ಐಸಿಸಿ ಟೆಸ್ಟ್ ರ‍್ಯಾಂಕಿಂಗ್ ಪ್ರಕಟ : ಸ್ಟೀವ್ ಸ್ಮಿತ್’ ರನ್ನು ಹಿಂದಿಕ್ಕಿ ನಂಬರ್ 1 ಪಟ್ಟ ಅಲಂಕರಿಸಿದ ವಿರಾಟ್ ಕೊಹ್ಲಿ

ಈ ಸುದ್ದಿಯನ್ನು ಶೇರ್ ಮಾಡಿ

Kohili

ಮುಂಬೈ, ಆ.5- ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸೋತರೂ ಕೂಡ ವಿರೋಚಿತ ಪ್ರದರ್ಶನ ತೋರಿದ ವಿರಾಟ್ ಕೊಹ್ಲಿ ಐಸಿಸಿ ಪ್ರಕಟಿಸಿರುವ ನೂತನ ಟೆಸ್ಟ್ ಹಾಗೂ ಏಕದಿನ ರ್ಯಾಂಕಿಂಗ್ ಬ್ಯಾಟ್ಸ್‍ಮನ್‍ಗಳ ಪಟ್ಟಿಯಲ್ಲಿ ನಂಬರ್ 1 ಸ್ಥಾನ ಅಲಂಕರಿಸಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಟೆಸ್ಟ್‍ನಲ್ಲಿ ಭಾರತದ ರವೀಂದ್ರಜಡೇಜಾ (3), ರವಿಚಂದ್ರನ್ ಅಶ್ವಿನ್ (5), ಏಕದಿನದಲ್ಲಿ ಜಸ್‍ಪ್ರೀತ್ ಬೂಮ್ರಾ (1), ಕುಲ್‍ದೀಪ್‍ಯಾದವ್(6), ಯಜುವೇಂದ್ರ ಚಹಲ್ (10), ಟ್ವೆಂಟಿ-20ಯಲ್ಲಿ ಯಜುವೇಂದ್ರ ಚಾಹಲ್(4), ಕನ್ನಡಿಗ ಕೆ.ಎಲ್.ರಾಹುಲ್(3) ಶ್ರೇಷ್ಠ ಬ್ಯಾಟ್ಸ್‍ಮನ್ ಆಗಿ ಟಾಪ್ 10ರಲ್ಲಿ ಗುರುತಿಸಿಕೊಂಡಿದ್ದಾರೆ.

ಇಂಗ್ಲೆಂಡ್ ವಿರುದ್ಧ ಬರ್ಮಿಂಗ್‍ಹ್ಯಾಮ್‍ನಲ್ಲಿ ನಡೆದ ಪ್ರಥಮ ಟೆಸ್ಟ್‍ನಲ್ಲಿ ಮೊದಲ ಇನ್ನಿಂಗ್ಸ್‍ನಲ್ಲಿ 149 ಹಾಗೂ ದ್ವಿತೀಯ ಇನ್ನಿಂಗ್ಸ್‍ನಲ್ಲಿ 51 ರನ್‍ಗಳನ್ನು ಗಳಿಸುವ ಮೂಲಕ 31 ಅಂಕಗಳನ್ನು ಗಳಿಸಿದ ಟೀಂ ಇಂಡಿಯಾದ ನಾಯಕ ವಿರಾಟ್ ಆಸ್ಟ್ರೇಲಿಯಾದ ವಿವಾದಾತ್ಮಕ ನಾಯಕ ಸ್ಟೀವ್ ಸ್ಮಿತ್ ರನ್ನು ಹಿಂದಿಕ್ಕಿ ಇದೇ ಮೊದಲ ಬಾರಿಗೆ ಅಗ್ರಸ್ಥಾನಿಯಾಗಿದ್ದಾರೆ. ಈ ಮೂಲಕ 32 ತಿಂಗಳಿಂದ ನಂಬರ್ 1 ಸ್ಥಾನ ಆಲಂಕರಿಸಿದ್ದ ಸ್ಮಿತ್ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ.

ಸಚಿನ್ ದಾಖಲೆ ಸರಿಗಟ್ಟಿದ ಕೊಹ್ಲಿ: ಭಾರತದ ತಂಡ ಬ್ಯಾಟಿಂಗ್ ಮಾಂತ್ರಿಕ ಸಚಿನ್‍ತೆಂಡೂಲ್ಕರ್‍ಗೆ ಕೊಹ್ಲಿ ಯನ್ನು ಹೋಲಿಕೆ ಮಾಡುತ್ತಿದ್ದು, ಶತಕಗಳ ದಾಖಲೆಯನ್ನು ಸರಿಗಟ್ಟುತ್ತಿರುವ ವಿರಾಟ್ ಈಗ ಟೆಸ್ಟ್‍ನಲ್ಲಿ ನಂಬರ್ 1 ಬ್ಯಾಟ್ಸ್‍ಮನ್ ಆಗುವ ಮೂಲಕ ಸಚಿನ್‍ರ ಮತ್ತೊಂದು ದಾಖಲೆಯನ್ನು ಸರಿಗಟ್ಟಿದ್ದಾರೆ.

