ರಿಯಲ್ ಎಸ್ಟೇಟ್ ಉದ್ಯಮಿಗಳ ಕೊಲೆ ಪ್ರಕರಣ : ಪ್ರಮುಖ ಆರೋಪಿ ತೇಜಸ್ ರೂಪಿಸಿದ್ದ ತಂತ್ರ ವಿಫಲ..!

ಈ ಸುದ್ದಿಯನ್ನು ಶೇರ್ ಮಾಡಿ

real-eastete-bussinesmansd
ಬೆಂಗಳೂರು, ಆ.6-ರಿಯಲ್ ಎಸ್ಟೇಟ್ ಉದ್ಯಮಿಗಳ ನಾಪತ್ತೆ ಮತ್ತು ಕೊಲೆ ಪ್ರಕರಣದ ತನಿಖೆಯ ಜಾಡು ತಪ್ಪಿಸಲು ಪ್ರಮುಖ ಆರೋಪಿ ತೇಜಸ್ ಹಲವು ತಂತ್ರಗಳನ್ನು ರೂಪಿಸಿದ್ದ. ಆದರೆ ಈ ತಂತ್ರ ದಕ್ಷಿಣ ವಿಭಾಗದ ಪೊಲೀಸರ ಎದುರು ವಿಫಲವಾಗಿದೆ. ಕಾಣೆಯಾದ ವ್ಯಕ್ತಿಗಳು ರೌಡಿ ಅಸಾಮಿ ಸೈಕಲ್ ರ ವಿಯ ಸಹಚರರು, ಸೈಕಲ್ ರವಿಯ ಬಂಧನದ ನಂತರ ಈ ವ್ಯಕ್ತಿಗಳು ಕಾಣೆಯಾಗಿದ್ದಾರೆ. ಅವರೇ ಮರಳಿ ಬರುತ್ತಾರೆ ಎಂದು ಹೇಳುತ್ತಿದ್ದ ಆರೋಪಿ ತೇಜಸ್, ಪೊಲೀಸರ ದಿಕ್ಕು ತಪ್ಪಿಸುತ್ತಿದ್ದ ಎಂದು ದಕ್ಷಿಣ ವಿಭಾಗದ ಡಿಸಿಪಿ ಡಾ.ಶರಣಪ್ಪ ತಿಳಿಸಿದ್ದಾರೆ.

ಇಬ್ಬರು ರಿಯಲ್ ಎಸ್ಟೇಟ್ ಉದ್ಯಮಿಗಳು ಒಂದೇ ಸಮಯದಲ್ಲಿ ಕಾಣೆಯಾದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಎಸಿಪಿ ಎನ್.ಆರ್. ಮಹಂತರೆಡ್ಡಿ, ಗಿರಿ ನಗರ ಪೊಲೀಸ್ ಠಾಣೆಯ ಪಿಐ ಬಿ.ಎಂ. ಕೊಟ್ರೇಶ್, ಕೆ.ಜಿ.ನಗರ ಠಾಣೆಯ ಪಿಐ ವಿಶ್ವಾಸ್, ಸಿ.ಕೆ.ಅಚ್ಚುಕಟ್ಟು ಠಾಣೆಯ ಪಿಐ ಟಿ.ಟಿ.ಕೃಷ್ಣ ಮತ್ತು ನಾಲ್ವರು ಪಿಎಸ್‍ಐ ಅವರನ್ನು ಒಳಗೊಂಡ 3 ವಿಶೇಷ ತಂಡಗಳನ್ನು ರಚಿಸಲಾಗಿತ್ತು.  ಶಂಕೆಯ ಮೇರೆಗೆ ಆರೋಪಿ ತೇಜಸ್‍ನನ್ನು ಗಿರಿನಗರ ಮತ್ತು ಆರ್.ಆರ್.ನಗರ ಪೊಲೀಸ್ ಠಾಣೆಗಳಿಗೆ ಕರೆಸಿ ವಿಚಾರಣೆ ನಡೆಸಲಾಗಿತ್ತು. ಆದರೆ ಯಾವುದೇ ರೀತಿಯ ಅನುಮಾನ ಬಾರದಂತೆ ಆತ ನಟಿಸಿ, ಕಾಣೆಯಾದವರ ಕುಟುಂಬದವರೊಂದಿಗೆ ಠಾಣೆಗೆ ಬಂದು ಮಾಹಿತಿ ನೀಡುವಂತೆ ನಟಿಸಿದ್ದ ಎಂದು ಡಿಸಿಪಿ ಡಾ.ಶರಣಪ್ಪ ಪ್ರಕಟಣೆಯಲ್ಲಿ ತಿಳಿಸಿದರು.

Facebook Comments

Sri Raghav

Admin