ಮಹಾರಾಷ್ಟ್ರ ಬಂದ್, ಮರಾಠ ಸಮುದಾಯದ ಪ್ರತಿಭಟನೆ, ಜನಜೀವನ ಅಸ್ತವ್ಯಸ್ತ

ಈ ಸುದ್ದಿಯನ್ನು ಶೇರ್ ಮಾಡಿ

Maharashtra--01

ಮುಂಬೈ, ಆ.9-ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿಗೆ ಆಗ್ರಹಿಸಿ ಮಹಾರಾಷ್ಟ್ರದಲ್ಲಿ ಮರಾಠ ಸಮುದಾಯದ ಪ್ರತಿಭಟನೆ ಮುಂದುವರಿದಿದೆ. ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಂದು ಕರೆ ನೀಡಲಾಗಿದ್ದ ರಾಜ್ಯವ್ಯಾಪಿ ಬಂದ್ ವೇಳೆ ಕೆಲವಡೆ ವಾಹನಗಳ ಸಂಚಾರಕ್ಕೆ ಅಡಚಣೆಯಾಗಿ ಜನಜೀವನ ಅಸ್ತವ್ಯಸ್ಥಗೊಂಡಿದೆ.

ಮಹಾರಾಷ್ಟ್ರದ ಲಾತೂರ್, ಜಲ್ನಾ, ಸೋಲಾಪುರ್ ಮತ್ತು ಬುಲ್ಧಾನ ಜಿಲ್ಲೆಗಳು ಸೇರಿದಂತೆ ವಿವಿಧೆಡೆ ಪ್ರತಿಭಟನಾಕಾರರು ಸರ್ಕಾರಿ ಬಸ್‍ಗಳು ಹಾಗೂ ಮತ್ತಿತರ ವಾಹನಗಳ ಸಂಚಾರಕ್ಕೆ ಅಡ್ಡಿಪಡಿಸಿ ಪ್ರತಿಭಟನೆ ನಡೆಸಿದರು. ಸಕಲ್ ಮರಾಠ ಸಮಾಜ ಇಂದು ನವಿ ಮುಂಬೈ ಹೊರತುಪಡಿಸಿ ಮಹಾರಾಷ್ಟ್ರದಾದ್ಯಂತ ಬಂದ್‍ಗೆ ಕರೆ ನೀಡಿತ್ತು. ಕಳೆದ ತಿಂಗಳು ಮರಾಠ ಸಮುದಾಯ ಕರೆ ನೀಡಿದ್ದ ಬಂದ್ ವೇಳೆ ವ್ಯಾಪಕ ಹಿಂಸಾಚಾರಗಳು ನಡೆದಿದ್ದವು.

ಇಂದು ಬೆಳಗ್ಗೆ 8 ರಿಂದ ಸಂಜೆ 6 ಗಂಟೆವರೆಗೆ ರಾಜ್ಯದಾದ್ಯಂತ ಶಾಂತಿಯುತ ಬಂದ್ ಮತ್ತು ಪ್ರತಿಭಟನೆ ನಡೆಸುವುದಾಗಿ ಸಕಲ್ ಮರಾಠ ಸಮಾಜದ ನಾಯಕ ಅಮೋಲ್ ಜಾಧವ್ ರಾವ್ ತಿಳಿಸಿದ್ದಾರೆ.

Facebook Comments

Sri Raghav

Admin