ಚಾಮುಂಡೇಶ್ವರಿ ದರ್ಶನಕ್ಕೆ ಹೋಗುವ ಮೊದಲು ಜೇಬು ಗಟ್ಟಿ ಮಾಡ್ಕೊಳಿ, ಸೇವಾಶುಲ್ಕದಲ್ಲಿ ಹೆಚ್ಚಳ

ಈ ಸುದ್ದಿಯನ್ನು ಶೇರ್ ಮಾಡಿ

Chamundeshwari
ಮೈಸೂರು,ಆ.9- ಚಾಮುಂಡಿ ಬೆಟ್ಟದಲ್ಲಿನ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಸೇವಾ ಶುಲ್ಕವನ್ನು ಏರಿಕೆ ಮಾಡಿರುವುದಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೇವಾಲಯಕ್ಕೆ ಹೆಚ್ಚಿನ ಆದಾಯ ಬರುತ್ತಿದೆ. ಸಾವಿರಾರು ಭಕ್ತರು ದೇವಾಲಯಕ್ಕೆ ಬಂದು ಕಾಣಿಕೆಯನ್ನು ನೀಡುತ್ತಿದ್ದರೂ ಸಹ ಸೇವಾ ಶುಲ್ಕವನ್ನು ಹೆಚ್ಚಿಸಿರುವುದು ಏಕೆ ಎಂದು ಪ್ರಶ್ನಿಸಿದ್ದಾರೆ.

ಅಭಿಷೇಕಕ್ಕೆ 300 ರೂ. ಸೇವಾ ಶುಲ್ಕವಿತ್ತು. ಅದನ್ನು ಈಗ 550ಕ್ಕೆ ಹೆಚ್ಚಳ ಮಾಡಲಾಗಿದೆ. ಈ ಹಿಂದೆ 300 ರೂ. ಪಡೆಯುತ್ತಿದ್ದಾಗ ಒಬ್ಬರಿಗೆ ಪ್ರವೇಶವಿತ್ತು. 550 ರೂ. ಮಾಡಿದ ಮೇಲೆ ಇಬ್ಬರಿಗೆ ಪ್ರವೇಶ ಕಲ್ಪಿಸಲಾಗಿದೆ. ಆಷಾಢ ಶುಕ್ರವಾರಗಳಂದು ವಿಶೇಷ ಪ್ರವೇಶವನ್ನು ದುಪ್ಪಟ್ಟು ಮಾಡಲಾಗಿದ್ದು, 300 ರೂ. ಮಾಡಲಾಗಿದೆ. ಸಾಮಾನ್ಯ ದಿನಗಳಲ್ಲಿ 100 ರೂ. ವಿಶೇಷ ದರ್ಶನಕ್ಕೆ ನಿಗದಿ ಮಾಡಲಾಗಿದೆ. ಭಕ್ತಾಧಿಗಳು ಇದಕ್ಕೆ ಆಕ್ಷೇಪಣೆ ವ್ಯಕ್ತಪಡಿಸುತ್ತಿದ್ದು, ಶುಲ್ಕವನ್ನು ಕಡಿಮೆಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.

# ಚಾಮುಂಡಿ ಬೆಟ್ಟಕ್ಕೆ ಬಸ್‍ಗಳ ಮಾರ್ಗ ಬದಲಾವಣೆ : 
ಮೈಸೂರು, ಆ. 9- ನಾಲ್ಕನೇ ಆಷಾಢ ಶುಕ್ರವಾರವಾದ ಅಂಗವಾಗಿ ಆ.10ರಂದು ಚಾಮುಂಡಿ ಬೆಟ್ಟಕ್ಕೆ ತೆರಳುವ ಮಾರ್ಗದಲ್ಲಿ ಸುಗಮ ಸಂಚಾರದ ಹಿತದೃಷ್ಟಿಯಿಂದ ಮಾರ್ಗ ಬದಲಾವಣೆ ಮಾಡಿ ನಗರ ಪೊಲಿಸ್ ಆಯುಕ್ತರಾದ ಸುಬ್ರಹ್ಮಣ್ಯೇಶ್ವರ ರಾವ್ ಆದೇಶ ಹೊರಡಿಸಿದ್ದಾರೆ. ನಗರ ಬಸ್ ನಿಲ್ದಾಣದಿಂದ ಚಾಮುಂಡಿ ಬೆಟ್ಟಕ್ಕೆ ತೆರಳುವ ನಗರ ಸಾರಿಗೆ ಬಸ್‍ಗಳ ಮಾರ್ಗ ಬದಲಾವಣೆ ಮಾಡಲಾಗಿದ್ದು, ನಗರ ಸಾರಿಗೆ ಬಸ್‍ಗಳು ಕುರುಬರಹಳ್ಳಿ ಸರ್ಕಲ್‍ನಿಂದ ಕೆ.ಸಿ.ಲೇ ಔಟ್ ಜಂಕ್ಷನ್ ಬಳಿ ಎಡ ತಿರುವು ಪಡೆದು ಕೆ.ಸಿ.ರಸ್ತೆ ಮೂಲಕ ಹೆಲಿಪ್ಯಾಡ್ ರಸ್ತೆ ಜಂಕ್ಷನ್ ತಲುಪಿ ಬಲ ತಿರುವು ಪಡೆದು ಹೆಲಿಪ್ಯಾಡ್ ರಸ್ತೆ ಮೂಲಕ ಮುಂದೆ ಲಲಿತಮಹಲ್ ಹೈವಾಕ್ ಜಂಕ್ಷನ್ ಬಳಿ ಬಲ ತಿರುವು ಪಡೆದು ಹೈವಾಕ್ ರಸ್ತೆ ಮುಖಾಂತರ ಚಾಮುಂಡಿ ಬೆಟ್ಟಕ್ಕೆ ತೆರಳುವುದು.

ಬೆಟ್ಟದಿಂದ ವಾಪಸ್ ನಗರ ಬಸ್‍ನಿಲ್ದಾಣಕ್ಕೆ ತೆರಳುವ ನಗರ ಸಾರಿಗೆ ಬಸ್‍ಗಳು ತಾವರೆಕಟ್ಟೆ ಬಳಿ ಎಡತಿರುವು ಪಡೆದು ಸಿ.ಎ.ಆರ್ ಮುಖಾಂತರ ಬುಲೇಬಾರ್ಡ್ ಸರ್ಕಲ್ ತಲುಪಿ ಎಡ ತಿರುವು ಪಡೆದು ನಗರ ಬಸ್ ನಿಲ್ದಾಣ ತಲುಪುವುದು. ಉಚಿತ ಬಸ್ ಸೇವೆ ಹೊರತುಪಡಿಸಿ ಇನ್ನುಳಿದ ವಿವಿಐಪಿ/ವಿಐಪಿ ಇತರೆ ಎಲ್ಲಾ ವಾಹನಗಳು ತಾವರೆಕಟ್ಟೆ ಬಳಿ ಎಡತಿರುವು ಪಡೆದು ಸಿಎಆರ್ ಮುಂಭಾಗದ ರಸ್ತೆ ಮುಖಾಂತರ ಬುಲೇ ಬಾರ್ಡ್ ಸರ್ಕಲ್ ತಲುಪಿ ಮುಂದೆ ಸಾಗುವ ಬಗ್ಗೆ ಪೊಲೀಸ್ ಆಯುಕ್ತರು ಆದೇಶಿಸಿದ್ದಾರೆ.

Facebook Comments

Sri Raghav

Admin