ತುಪ್ಪವನ್ನು ಯಾರು, ಯಾವಾಗ, ಎಷ್ಟು ಸೇವಿಸಿದರೆ ಒಳ್ಳೆಯದು..?

ಈ ಸುದ್ದಿಯನ್ನು ಶೇರ್ ಮಾಡಿ

Ghee--01
ಅತಿಯಾಗಿ ಸೇವಿಸಿದರೆ ಅಮೃತವೂ ವಿಷವಾಗುತ್ತದೆ. ಅನೇಕ ಅಮೃತ ಸಮಾನವಾದ ಔಷಧಿ ಗುಣಗಳನ್ನು ಹೊಂದಿರುವ ತುಪ್ಪವನ್ನೂ ಸಹ ಅಲ್ಪ ಪ್ರಮಾಣದಲ್ಲಿ ಸೇವಿಸಿದರೆ ದೇಹಕ್ಕೆ ಹಿತವಾಗುತ್ತದೆ. ಹೆಚ್ಚು ಪ್ರಮಾಣದಲ್ಲಿ ಸೇವಿಸಿದರೆ ಹಾನಿಯನ್ನುಂಟು ಮಾಡುತ್ತದೆ. ತುಪ್ಪ ಔಷಧಿ ರೂಪದ ಒಂದು ಆಹಾರ ಪದಾರ್ಥ. ಆದುದರಿಂದ ಇದನ್ನು ಯಾವಾಗಲೂ ಔಷಧಿಗಳ ಹಾಗೆ ಮಿತ ಪ್ರಮಾಣದಲ್ಲಿ ಸೇವಿಸಿದರೆ ದೇಹದ ಆರೋಗ್ಯವನ್ನುಕಾಪಾಡುತ್ತದೆ. ಆಯಸ್ಸನ್ನು ಹೆಚ್ಚಿಸುತ್ತದೆ. ಅದನ್ನೇ ಅತಿಯಾಗಿ, ನಿಯಮವನ್ನು ಬಿಟ್ಟು ಬಳಸಿದರೆ ದೇಹಕ್ಕೆ ಹಾನಿಯನ್ನುಂಟುಮಾಡುತ್ತದೆ.

ತುಪ್ಪವು ಮಧುರಸ, ಶತವೀರ್ಯ, ಸ್ನಿಗ್ಧಗುಣವನ್ನು ಹೊಂದಿದ್ದು ವಾತ ಮತ್ತು ಪಿತ್ತದೋಷಗಳನ್ನು ಕಡಿಮೆ ಮಾಡುವ ವಿಶೇಷ ಗುಣವನ್ನು ಹೊಂದಿದ್ದು, ಕಫದೋಷವನ್ನು ಹೆಚ್ಚು ಮಾಡುತ್ತದೆ. ಆದುದರಿಂದ ವಾತ ಮತ್ತು ಪಿತ್ತ ಪ್ರಕೃತಿಯುಳ್ಳವರು ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಬಹುದು. ಆದರೆ ಕಫ ಪ್ರøತಿಯುಳ್ಳವರು ಇದನ್ನು ಆದಷ್ಟು ಕಡಿಮೆ ಪ್ರಮಾಣದಲ್ಲಿ ಸೇವಿಸಬೇಕು ಅಥವಾ ಸಂಸ್ಕರಿಸಿ ಸೇವಿಸಬೇಕು.

