ವಿಶ್ವಸಂಸ್ಥೆಯ ಅಧಿವೇಶನದಲ್ಲಿ ಭಾಷಣ ಮಾಡಲಿದ್ದಾರೆ ಸಚಿವೆ ಸುಷ್ಮಾ ಸ್ವರಾಜ್

ಈ ಸುದ್ದಿಯನ್ನು ಶೇರ್ ಮಾಡಿ

Sushma--01
ವಿಶ್ವಸಂಸ್ಥೆ(ಪಿಟಿಐ),7-ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರು ಸೆಪ್ಟೆಂಬರ್ 29ರಂದು ವಿಶ್ವಸಂಸ್ಥೆಯ ವಾರ್ಷಿಕ ಉನ್ನತ ಮಟ್ಟದ ಸಾಮಾನ್ಯ ಅಧಿವೇಶನ(ಯುಎನ್‍ಜಿಎ) ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.  ವಿಶ್ವಸಂಸ್ಥೆಯ ಸಂಯುಕ್ತ ರಾಷ್ಟ್ರಗಳ ಭಾಷಣಕಾರರ ಪಟ್ಟಿಯಲ್ಲಿ ಸೆ.29ಕ್ಕೆ ಸುಷ್ಮಾ ಭಾಷಣದ ದಿನಾಂಕ ನಿಗದಿಯಾಗಿದೆ.

ಈ ವರ್ಷದ ಯಎನ್‍ಜಿಎ ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಅವರು 2014ರಲ್ಲಿ ಪ್ರಧಾನಮಂತ್ರಿಯಾದ ನಂತರ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯನ್ನು ತಮ್ಮ ಚೊಚ್ಚಲ ಭಾಷಣ ಮಾಡಿದ್ದರು.  73ನೇ ಸಾಮಾನ್ಯ ಅಧಿವೇಶದಲ್ಲಿನ ಭಾಷಣಕಾರರ ಪ್ರಥಮ ಪಟ್ಟಿ ಬಿಡುಗಡೆಯಾಗಿದ್ದು, ಸೆ.29ರಂದು ಅಪರಾಹ್ನ ಸುಷ್ಮಾ ಸಭೆಯನ್ನು ಉದ್ದೇಶಿಸಿ ಭಾಷಣ ಮಾಡುವರು. ಕಳೆದ ವರ್ಷವೂ ಅವರು ಯುಎನ್‍ಜಿಎನಲ್ಲಿ ಭಾಷಣ ಮಾಡಿದ್ದರು.

Facebook Comments

Sri Raghav

Admin