ಖುದ್ದು ಗದ್ದೆಗೆ ಇಳಿದು ಭತ್ತ ನಾಟಿ ಮಾಡಲಿದ್ದಾರೆ ಮುಖ್ಯಮಂತ್ರಿ ಕುಮಾರಾಸ್ವಾಮಿ ..!

ಈ ಸುದ್ದಿಯನ್ನು ಶೇರ್ ಮಾಡಿ

Kumaraswamy--0001

ಬೆಂಗಳೂರು. ಆ. 10 : ರೈತರಿಗೆ ಕೃಷಿ ಚಟುವಟಿಕೆಯಲ್ಲಿ ಪ್ರೋತ್ಸಾಹಿಸಲು ಹಾಗೂ ಆತ್ಮಸ್ಥೈರ್ಯ ತುಂಬಲು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಸೀತಾಪುರದ ಹೊರವಲಯದ ಮಹದೇವಮ್ಮ ಎಂಬುವರ 5 ಎಕರೆ ಜಮೀನಿನಲ್ಲಿ ಆಗಸ್ಟ್ 11 ರಂದು ಭತ್ತ ನಾಟಿ ಮಾಡಲು ಮುಂದಾಗಿದ್ದಾರೆ.

ಕಳೆದ ಎರಡು ವರ್ಷದಿಂದ ಮಂಡ್ಯ ಜಿಲ್ಲೆಯ ರೈತರು ನೀರಿನ ಕೊರತೆಯಿಂದಾಗಿ ಭತ್ತ ನಾಟಿ ಮಾಡಲು ಸಾಧ್ಯವಾಗಿರಲಿಲ್ಲ. ಅಲ್ಲದೇ ಕೃಷಿ ಇಲಾಖೆಯಿಂದ ರೈತರಿಗೆ ಭತ್ತ ನಾಟಿ ಮಾಡದಿರಲು, ಮನವಿ ಸಹ ಮಾಡಲಾಗಿತ್ತು. ಈ ವರ್ಷ ಕಾವೇರಿ ಕಣಿವೆ ಭಾಗದಲ್ಲಿ ಉತ್ತಮ ಮಳೆಯಾದ ಹಿನ್ನೆಲೆ, ಭತ್ತವನ್ನು ನಾಟಿ ಮಾಡಲು ಒಳ್ಳೆಯ ವಾತಾವರಣ ಕೂಡಿ ಬಂದಿದೆ.

ಸುಮಾರು ಮೂರು ಗಂಟೆಗಳ ಕಾಲ ನಡೆಯಲಿರುವ ಭತ್ತ ನಾಟಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಯವರು ರೈತರ ಜೊತೆ ಸೇರಿ ಖುದ್ದು, ನಾಟಿ ಮಾಡಲು ಮುಂದಾಗಿರುವುದು ಈ ಭಾಗದ ರೈತರಲ್ಲಿ ಸಂತಸವನ್ನು ತಂದಿರುವ ಜೊತೆಯಲ್ಲಿ ಸರ್ಕಾರ ತಮ್ಮ ನೆರವಿಗೆ ಇದೆ ಎಂಬ ಭಾವನೆ ಮೂಡಿದೆ.   ಖ್ಯಮಂತ್ರಿಯವರೇ, ರೈತ ಮಹಿಳೆಯರು ಹಾಗೂ ರೈತ ಬಂಧುಗಳೊಂದಿಗೆ ನಾಟಿ ಮಾಡುತ್ತಿರುವುದು ಸಕರಾತ್ಮಕ ಬೆಳವಣಿಗೆಯಾಗಿದ್ದು, ಭತ್ತದ ಬೆಳೆಯನ್ನು ಬೆಳೆಯಲು ರೈತರು ಮುಂದಾಗಿದ್ದಾರೆ.

Facebook Comments

Sri Raghav

Admin