ವಾತ ಮತ್ತು ಪಿತ್ತ ದೇಹ ಪ್ರಕೃತಿಯುಳ್ಳವರು ಪ್ರತಿದಿನ 10 ರಿಂದ 20 ಮಿ.ಲೀ. ಅಂದರೆ 2ರಿಂದ 4 ಚಮಚೆ ಕಾಯಿಸಿದ ತುಪ್ಪವನ್ನು ಉಟದ ಜೊತೆ ಉಪಯೋಗಿಸಬಹುದು. ಆದರೆ ಕಫ ಪ್ರಕೃತಿಯುಳ್ಳವರು ದಿನದಲ್ಲಿ 2 ರಿಂದ 3 ಚಮಚ ಅಂದರೆ 10 ರಿಂದ 15 ಮಿ.ಲೀ. ಪ್ರಮಮಾಣವನ್ನು ಮೀರಿ ಉಪಯೋಗಿಸುವುದು ಒಳ್ಳೆಯದಲ್ಲ. ಬೇಸಿಗೆ ಕಾಲದಲ್ಲಿ ತುಪ್ಪವನ್ನು ಅಧಿಕ ಪ್ರಮಾಣದಲ್ಲಿ ಉಪಯೋಗಿಸಬಹುದು. ಆದರೆ ಶೀತಕಾಲದಲ್ಲಿ ಆದಷ್ಟು ಕಡಿಮೆ ಪ್ರಮಾಣದಲ್ಲಿ ಉಪಯೋಗಿಸಬಹುದು. ಆದರೆ ಶಿತಕಾಲದಲ್ಲಿ ಆದಷ್ಟು ಕಡಿಮೆ ಪ್ರಮಾಣದಲ್ಲಿ ಉಪಯೋಗ ಮಾಡುವುದು ಒಳ್ಳೆಯದು.
ವಿದ್ಯಾರ್ಥಿಗಳು, ಪ್ರೌಢರು, ಗರ್ಭಿಣಿಯರು, ಶ್ರಮಜೀವಿಗಳು, ಕ್ರೀಡಾಪಟುಗಳು, ಬುದ್ಧಿಜೀವಿಗಳು ತುಪ್ಪವನ್ನು ಅಧಿಕ ಪ್ರಮಾಣದಲ್ಲಿ ಉಪಯೋಗಿಸಬಹುದು. ಆದರೆ ವ್ಯಾಯಾಮವಿಲ್ಲದೆ ಕುಳಿತು ಕೆಲಸ ಮಾಡುವವರು, ಅತಿಸ್ಥೂಲ ದೇಹವುಳ್ಳವರು, ಅಜೀರ್ಣ ರೋಗವುಳ್ಳವರು ಹಾಗೂ ಕಫ ಮತು ಅಮರೋಗವುಳ್ಳವರು ತುಪ್ಪವನ್ನು ವಿಶೇಷವಾಗಿ ಸೇವಿಸಬಾರದು.

ಪ್ರಕೃತಿ ಬಹುವಿಚಿತ್ರ, ಎಲ್ಲಿ ಕತ್ತಲಿದೆಯೋ ಅಲ್ಲಿಗೆ ಬೆಳಕು ಬರುತ್ತದೆ. ಎಲ್ಲಿ ವಿಷವಿರುತ್ತದೆಯೋ ಅಲ್ಲಿಯೇ ಅಮೃತವೂ ಇರುತ್ತದೆ. ತುಪ್ಪವನ್ನು ಅತಿಯಾಗಿ ತಿನ್ನುವುದರಿಂದ ಉಂಟಾಗಬಹುದಾದ ತೊಂದರೆಗಳಿಗೆ ಪರಿಹಾರ ಮಜ್ಜಿಗೆ. ತುಪ್ಪವನ್ನು ಮಿತಿ ಇಲ್ಲದೆ ತಿಂದರೆ ಅಜೀರ್ಣವಾಗುತ್ತದೆ. ಆಗ ತಿಳಿಯಾದ ಮಜ್ಜಿಗೆಗೆ ಶುಂಠಿ ಮತ್ತು ಸೈಂಧವ ಲವಣಗಳನ್ನು ಕೂಡಿಸಿ ಸೇವಿಸಿದರೆ ಈ ಅಜೀರ್ಣ ತೊಂದರೆ.

