಯ ಅಧ್ಯಕ್ಷ ಮಾವಳ್ಳಿ ಅರವಿಂದ ಮನವಿ ಮಾಡಿದ್ದಾರೆ.  ಕನ್ನಡ ನಾಡಿನ ಅತ್ಯಂತ ಶ್ರೇಷ್ಠ ಕನ್ನಡ ಚಲನಚಿತ್ರ ನಿರ್ದೇಶಕರಾಗಿದ್ದ ಅವರು ಹಲವಾರು ರಾಷ್ಟ್ರಪತಿಗಳನ್ನು ಪಡೆದಿದ್ದಾರೆ. ಅಲ್ಲದೆ ಕನ್ನಡ ಚಿತ್ರರಂಗಕ್ಕೆ ಹೊಸ ಆಯಾಮಗಳನ್ನು ನೀಡಿದ್ದಾರೆ.

ನೂರಾರು ಹೊಸ ಪ್ರತಿಭೆಗಳನ್ನು ಚಲನಚಿತ್ರ ರಂಗದಲ್ಲಿ ಬೆಳಕಿಗೆ ತಂದವರು ಪುಟ್ಟಣ್ಣ ಕಣಗಾಲ್ ಅವರು. ಈ ಹಿಂದೆ ಬಿಬಿಎಂಪಿಯ ಜಯನಗರ ವಾಣಿಜ್ಯ ಮಳಿಗೆಯಲ್ಲಿದ್ದ ಚಿತ್ರಮಂದಿರವನ್ನು ನವೀಕರಣ ಮಾಡುವ ನೆಪದಲ್ಲಿ ಸಂಪೂರ್ಣವಾಗಿ ಕಟ್ಟಡ ಕೆಡವಿ ಹೊಸದಾಗಿ ವಾಣಿಜ್ಯ ಮಳಿಗೆಯನ್ನು ನಿರ್ಮಿಸಲಾಗಿದೆ. ಇದರಿಂದಾಗಿ ಈ ಚಿತ್ರಮಂದಿರವೂ ಮಾಯವಾಗಿದೆ.  ಪುಟ್ಟಣ ಕಣಗಾಲ್ ಅವರ ಕನ್ನಡ ಸೇವೆ ಮತ್ತು ಸಾಧನೆಯನ್ನು ಗೌರವಿಸುವ ಉದ್ದೇಶಕ್ಕಾಗಿ ಬಿಬಿಎಂಪಿಯವರು ನೂತನವಾಗಿ ನಿರ್ಮಿಸಿರುವ ವಾಣಿಜ್ಯ ಮಳಿಗೆಗೆ ಕಣಗಾಲ್ ಪುಟ್ಟಣ್ಣ ವಾಣಿಜ್ಯ ಸಂಕಿರಣ ಎಂಬ ಹೆಸರಿನಿಂದ ನಾಮಕರಣ ಮಾಡಿ ಅವರಿಗೆ ಗೌರವವನ್ನು ಸಲ್ಲಿಸಬೇಕೆಂದು ಬಿಬಿಎಂಪಿ ಮೇಯರ್ ಹಾಗೂ ಆಯುಕ್ತರು ಮತ್ತು ಬಿಬಿಎಂಪಿ ಎಲ್ಲ ಪಾಲಿಕೆ ಸದಸ್ಯರನ್ನು ಒತ್ತಾಯಿಸಿದ್ದಾರೆ.

Facebook Comments

Sri Raghav

Admin