ಆ.16ರಿಂದ 31ರವರೆಗೆ ರಾಜಭವನದಲ್ಲಿ ಸಾರ್ವಜನಿಕರಿಗೆ ಮುಕ್ತ ಪ್ರವೇಶ

ಈ ಸುದ್ದಿಯನ್ನು ಶೇರ್ ಮಾಡಿ

Rajbhavan--01
ಬೆಂಗಳೂರು, ಆ.8- ಬೆಂಗಳೂರಿನ ರಾಜಭವನ ಆ.16ರಿಂದ 31ರವರೆಗೆ ಸಾರ್ವಜನಿಕರಿಗೆ ಮುಕ್ತವಾಗಲಿದೆ. ದೆಹಲಿ ರಾಷ್ಟ್ರಪತಿ ಭವನ ಮಾದರಿಯಲ್ಲಿ ಸ್ವಾತಂತ್ರ್ಯೋತ್ಸವ ಅಂಗವಾಗಿ ಜನರಿಗೆ ಮುಕ್ತ ಪ್ರವೇಶ ಕಲ್ಪಿಸಲಾಗಿದೆ. ಜನಸಾಮಾನ್ಯರ ರಾಜ್ಯಪಾಲರು ಎಂಬ ಖ್ಯಾತಿಗೆ ಪಾತ್ರರಾಗಿದ್ದ ವಿ.ಎಸ್. ರಮಾದೇವಿ ಅಧಿಕಾರಾವಧಿ ನಂತರ ಜನಸಾಮಾನ್ಯರಿಗೆ ರಾಜಭವನ ಪ್ರವೇಶಿಸಲು ಅನುಮತಿ ಇರಲಿಲ್ಲ. ಇತ್ತೀಚಿನ ದಿನಗಳಲ್ಲಿ ಆಹ್ವಾನಿತ ಗಣ್ಯರು ಮತ್ತು ಅತಿಥಿಗಣ್ಯರಿಗೆ ಮಾತ್ರ ಸೀಮಿತವಾಗಿತ್ತು. ಇದೀಗ ಮತ್ತೊಮ್ಮೆ ಸಾರ್ವಜನಿಕರಿಗೆ ರಾಜಭವನ ತೆರೆದುಕೊಳ್ಳಲಿದೆ.
ಆಗಸ್ಟ್ 16ರಿಂದ 31ರವರೆಗೆ ರಾಜಭವನ ವೀಕ್ಷಿಸಲು ಬಯಸುವವರು ಮುಕ್ತವಾಗಿ ತೆರಳಬಹುದಾಗಿದೆ.ಆದರೆ ಸಾರ್ವಜನಿಕರ ಪ್ರವೇಶಕ್ಕೆ ಕೆಲವು ನಿಯಮ ಹಾಗೂ ಷರತ್ತುಗಳು ಅನ್ವಯವಾಗಲಿದೆ.

ಮೊಘಲ್ ಉದ್ಯಾನಕ್ಕೆ ಫೆ.6ರಿಂದ ಮುಕ್ತ ಅವಕಾಶ:

ಜನರಿಗೆ ಮುಕ್ತ ಅವಕಾಶ ನೀಡಲಾಗುತ್ತದೆ. ಈ ಅವಧಿಯಲ್ಲಿ ಸಾರ್ವಜನಿಕರು ರಾಜಭವನದ ಕಟ್ಟಡ, ವಿಶಾಲ ಉದ್ಯಾನ, ಗಾಜಿನ ಮನೆ ಎಲ್ಲವನ್ನೂ ವೀಕ್ಷಿಸಬಹುದಾಗಿದೆ. ಭೇಟಿಗೆ ಕನಿಷ್ಠ ಐದು ದಿನಗಳ ಮೊದಲು ಹೆಸರು ನೋಂದಾಯಿಸಿಕೊಳ್ಳಬೇಕು. ಒಂದು ತಂಡದಲ್ಲಿ 30 ಜನರಿಗೆ ಪ್ರವೇಶ ಅವಕಾಶ ಕಲ್ಪಿಸಲಾಗುತ್ತದೆ. ಪ್ರತಿ ತಂಡದ ಸುತ್ತಾಟಕ್ಕೆ 30 ನಿಮಿಷ ಮಾತ್ರ ಕಾಲಾವಕಾಶ ನೀಡಲಾಗುತ್ತದೆ.  ನಿಗದಿತ ಸಮಯಕ್ಕಿಂತ 15 ನಿಮಿಷ ಮೊದಲು ಬರಬೇಕು, ಗುರುತಿನ ಚೀಟಿ ಹೊಂದಿರಬೇಕು. ಕೈಚೀಲ, ಮೊಬೈಲ್, ಕ್ಯಾಮರಾವನ್ನು ಕೊಂಡೊಯ್ಯುವಂತಿಲ್ಲ ಪ್ರವೇಶ ಉಚಿತವಾಗಿರುತ್ತದೆ.

Facebook Comments

Sri Raghav

Admin