ಗೋಕರ್ಣ ದೇವಾಲಯ ಹಸ್ತಾಂತರ ಆದೇಶ ರದ್ದು, ರಾಮಚಂದ್ರಾಪುರ ಮಠಕ್ಕೆ ಹಿನ್ನೆಡೆ

ಈ ಸುದ್ದಿಯನ್ನು ಶೇರ್ ಮಾಡಿ

Ramachandrapura-mutt

ಬೆಂಗಳೂರು. ಆ. 10 : ಗೋಕರ್ಣ ದೇವಾಲಯವನ್ನು ರಾಮಚಂದ್ರಾಪುರ ಮಠಕ್ಕೆ ಹಸ್ತಾಂತರ ಪಡಿಸಿದ ಆದೇಶವನ್ನ ರದ್ದುಪಡಿಸಿ ಹೈಕೋರ್ಟ್ ಆದೇಶ ಹೊರಡಿಸಿದೆ. 2008ರ ಆಗಸ್ಟ್ 12ರಂದು ಅಂದಿನ ಸರ್ಕಾರ ಗೋಕರ್ಣ ದೇವಾಲಯವನ್ನು ರಾಮಚಂದ್ರಾಪುರ ಮಠಕ್ಕೆ ಹಸ್ತಾಂತರಿಸಿತ್ತು. ಇದೇ ವೇಳೆ ಸರ್ಕಾರ ನಿರ್ಧಾರವನ್ನು ಪ್ರಶ್ನೆ ಮಾಡಿ ರಾಜ್ಯ ಹೈಕೋರ್ಟ್ ನಲ್ಲಿ ಬಾಲಕೃಷ್ಣ ದೀಕ್ಷಿತ್, ಎನ್ನುವರು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ನಲ್ಲಿ ಸಲ್ಲಿಸಿದ್ದರು.

ರಾಜ್ಯದ ಸರಕಾರದ ಆದೇಶದಲ್ಲಿ ಲೋಪದೋಷಗಳಿವೆ. ಮಹಾಬಲೇಶ್ವರ ದೇವಸ್ಥಾನವನ್ನು ಧಾರ್ಮಿಕ ದತ್ತಿ ಪಟ್ಟಿಯಿಂದ ಕೈಬಿಟ್ಟಿದ್ದು ಸರಿಯಲ್ಲ. ಹೀಗಾಗಿ, ಬಿಎಸ್ವೈ ಸರಕಾರದ ಆದೇಶವನ್ನು ರದ್ದುಗೊಳಿಸುತ್ತಿದ್ದೇವೆ. ಗೋಕರ್ಣ ದೇವಸ್ಥಾನವು ಧಾರ್ಮಿಕ ದತ್ತಿ ದೇಗುಲವಾಗಿ ಮುಂದುವರಿಯಲಿ ಎಂದು ಹೈಕೋರ್ಟ್ ಪೀಠ ತನ್ನ 256 ಪುಟಗಳ ತೀರ್ಪಿನಲ್ಲಿ ತಿಳಿಸಿದೆ.  ಗೋಕರ್ಣ ದೇವಸ್ಥಾನಕ್ಕೆ ತತ್ಕ್ಷಣವೇ ಡಿಸಿ ನೇತೃತ್ವದಲ್ಲಿ ಉಸ್ತುವಾರಿ ಸಮಿತಿ ರಚನೆಯಾಗಬೇಕು ಎಂದು ಆದೇಶಿಸಿದ ನ್ಯಾಯಾಲಯವು, ಸಮಿತಿಯ ಸಲಹೆಗಾರರಾಗಿ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಬಿ.ಎನ್. ಶ್ರೀಕೃಷ್ಣ ಅವರನ್ನು ನೇಮಿಸಿದೆ. ಸೆ. 10ರಂದು ಉಸ್ತುವಾರಿ ಸಮಿತಿ ಅಸ್ತಿತ್ವಕ್ಕೆ ಬರಲಿದ್ದು, ಅಲ್ಲಿಯವರೆಗೂ ಗೋಕರ್ಣ ಕ್ಷೇತ್ರವು ರಾಮಚಂದ್ರಾಪುರ ಮಠದ ಸುಪರ್ದಿಯಲ್ಲೇ ಇರಲಿದೆ.

