ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಭಾರೀ ವಿಧ್ವಂಸಕ ಕೃತ್ಯಕ್ಕೆ ಉಗ್ರರ ಸಂಚು..!

ಈ ಸುದ್ದಿಯನ್ನು ಶೇರ್ ಮಾಡಿ

RedFort--01
ನವದೆಹಲಿ, ಆ.5- ಈ ಬಾರಿ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ರಾಜಧಾನಿ ದೆಹಲಿಯಲ್ಲಿ ಭಾರೀ ವಿಧ್ವಂಸಕ ಕೃತ್ಯ ನಡೆಸಲು ಪಾಕಿಸ್ತಾನಿ ಮೂಲದ ಜೈಷ್-ಎ-ಮೊಹಮದ್ (ಜೆಎಎಂ) ಉಗ್ರರು ಸಂಚು ರೂಪಿಸಿದ್ದಾರೆಂಬ ಆತಂಕಕಾರಿ ಸಂಗತಿ ಬಹಿರಂಗಗೊಂಡಿದೆ. ಈ ಹಿನ್ನೆಲೆಯಲ್ಲಿ ರಾಜಧಾನಿಯಾದ್ಯಂತ ವ್ಯಾಪಕ ಬಂದೋಬಸ್ತ್ ಮಾಡಲಾಗಿದ್ದು, ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.

ಈ ಉಗ್ರ ಸಂಘಟನೆಯ ಪ್ರಮುಖ ಭಯೋತ್ಪಾದಕ ಇಸ್ಮಾಯಿಲ್ ಈಗಾಗಲೇ ದೆಹಲಿಯಲ್ಲಿ ವಾಸ್ತವ್ಯ ಹೂಡಿದ್ದು, ವಿಧ್ವಂಸಕ ದಾಳಿಗೆ ಸಂಚು ರೂಪಿಸಿದ್ದಾನೆಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ. ಈತ ಪಾಕಿಸ್ತಾನದಿಂದ ಮೇ ತಿಂಗಳಲ್ಲಿ ಗಡಿ ಮೂಲಕ ಜಮ್ಮು-ಕಾಶ್ಮೀರಕ್ಕೆ ನುಸುಳಿ ಅಲ್ಲಿಂದ ದೆಹಲಿಗೆ ಬಂದಿದ್ದು, ಗೌಪ್ಯ ಸ್ಥಳವೊಂದರಲ್ಲಿ ದಾಳಿಗೆ ಸಂಚು ರೂಪಿಸಿ ಇತರ ಉಗ್ರರನ್ನು ರಾಜಧಾನಿಗೆ ಕರೆಸಿಕೊಳ್ಳಲು ಕುತಂತ್ರ ರೂಪಿಸಿದ್ದಾನೆ ಎಂಬ ಮಾಹಿತಿ ಲಭಿಸಿದೆ.  ಈ ಹಿನ್ನೆಲೆಯಲ್ಲಿ ದೆಹಲಿ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

Facebook Comments

Sri Raghav

Admin