ಓಡ್ರೋ… ಓಡ್ರೋ… ಬೇಗ ತುಂಬ್ ಕೊಳ್ರೋ…!

ಈ ಸುದ್ದಿಯನ್ನು ಶೇರ್ ಮಾಡಿ

Lorry-01

ದಾವಣಗೆರೆ, ಆ.8-ಓಡ್ರೋ… ಓಡ್ರೋ… ಸಿಕ್ಕಿದೋರಿಗೆ ಸೀರುಂಡೆ. ಆಯಿಲ್ ಲಾರಿ ಬಿದ್ಹೋಗಿದೆಯಂತೆ…. ಬಿಂದಿಗೆ, ಪಾತ್ರೆ, ಕ್ಯಾನ್‍ಗಳನ್ನು ಹಿಡಿದು ರುಚಿಗೋಲ್ಡ್ ಅಡುಗೆ ಎಣ್ಣೆ ತುಂಬಿಕೊಳ್ಳಲು ಎದ್ದೇನೋ, ಬಿದ್ದೆನೋ ಎಂಬಂತೆ ಓಡುತ್ತಿದ್ದ ದೃಶ್ಯ ಕಂಡುಬಂದಿದ್ದು, ರಾಷ್ಟ್ರೀಯ ಹೆದ್ದಾರಿ 4ರ ಎಸ್‍ಎಸ್ ಆಸ್ಪತ್ರೆ ಮುಂಭಾಗ.

ರುಚಿಗೋಲ್ಡ್ ಅಡುಗೆ ಎಣ್ಣೆಯನ್ನು ತುಂಬಿಕೊಂಡು ಬೆಂಗಳೂರಿನಿಂದ ಹುಬ್ಬಳ್ಳಿಗೆ ಬೆಳಗ್ಗೆ 8 ಗಂಟೆಯಲ್ಲಿ ತೆರಳುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಮಧ್ಯದಲ್ಲಿ ಉರುಳಿ ಬಿದ್ದಿದೆ. ಇದನ್ನು ಕಂಡ ಸಾರ್ವಜನಿಕರು ಅಡುಗೆ ಎಣ್ಣೆಯನ್ನು ತುಂಬಿಕೊಳ್ಳಲು ಜನರು ಕ್ಯಾನ್‍ಗಳು, ಮನೆಯ ಸಣ್ಣಪುಟ್ಟ ಪಾತ್ರೆ, ಬಿಂದಿಗೆಗಳನ್ನು ಹಿಡಿದುಕೊಂಡು ಬಂದು ಮುಗಿಬಿದ್ದರು. ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕಾಗಮಿಸುವಷ್ಟರಲ್ಲಿ ಇಡೀ ಟ್ಯಾಂಕರ್ ಖಾಲಿಯಾಗಿತ್ತು. ಅಷ್ಟರ ಮಟ್ಟಿಗೆ ಸಾರ್ವಜನಿಕರು ತಾ ಮುಂದು, ನಾಮುಂದು ಎಂದು ಅಡುಗೆ ಎಣ್ಣೆ ಖಾಲಿ ಮಾಡಿದ್ದರು.

ಸಂಚಾರ ಸ್ಥಗಿತ: ರಸ್ತೆಯೆಲ್ಲ ಅಡುಗೆ ಎಣ್ಣೆ ಹರಡಿದ್ದರಿಂದ ವಾಹನ ಸಂಚಾರವನ್ನು ಕೆಲ ಕಾಲ ಸ್ಥಗಿತಗೊಳಿಸಲಾಗಿತ್ತು. ಸಂಚಾರಿ ಪೊಲೀಸರು ಜನರನ್ನು ಚದುರಿಸಲು ಹರಸಾಹಸಪಡಬೇಕಾಯಿತು. ಒಟ್ಟಾರೆ ಈ ಪ್ರದೇಶದ ಜನರಿಗೆ ಇಂದು ಪುಕ್ಕಟೆಯಾಗಿ ಅಡುಗೆ ಎಣ್ಣೆ ದೊರೆತಿದೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin