ಕೇರಳದಲ್ಲಿ ಮುಂಗಾರು ಆರ್ಭಟಕ್ಕೆ 20 ಮಂದಿ ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

Kerala--01

ತಿರುವನಂತಪುರಂ, ಆ.9(ಪಿಟಿಐ)-ಕೇರಳದಲ್ಲಿ ನೈರುತ್ಯ ಮುಂಗಾರು ಆರ್ಭಟಿಸುತ್ತಿದ್ದು, ನಿನ್ನೆ ರಾತ್ರಿಯಿಂದ ರಾಜ್ಯದ ವಿವಿಧೆಡೆ ಕುಂಭದ್ರೋಣ ಮಳೆ, ಹಠಾತ್ ಪ್ರವಾಹ ಮತ್ತು ಭೂಕುಸಿತದಿಂದಾಗಿ 20 ಮಂದಿ ಮೃತಪಟ್ಟಿದ್ದಾರೆ. ಈ ವಿಕೋಪದಲ್ಲಿ ಹಲವರಿಗೆ ಗಾಯಗಳಾಗಿದ್ದು,35 ಕ್ಕೂ ಹೆಚ್ಚು ಮಂದಿ ಕಣ್ಮರೆಯಾಗಿದ್ದಾರೆ.  ಇಡುಕ್ಕಿ, ವೈನಾಡ್, ಕೋಳಿಕೋಡ್ ಮತ್ತು ಮಳಪ್ಪುರಂ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ವರುಣನ ರೌದ್ರಾವತಾರದಿಂದ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಪರಿಸ್ಥಿತಿ ನಿಭಾಯಿಸಲು ಜಿಲ್ಲಾಡಳಿತ ಸೇನೆ ನೆರವು ಕೋರಿದೆ. ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ(ಎನ್‍ಡಿಆರ್‍ಎಫ್) ಘಟಕಗಳು ಸಂತ್ರಸ್ತ ಜಿಲ್ಲೆಗಳತ್ತ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಾಗಿ ಧಾವಿಸಿವೆ.

ಈ ನಾಲ್ಕು ಜಿಲ್ಲೆಗಳಲ್ಲಿ ಪ್ರತ್ಯೇಕ ಮಳೆ ಅನಾಹುತಗಳಲ್ಲಿ 35ಕ್ಕೂ ಹೆಚ್ಚು ಮಂದಿ ಕಣ್ಮರೆಯಾಗಿದ್ದು, ಅವರಿಗಾಗಿ ತೀವ್ರ ಶೋಧ ಮುಂದುವರಿದಿದೆ. ಭೂಕುಸಿತಗಳಿಂದ ಕೆಲವು ಮನೆಗಳು ಮಣ್ಣಿನಲ್ಲಿ ಹುದುಗಿ ಹೋಗಿದ್ದು, ಅವಶೇಷಗಳಡಿ ಸಿಲುಕಿ ರಬಹುದಾದ ಜನರಿಗಾಗಿ ಶೋಧ ನಡೆಯುತ್ತಿದೆ. ಘಟ್ಟ ಪ್ರದೇಶಗಳಲ್ಲಿ ಭೂಕುಸಿತವಾಗಿ ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿದೆ.

Facebook Comments

Sri Raghav

Admin