ಇಂದಿನ ಪಂಚಾಗ ಮತ್ತು ರಾಶಿಫಲ (10-08-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಎಲ್ಲಾ ಪ್ರಾಣಿಗಳಿಗೂ ಒಂದೇ ಒಂದು ಶ್ರೇಷ್ಠವಾದ ಆತ್ಮವು. ಮೂರ್ಖರಿಂದ ಅದು ಬೆಳಕಿನಂತೆ, ಆಕಾಶದಂತೆ, ನಾನಾ ವಿಧವಾಗಿ  ಗ್ರಹಿಸಲ್ಪಡುತ್ತದೆ. -ಭಾಗವತ 

Rashi
ಪಂಚಾಂಗ : ಗುರುವಾರ, 10.08.2018
ಸೂರ್ಯ ಉದಯ ಬೆ.06.07 / ಸೂರ್ಯ ಅಸ್ತ ಸಂ.06.43
ಚಂದ್ರ ಉದಯ ನಾ.ಬೆ.5.47 / ಚಂದ್ರ ಅಸ್ತ ಸಂ.5.51
ವಿಲಂಬಿ ಸಂವತ್ಸರ / ದಕ್ಷಿಣಾಯಣ / ಗ್ರೀಷ್ಮ ಋತು
ಆಷಾಢ ಮಾಸ / ಕೃಷ್ಣ ಪಕ್ಷ / ತಿಥಿ : ಚತುರ್ದಶಿ (ರಾ.7.08)
ನಕ್ಷತ್ರ: ಪುಷ್ಯಾ (ರಾ.2.54) / ಯೋಗ: ಸಿದ್ಧಿ (ಮ.3.51)
ಕರಣ: ಭದ್ರೆ- ಶಕುನಿ- ಚತುಷ್ಪಾದ (ಬೆ.8.58-ರಾ.7.08-ರಾ.5.18)
ಮಳೆ ನಕ್ಷತ್ರ: ಪುಷ್ಯ / ಮಾಸ: ಕಟಕ / ತೇದಿ:26

# ರಾಶಿ ಭವಿಷ್ಯ 
ಮೇಷ: ಸ್ನೇಹಿತರೊಂದಿಗೆ ಹಣಕಾಸು ವ್ಯವಹಾರ ಮಾಡುವಾಗ ಉದಾಸೀನ ಬೇಡ.
ವೃಷಭ: ಕೋರ್ಟ್ ಕೇಸ್ ನಿಮ್ಮ ಪರವಾಗಿರುವವು.
ಮಿಥುನ: ಕದಡಿದ್ದ ಕುಟುಂಬದ ನೆಮ್ಮದಿ ತಿಳಿಯಾಗುವುದು.
ಕಟಕ: ನಿಮಗೆ ದಕ್ಕಬೇಕಾದಷ್ಟೆ ನಿಮ್ಮ ಕೈ ಸೇರುವುದು.
ಸಿಂಹ: ಸಾಲ ತೀರಿಸುವಿರಿ. ಸರ್ಕಾರಿ ನೌಕರರಿಗೆ ಬಿಡುವಿಲ್ಲದ ಕೆಲಸವಿದೆ.
ಕನ್ಯಾ: ವಿವಾದಗಳು ಇತ್ಯರ್ಥಗೊಂಡು ನೆಮ್ಮದಿ ಕಾಣುವಿರಿ. ನಿಮ್ಮ ಮೇಲಿನ ಬೃಹತ್ ಜವಾಬ್ದಾರಿಯನ್ನು ಕಳೆದುಕೊಳ್ಳುವಿರಿ.
ತುಲಾ: ತಾಯಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ಕೊಡಿಸುವಿರಿ.
ವೃಶ್ಚಿಕ: ಮಹತ್ತರ ಕಾರ್ಯವೊಂದು ನಿಮ್ಮಿಂದ ನೆರವೇರಲಿದೆ.
ಧನುಸ್ಸು: ಹಿರಿಯರ ಆರೋಗ್ಯ ನಿಮಿತ್ತ ಆಸ್ಪತ್ರೆ ಖರ್ಚು ಎದುರಾಗುವುದು.
ಮಕರ: ಅನಿರೀಕ್ಷಿತ ಸಾಧು ಸಂತರ ಭೇಟಿ ಗೊಂದಲ ತಿಳಿಯಾಗುವುದು.
ಕುಂಭ: ಯೋಜನೆಗಳು ಕಾರ್ಯರೂಪಕ್ಕೆ ಬರಲಿವೆ.
ಮೀನ: ವೈಯಕ್ತಿಕ ಜೀವನ ಉತ್ತಮಗೊಳ್ಳಲಿದೆ.

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

Facebook Comments

Sri Raghav

Admin