ಎಕ್ಸ್ ಪ್ರೆಸ್ ರೈಲು ಡಿಕ್ಕಿ ಹೊಡೆದು 20 ಗೋವುಗಳ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Kalka--01

ನವದೆಹಲಿ, ಆ.9-ಅತಿ ವೇಗದ ಕಲ್ಕಾ-ಶತಾಬ್ಧಿ ಎಕ್ಸ್ ಪ್ರೆಸ್ ರೈಲು ಡಿಕ್ಕಿ ಹೊಡೆದ ಪರಿಣಾಮ 20 ಗೋವುಗಳು ಮೃತಪಟ್ಟ ಘಟನೆ ಇಂದು ಮುಂಜಾನೆ ವಾಯುವ್ಯ ದೆಹಲಿಯ ನರೇಲಾ ಬಳಿ ಸಂಭವಿಸಿದೆ. ಈ ದುರ್ಘಟನೆಯಿಂದ ಈ ಮಾರ್ಗದ ರೈಲುಗಳ ಸಂಚಾರಕ್ಕೆ ಕೆಲಕಾಲ ಅಡಚಣೆಯಾಗಿತ್ತು.
ಹೊಲಂಬಿ ಕಲಾನ್ ಮತ್ತು ನರೇಲಾ ನಡುವಣ ಹಳಿಗಳ ಮೇಲೆ ಗೋವುಗಳ ಹಿಂಡು ಸಾಗುತ್ತಿದ್ದಾಗ ಮುಂಜಾನೆ 5.44ರಲ್ಲಿ ನ್ಯೂಡೆಲ್ಲಿ ಕಲ್ಕಾ ಶತಾಬ್ಧಿ ಎಕ್ಸ್‍ಪ್ರೆಸ್ ರೈಲು ಡಿಕ್ಕಿ ಹೊಡೆದ ಪರಿಣಾಮ 20 ಗೋವುಗಳು ಮೃತಪಟ್ಟು, ಇನ್ನೂ ಕೆಲವು ಹಸುಗಳಿಗೆ ಗಾಯಗಳಾಗಿವೆ.

ಗೋವುಗಳ ಗುಂಪನ್ನು ನೋಡಿ ರೈಲು ಚಾಲಕ ತುರ್ತು ಬ್ರೇಕ್ ಹಾಕಿದರೂ, ಅತಿವೇಗದಲ್ಲಿದ್ದ ಟ್ರೈನ್ 20 ರಾಸುಗಳಿಗೆ ಡಿಕ್ಕಿ ಹೊಡೆಯಿತು. ಅಪಘಾತದಿಂದ ರೈಲು ಹಳಿಗಳಿಗೂ ಹಾನಿಯಾಗಿತ್ತು ಎಂದು ಉತ್ತರ ರೈಲ್ವೆ ವಕ್ತಾರರೊಬ್ಬರು ತಿಳಿಸಿದ್ದಾರೆ.

Facebook Comments

Sri Raghav

Admin