ಈ ವಾರ ಪರದೆ ಮೇಲೆ ಪಾದರಸ

ಈ ಸುದ್ದಿಯನ್ನು ಶೇರ್ ಮಾಡಿ

Padarasa--01
ಆರ್ಟ್ ಎನ್ ಸೋಲ್ ಮೀಡಿಯಾ ಸರ್ವೀಸಸ್ ಲಾಂಛನದಲ್ಲಿ ನಿರ್ಮಾಣ ವಾಗುತ್ತಿರುವ ಪಾದರಸ ಚಿತ್ರವನ್ನು ಕಳೆದ ವಾರ ಸೆನ್ಸಾರ್ ಮಂಡಳಿಯು ವೀಕ್ಷಿಸಿ ಎ ಸರ್ಟಿಫಿಕೆಟ್ ನೀಡಿದೆ. ಈವಾರ ರಾಜ್ಯದಾದ್ಯಂತ ಬಿಡುಗಡೆಯಾಗಲಿರುವ ಈ ಚಿತ್ರದ ಕಥೆ-ಚಿತ್ರಕಥೆ-ಸಂಭಾಷಣೆ-ನಿರ್ದೇಶನ-ಹೃಷಿಕೇಶ್ ಜಂಬಗಿ, ಛಾಯಾಗ್ರಹಣ ಎಂ.ಬಿ. ಅಳ್ಳಿಕಟ್ಟಿ, ಸಂಗೀತ ಎ.ಟಿ. ರವೀಶ್, ಸಾಹಿತ್ಯ ಜಯಂತ್ ಕಾಯ್ಕಿಣಿ, ಗೌಸ್ ಪೀರ್, ಸಂಜಯ್ ಕುಲಕರ್ಣಿ, ಸಂಕಲನ- ಕೆ.ಎಂ.ಪ್ರಕಾಶ್, ಸಹ ನಿರ್ದೇಶನ ಕುಬೇರ್ ಕೆ.ಮಂಡ್ಯ, ಕಲೆ – ಬಾಬು ಖಾನ್, ನೃತ್ಯ ಮನುಮಾಸ್ಟರ್, ನಾಗಿ, ಜಗನ್, ನಿರ್ಮಾಣ ನಿರ್ವಹಣೆ ಪ್ರಕಾಶ್ ಮಧುಗಿರಿ. ತಾರಾಗಣದಲ್ಲಿ – ಸಂಚಾರಿ ವಿಜಯ್, ವೈಷ್ಣವಿ ಮೆನನ್, ಮನಸ್ವಿನಿ, ನಿರಂಜನ್ ದೇಶಪಾಂಡೆ, ಜೈಜಗದೀಶ್, ಚಿ.ಗುರುದತ್, ಶೋಭರಾಜ್, ಭವ್ಯ, ಹನುಮಂತೇಗೌಡ, ವಿಜಯ್ ಚೆಂಡೂರ್, ರವಿಕಲ್ಯಾಣ್ ಮುಂತಾದವರಿದ್ದಾರೆ.

Facebook Comments

Sri Raghav

Admin