ನಿವಾರಣೆಯಾಗುತ್ತದೆ. ತುಪ್ಪವನ್ನು ಮಿತಿ ಇಲ್ಲದೆ ದೀರ್ಘಕಾಲ ಸೇವಿಸುವುದರಿಂದ ಉಂಟಾಗುವ ಸ್ಥೌಲ್ಯ ಅಥವಾ ಬೊಜ್ಜಿಗೆ ಉತ್ತಮ ಔಷಧಿ. ತಿಳಿಯಾದ ಮಜ್ಜಿಗೆಗೆ ಹಸಿಶುಂಠಿ ಅಥವಾ ಬೆಳ್ಳುಳ್ಳಿಯನ್ನು ಜಜ್ಜಿ ಹಾಕಿ. ಸೈಂಧವ ಲವಣವನ್ನು ಸೇರಿಸಿ, ದಿನದಲ್ಲಿ 2-3 ಸಾರಿ ಸೇವಿಸುತ್ತಾ ಬಂದರೆ ಸ್ವಲ್ಪ ಸಮಯದಲ್ಲಿಯೇ ಬೊಜ್ಜುರೋಗ ಕಡಿಮೆಯಾಗುತ್ತದೆ. ಜೊತೆಗೆ ಪಥ್ಯ ಮತ್ತು ವ್ಯಾಯಾಮ ಅವಶ್ಯಕ.

ಆಹಾರದಲ್ಲಿ ಅಮೃತದಂತೆ ವೈದ್ಯಶಾಸ್ತ್ರದಲ್ಲಿ ದಿವ್ಯೌಷಧಿಯಂತೆ, ಧರ್ಮಾಚರಣೆಗಳಲ್ಲಿ ಪವಿತ್ರತೆಯ ಸಂಕೇತದಂತೆ ಹಾಗೂ ಆಯುರಾರೋಗ್ಯ ರಕ್ಷಣೆಯಲ್ಲಿ ಸಂಜೀವಿನಿಯಂತೆ ಪರಿಗಣಿಸಲ್ಪಟ್ಟಿರುವ ತುಪ್ಪ ನಮ್ಮ ಭಾರತೀಯ ಜೀವನ ಪದ್ಧತಿಯಲ್ಲಿ ಒಂದು ಅವಿಭಾಜ್ಯ ಅಂಗವಾಗಿ ಬೆರೆತುಹೋಗಿದೆ. ಇಂತಹ ಅಮೂಲ್ಯವಾದ ತುಪ್ಪವನ್ನು ಪಾಶ್ಚಿಮಾತ್ಯ ವೈದ್ಯರು ಹಾಗೂ ವಿಜ್ಞಾನಿಗಳು ಇದು ಒಂದುಸಾಧಾರಣ ಜಿಡ್ಡಿನ ಪದಾರ್ಥ, ಇದರ ಸೇವನೆ ದೇಹದ ಆರೋಗ್ಯಕ್ಕೆ ಹಾನಿಕಾರಕ ಎಂದು ಹೇಳುತ್ತಾರೆ. ಈ ಹೇಳಿಕೆ ಎಷ್ಟು ಸಮರ್ಥನೀಯ? ಇದರ ಬಗ್ಗೆ ಇಂದಿನ ಆಧುನಿಕ ವಿಜ್ಞಾನಿಗಳು ಮತ್ತು ವೈದ್ಯರು ಮತ್ತೊಮ್ಮೆ ಆಳವಾಗಿ ಚಿಂತನೆ ಮಾಡಬೇಕಾಗಿದೆ. ತುಪ್ಪದ ಬಗ್ಗೆ ಜನಸಾಮಾನ್ಯರಲ್ಲಿ ಈಗ ಮೂಡಿರುವ ತಪ್ಪು ಅಭಿಪ್ರಾಯಕ್ಕೆ ಸಮರ್ಪಕ ಉತ್ತರವನ್ನು ನೀಡಬೇಕಾಗಿದೆ.

Facebook Comments

Sri Raghav

Admin