ಕುಡಿದು ವಾಹನ ಚಲಾಯಿಸುವ ಶೋಕಿಗೆ ಪ್ರಾಣ ತೆರಬೇಕಾದೀತು ಜೋಕೆ..!

ಈ ಸುದ್ದಿಯನ್ನು ಶೇರ್ ಮಾಡಿ

ramanagara-dc

ಕೆಂಗೇರಿ, ಅ.6- ಪಾನಮತ ರಾಗಿ ವಾಹನ ಚಲಾಯಿಸು ವುದು ಶೋಕಿಯಾಗಿ ಪರಿಣಮಿಸಿ ಅಪಘಾತಗಳಿಗೆ ಕಾರಣವಾಗಿರು ವುದರಿಂದ ಮಧ್ಯಪಾನದಿಂದ ದೂರವಿದ್ದು ಸಂಚಾರಿ ನಿಯಮ ಪಾಲಿಸಬೇಕೆಂದು ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ರಮೇಶ್ ಕರೆ ನೀಡಿದರು.

ಬೆಂಗಳೂರು ಮೈಸೂರು ಮುಖ್ಯ ರಸ್ತೆಯ ರಾಜರಾಜೇಶ್ವರಿ ವೈದ್ಯಕೀಯ ಮಹಾವಿದ್ಯಾಲಯದ ಆವರಣ ದಲ್ಲಿ ಕರ್ನಾಟಕ ಆರ್ಥೊಪಿಡಿಕ್ ಅಸೋಸಿಯೇಷನ್ ಹಾಗೂ ರಾಜರಾಜೇಶ್ವರಿ ವೈದ್ಯಕೀಯ ಮಹಾವಿದ್ಯಾಲಯದ ಸಹಯೋಗ ದೊಂದಿಗೆ ಮೂಳೆ ಮತ್ತು ಕೀಲು (ಬೋನ್ ಅಂಡ್ ಜಾಯಿಂಟ್ ಡೇ) ದಿನದ ಅಂಗವಾಗಿ ರಸ್ತೆ ಸುರಕ್ಷತೆ ಬಗ್ಗೆ ಆಯೋಜಿಸಲಾಗಿದ್ದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ವಾಹನ ಚಲಾಯಿಸುವ ಸಂದರ್ಭದಲ್ಲಿ ಮೊಬೈಲ್ ಬಳಕೆಯಿಂದ ದೂರ ಇರಬೇಕೆಂದು ಸಲಹೆ ನೀಡಿದರು.

ಕರ್ನಾಟಕ ಆರ್ಥೊಪೆಡಿಕ್ ಅಸೋಸಿಯೇಷನ್‍ನ ಕಾರ್ಯ ದರ್ಶಿ ಡಾ.ರೋಷನ್‍ಕುಮಾರ್ ಬಿ.ಎನ್. ಮಾತನಾಡಿ ವ್ಹೀಲಿಂಗ್ ಹಾಗೂ ಕಿಕಿ ಚಾಲೆಂಜ್‍ನಂತಹ ಅಪಾಯಕಾರಿ ಬೆಳವಣಿಗೆ ಸರಿಯಲ್ಲ ಎಂದು ವಿಷಾದಿಸಿದರು. ರಸ್ತೆ ಸುರಕ್ಷತೆಯ ಬಗ್ಗೆ ವಾಹನ ಸವಾರರು ಹೆಚ್ಚಿನ ಅರಿವು ಮೂಡಿಸಿಕೊಂಡು ವಾಹನ ಚಲಾಯಿಸಬೇಕೆಂದು ತಿಳಿಸಿದರು. ರಸ್ತೆ ಸುರಕ್ಷಾ ನಿಯಮಗಳನ್ನು ನಿರ್ಲಕ್ಷಿಸುವ ಪರಿಣಾಮದಿಂದ ಅಪಘಾತಗಳುಂಟಾದಾಗ ಸಾವು ನೋವುಗಳು ಸಂಭವಿಸುವುದರಿಂದ ನಂಬಿದ ಕುಟುಂಬಗಳು ಪರಿ ತಪಿಸುವಂತಾಗುವುದನ್ನು ಗಮನ ದಲ್ಲಿಟ್ಟುಕೊಂಡು ಅತ್ಯಂತ ಜಾಗರೂಕತೆಯಿಂದ ವಾಹನ ಚಲಾಯಿಸಬೇಕೆಂದು ಮನವಿ ಮಾಡಿದರು.

ಕಾಲೇಜಿನ ಡೀನ್ ಡಾ.ಸತ್ಯಮೂರ್ತಿ ಮಾತನಾಡಿ, ಯುವ ಸಮೂಹ ವಾಹನ ಚಲಾಯಿಸುವಾಗ ಹೆಡ್‍ಫೋನ್ ಹಾಗೂ ಇನ್ನಿತರೆ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಅಪಘಾತಗಳ ಪ್ರಮಾಣ ಹೆಚ್ಚಾಗು ತ್ತಿದ್ದು ಅವುಗಳ ನಿಯಂತ್ರಣಕ್ಕೆ ಸಂಚಾರಿ ನಿಯಮಗಳನ್ನು ಪಾಲಿಸ ಬೇಕೆಂದರು.
ರಾಜರಾಜೇಶ್ವರಿ ಸಮೂಹ ಸಂಸ್ಥೆಯ ಕಾರ್ಯನಿರ್ವಹಣಾಧಿಕಾರಿ ಸಿ.ಎನ್.ಸೀತಾರಾಂ ಮಾತ ನಾಡಿ, ದ್ವಿಚಕ್ರ ಸವಾರರು ಹೆಲ್ಮೆಟ್ ಹಾಗೂ ಲಘುವಾಹನ ಚಾಲಕರು ಸೀಟ್‍ಬೆಲ್ಟ್ ಧರಿಸುವ ಮೂಲಕ ಸುರಕ್ಷಿತ ವಾಹನ ಸಂಚಾರಕ್ಕೆ ಆಧ್ಯತೆ ನೀಡಬೇಕೆಂದು ಮನವಿ ಮಾಡಿದರು. ಇದೇ ವೇಳೆ ಕಾಲೇಜಿನ ಉಪ ನ್ಯಾಸಕರು ಸೇರಿದಂತೆ ಸುಮಾರು 800ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಕಾಲೇಜಿನ ಸಿಬ್ಬಂದಿ ವರ್ಗ ಕಾಲೇಜಿನಿಂದ ಮೈಸೂರು ಬೆಂಗಳೂರು ಮುಖ್ಯರಸ್ತೆಯ ನೈಸ್ ಜಂಕ್ಷನ್‍ವರೆಗೆ ಮಾನವ ಸರಪಳಿ ನಿರ್ಮಿಸಿ ಜಾಗೃತಿ ಮೂಡಿಸಿದರು. ಮೂಳೆ ಮತ್ತು ಕೀಲು ದಿನದ (ಬೋನ್ ಅಂಡ್ ಜಾಯಿಂಟ್ ಡೇ) ಅಂಗವಾಗಿ ರಸ್ತೆ ಅಪಘಾತದಲ್ಲಿ ಅಪಘಾತಕ್ಕೊಳಗಾದವರಿಗೆ ಒಂದು ವಾರಗಳ ಕಾಲ ಉಚಿತ ಶಸ್ತ್ರಚಿಕಿತ್ಸೆ ಮಾಡಲಾಗುವುದು ಎಂದು ಕಾಲೇಜು ಆಡಳಿತ ಮಂಡಳಿ ತಿಳಿಸಿದ್ದಾರೆ.

Facebook Comments