ವೆನಿಜುವೆಲಾ ಅಧ್ಯಕ್ಷ ನಿಕೋಲಾಸ್ ಮಡುರೋ ಹತ್ಯೆಗೆ ಯತ್ನ

ಈ ಸುದ್ದಿಯನ್ನು ಶೇರ್ ಮಾಡಿ

venijuvella-president
ಕಾರಕಾಸ್, ಆ.5-ವೆನುಜುವೆಲಾ ಅಧ್ಯಕ್ಷ ನಿಕೋಲಾಸ್ ಮಡುರೋ ಅವರ ಹತ್ಯೆಗೆ ಯತ್ನವೊಂದು ನಡೆದಿದೆ. ಈ ಹಿನ್ನಲೆಯಲ್ಲಿ ರಾಷ್ಟ್ರಾಧ್ಯಕ್ಷರಿಗೆ ಭಾರೀ ಬಿಗಿ ಭದ್ರತೆ ನೀಡಲಾಗಿದ್ದು, ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.  ರಹಸ್ಯ ಬಂಡುಕೋರರು ಗುಂಪೊಂದು ನಿಕೋಲಾಸ್ ಅವರ ಹತ್ಯೆ ಯತ್ನದ ಹೊಣೆ ಹೊತ್ತುಕೊಂಡಿದೆ.
ವೆನಿಜುವೆಲಾ ನಾಗರಿಕರು ಮತ್ತು ಸೇನೆಯ ಸದಸ್ಯರನ್ನೂ ಹೊಂದಿರುವ ಈ ಪ್ರತ್ಯೇಕ ಬಣ ರಾಷ್ಟ್ರಾಧ್ಯಕ್ಷರನ್ನು ಕೊಲ್ಲಲು ಯತ್ನಿಸಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಬಿಡುಗಡೆ ಮಾಡಲಾದ ಹೇಳಿಕೆಯೊಂದರಲ್ಲಿ ತಿಳಿಸಲಾಗಿದೆ.

ದೇಶದ ಸಂವಿಧಾನವನ್ನು ಮರೆತು ಸ್ವೇಚ್ಚಾಚಾರದಿಂದ ಆಡಳಿತ ನಡೆಸುತ್ತಿರುವ ಮಂದಿಯ ಸರ್ಕಾರದಲ್ಲಿ ಸೇನೆಗೆ ಗೌರವ ಇಲ್ಲ. ಈ ದುರಾಡಳಿತ ಅಂತ್ಯಗೊಳಿಸಲು ನಾವು ಉದ್ದೇಶಿಸಿದ್ದೇವೆ ಎಂದು ಬಂಡುಕೋರರ ಗುಂಪು ಎಚ್ಚರಿಕೆ ನೀಡಿದೆ.  ಈ ಪ್ರತ್ಯೇಕವಾದಿಗಳು ಮತ್ತೆ ದೇಶದ ಉನ್ನತ ಹುದ್ದೆಯಲ್ಲಿರುವವರ ಮೇಲೆ ಹಾಗೂ ಸರ್ಕಾರದ ಕಚೇರಿಗಳ ಮೇಲೆ ದಾಳಿ ನಡೆಸುವ ಸಾಧ್ಯತೆ ಇರುವುದರಿಂದ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.

Facebook Comments

Sri Raghav

Admin