ವೆಬ್ ಸೀರಿಸ್ ಸಾಹಸಕ್ಕೆ ಶಿವಣ್ಣನ ಪುತ್ರಿ ನಿವೇದಿತಾ

ಈ ಸುದ್ದಿಯನ್ನು ಶೇರ್ ಮಾಡಿ

Nivedita--01

ಹ್ಯಾಟ್ರಿಕ್‍ಹೀರೋ ಶಿವರಾಜ್‍ಕುಮಾರ್ ಅವರ ಪುತ್ರಿ ನಿವೇದಿತಾ ಶಿವರಾಜ್‍ಕುಮಾರ್ ಈಗ ಹೊಸ ಪ್ರಯತ್ನವೊಂದಕ್ಕೆ ಕೈಹಾಕಿದ್ದಾರೆ. ಅವರು ಈಗ ಹೊಸ ವೆಬ್‍ಸೀರಿಸ್‍ವೊಂದನ್ನು ಶುರು ಮಾಡಿದ್ದಾರೆ. ಅಂದಹಾಗೆ, ಶಿವರಾಜ್‍ಕುಮಾರ್ ಅವರ ಶ್ರೀಮುತ್ತು ಸಿನಿ ಸರ್ವಿಸಸ್ ಬ್ಯಾನರ್‍ನಲ್ಲಿ ಬರುತ್ತಿರುವ ಹೇಟ್ ಯು ರೋಮಿಯೋ ಎಂಬ ಈ ವೆಬ್ ಸೀರಿಸ್‍ನಲ್ಲಿ ಅರವಿಂದ್ ಅಯ್ಯರ್ ನಾಯಕನಾಗಿ ಕಾಣಿಸಿ ಕೊಳ್ಳುತ್ತಿದಾರೆ. ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಗಮನಸೆಳೆದ ಈ ನಟ ಸದ್ಯಕ್ಕೆ ಭೀಮಸೇನ ನಳ ಮಹರಾಜ ಸಿನಿಮಾದಲ್ಲಿ ಕೂಡ ನಟಿಸುತ್ತಿದ್ದಾರೆ. ಇದೀಗ ಶಿವಣ್ಣ ಬ್ಯಾನರ್‍ನಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.
ಹೇಟ್ ಯು ರೋಮಿಯೋ ಸಿನಿಮಾದ ಫಸ್ಟ್‍ಲುಕ್ ಪೋಸ್ಟರ್ ಕೆಲದಿನಗಳ ಹಿಂದಷ್ಟೇ ಬಿಡುಗಡೆಯಾಗಿತ್ತು. ಇದೀಗ ಈ ಸೀರೀಸ್‍ನ ಹೊಸ ಪೋಸ್ಟರ್‍ಗಳು ಹೊರಬಂದಿದೆ. ನಿವೇದಿತಾ ಶಿವರಾಜ್‍ಕುಮಾರ್ ಅವರ ಶ್ರೀ ಮುತ್ತು ಸಿನಿ ಸರ್ವಿಸ್ ಹಾಗೂ ಸಕ್ಕತ್ ಸ್ಟುಡಿಯೊ ಸಹ ನಿರ್ಮಾಣದಲ್ಲಿ ಹೇಟ್ ಯು ರೋಮಿಯೋ ನಿರ್ಮಾಣವಾಗುತ್ತಿದೆ. ಈ ವೆಬ್ ಸೀರಿಸ್‍ನ ಚಿತ್ರೀಕರಣ ಇದೀಗ ಪ್ರಾರಂಭಿಕ ಹಂತದಲ್ಲಿದೆ.

ದಕ್ಷಿಣ ಭಾರತದಲ್ಲೇ  ಅತಿದೊಡ್ಡ ವೆಬ್‍ಸೀರೀಸ್ ಇದಾಗಿದ್ದು, ಪ್ರಪ್ರಥಮ ಬಾರಿಗೆ ಇದರ ಚಿತ್ರೀಕರಣ ವಿದೇಶದಲ್ಲಿ ನಡೆಯಲಿದೆ. ಈ ಸೀರಿಸ್‍ನಲ್ಲಿ 30 ನಿಮಿಷದ ಒಟ್ಟು 7 ಸಂಚಿಕೆಗಳಿರುತ್ತವೆ. ಶ್ರೀಮುತ್ತು ಸಿನಿ ಸರ್ವಿಸ್ ಹಾಗೂ ಸಕ್ಕತ್‍ಸ್ಟುಡಿಯೋ ಸಹಯೋಗ ದಲ್ಲಿ ಈಗಾಗಲೇ ಮಾನಸ ಸರೊವರ ಎಂಬ ಹೊಸ ಧಾರಾವಾಹಿ ಮೂಡಿಬರುತ್ತಿದ್ದು, ಈ ಸಂಸ್ಥೆಯ ಮೊದಲ ವೆಬ್ ಸೀರೀಸ್ ಅಗಿ ಹೇಟ್ ಯು ರೋಮಿಯೋ ಮೂಡಿಬರುತ್ತಿದೆ.

Facebook Comments

Sri Raghav

Admin