ಗವಾಸ್ಕರ್ ಅನ್ನು ಮೀರಿಸಿದ ವಿರಾಟ್: ವಿರಾಟ್ ಕೊಹ್ಲಿ ಕೇವಲ 67 ಟೆಸ್ಟ್‍ನಲ್ಲೇ ನಂಬರ್ 1 ಸ್ಥಾನಕ್ಕೇರಿದ ಬ್ಯಾಟ್ಸ್‍ಮನ್ ಎಂಬ ಕೀರ್ತಿಗೂ ಭಾಜನರಾಗಿದ್ದಾರೆ. ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ ಆಡುವ ಮುನ್ನ 903 ಅಂಕಗಳನ್ನು ಸಂಪಾದಿಸಿದ್ದ ವಿರಾಟ್ ಭಾರತ ಕ್ರಿಕೆಟ್ ತಂಡ ಕಂಡ ಶ್ರೇಷ್ಠ ಆಟಗಾರ, ಆಲ್ ಆಫ್ ಫೇಮ್ ಪುರಸ್ಕೃತ ಗವಾಸ್ಕರ್ ಈ ಹಿಂದೆ ನಂಬರ್ 1 ಪಟ್ಟ ಅಲಂಕರಿಸಿದ್ದಾಗ 916 ಅಂಕಗಳನ್ನು ಸಂಪಾದಿಸಿದ್ದರು, ಆದರೆ ಈಗ ಕೊಹ್ಲಿ 934 ಪಾಯಿಂಟ್ಸ್‍ಗಳನ್ನು ಗಳಿಸಿದ್ದಾರೆ.

ವಿರಾಟ್ ಕೊಹ್ಲಿಗೂ ಮುನ್ನ ಘಟಾನುಘಟಿ ಬ್ಯಾಟ್ಸ್‍ಮನ್‍ಗಳಾದ ಸಚಿನ್‍ತೆಂಡೂಲ್ಕರ್, ಕನ್ನಡಿಗ ರಾಹುಲ್ ದ್ರಾವಿಡ್, ಗೌತಮ್ ಗಂಭೀರ್, ಸುನೀಲ್‍ಗವಾಸ್ಕರ್, ವೀರೇಂದ್ರ ಸೆಹ್ವಾಗ್, ದಿಲೀಪ್ ವೆಂಗಾಸ್ಕರ್ ಅವರು ಟೆಸ್ಟ್‍ನಲ್ಲಿ ನಂಬರ್ 1 ಸ್ಥಾನವನ್ನು ಅಲಂಕರಿಸಿದ್ದರು.

ಟೆಸ್ಟ್ ನಲ್ಲಿ ಟಾಪ್ ಬ್ಯಾಟ್ಸ್‍ಮನ್‍ಗಳು: ವಿರಾಟ್ ಕೊಹ್ಲಿ (ಭಾರತ), ಸ್ಟೀವ್ ಸ್ಮಿತ್(ಆಸ್ಟ್ರೇಲಿಯಾ), ಜೋ ರೂಟ್ (ಇಂಗ್ಲೆಂಡ್), ಕೇನ್ ವಿಲಿಯಮ್ಸ್ (ನ್ಯೂಜಿಲ್ಯಾಂಡ್), ಡೇವಿಡ್ ವಾರ್ನರ್ (ಆಸ್ಟ್ರೇಲಿಯಾ), ಚೇತೇಶ್ವರ್ ಪೂಜಾರ (ಭಾರತ), ಡಿಮಿನುತ್ ಕರುಣರತ್ನೆ, ದಿನೇಶ್ ಚಂಡಿಮಾಲ್(ಶ್ರೀಲಂಕಾ), ಡೀನ್ ಎಲ್ಗರ್, ಮಾರ್ಕಮ್ (ದಕ್ಷಿಣ ಆಫ್ರಿಕಾ).

ಏಕದಿನದಲ್ಲಿ ಟಾಪ್‍ದಾಂಡಿಗರು:  ವಿರಾಟ್ ಕೊಹ್ಲಿ (ಭಾರತ), ಬರ್ಬರ್ ಅಜಮ್(ಪಾಕಿಸ್ತಾನ), ಜೋ ರೂಟ್ ( ರೋಹಿತ್‍ಶರ್ಮಾ), ಡೇವಿಡ್ ವಾರ್ನರ್ (ಆಸ್ಟ್ರೇಲಿಯಾ), ರೋಸ್ ಟೇಲರ್( ನ್ಯೂಜಿಲೆಂಡ್), ಡಿ ಕಾಕ್, ಫ್ಲಾಪ್ ಡು ಪೆಸಿಸ್ (ದಕ್ಷಿಣ ಆಫ್ರಿಕಾ), ಕೇನ್ ವಿಲಿಯಮ್ಸ್ (ನ್ಯೂಜಿಲೆಂಡ್), ಶಿಖರ್ ಧವನ್ (ಭಾರತ)

 

Facebook Comments

Sri Raghav

Admin