ಅಷ್ಟರೊಳಗೆ ಗೋಕರ್ಣ ದೇವಸ್ಥಾನದ ಸ್ಥಿರಾಸ್ತಿ, ಚರಾಸ್ತಿ ಪಟ್ಟಿಯನ್ನು ತಯಾರಿಸಿ ಎರಡು ವಾರದಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ನ್ಯಾ| ಅರವಿಂದ್ ಕುಮಾರ್ ಮತ್ತು ನ್ಯಾ| ಬಿ.ವಿ. ನಾಗರತ್ನ ಅವರಿದ್ದ ಹೈಕೋರ್ಟ್ ಪೀಠ ಸೂಚಿಸಿದೆ. ಹಾಗೆಯೇ ಗೋಕರ್ಣ ದೇವಾಲಯ ಧಾರ್ಮಿಕ ದತ್ತಿ ದೇಗುಲವಾಗಿ ಮುಂದುವರೆಯಲಿದೆಎಂದು ಹೈಕೋರ್ಟ್  ಗೋಕರ್ಣ ದೇವಸ್ಥಾನಕ್ಕೆ ತತ್ಕ್ಷಣವೇ ಡಿಸಿ ನೇತೃತ್ವದಲ್ಲಿ ಉಸ್ತುವಾರಿ ಸಮಿತಿ ರಚನೆಯಾಗಬೇಕು ಎಂದು ಆದೇಶಿಸಿದ್ದು, ಸಮಿತಿಯ ಸಲಹೆಗಾರರಾಗಿ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಬಿ.ಎನ್. ಶ್ರೀಕೃಷ್ಣ ಅವರನ್ನು ನೇಮಿಸಿದೆ.

ಶ್ರೀಕ್ಷೇತ್ರ ಮಠದ ಆಡಳಿತಕ್ಕೆ ಬಂದಮೇಲೆ ದೇವಸ್ಥಾನದ ಸಂಪೂರ್ಣ ಆರ್ಥಿಕ ವ್ಯವಸ್ಥೆಯನ್ನು ಪಾರದರ್ಶಕ ಮಾಡಲಾಗಿದೆ. ಇಲ್ಲಿ ಬರುವ ಪ್ರತಿ ಪೈಸೆಯೂ ಕೂಡ ಅತ್ಯಂತ ಪಾರದರ್ಶಕವಾಗಿ ನಿರ್ವಹಿಸಲ್ಪಡುತ್ತದೆ ಎಂದು ಮಠ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು. 2008ರಲ್ಲಿ ಅಂದಿನ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಸರ್ಕಾರವು, ಗೋಕರ್ಣ ದೇವಸ್ಥಾನವನ್ನು ರಾಮಚಂದ್ರಾಪುರ ಮಠಕ್ಕೆ ಹಸ್ತಾಂತರಿಸಿತ್ತು.

# ಹಸ್ತಾಂತರಿಸಲು ಸರಕಾರ ಕೊಟ್ಟ ಕಾರಣವೇನಾಗಿತ್ತು? :
ಐದು ದಶಕಗಳ ಕಾಲ ಗೋಕರ್ಣದ ದೇವಸ್ಥಾನವು ಏಕ ವ್ಯಕ್ತಿಯ ಆಡಳಿತದಲ್ಲಿತ್ತು. ಹೀಗಾಗಿ, ಒಂದು ಪ್ರಬಲ ಸಂಸ್ಥೆಯ ಆಡಳಿತದ ಅಡಿಯಲ್ಲಿ ಸೇರಿಸಿದರೆ ಶ್ರೀ ಕ್ಷೇತ್ರ ಇನ್ನಷ್ಟು ಬೆಳಯಬಹುದು ಎಂಬ ಕಾರಣ ಕೊಟ್ಟು ಯಡಿಯೂರಪ್ಪ ಸರಕಾರವು ರಾಮಚಂದ್ರಾಪುರ ಮಠಕ್ಕೆ ಅದನ್ನು ಹಸ್ತಾಂತರಿಸಿ ಆದೇಶ ಹೊರಡಿಸಿತ್ತು. ತುಮಕೂರಿನ ಯಡಿಯೂರು ಸಿದ್ದಲಿಂಗೇಶ್ವರ ದೇವಸ್ಥಾನವನ್ನ ಗದಗ್ನ ತೋಂಟದಾರ್ಯ ಮಠದ ಸುಪರ್ದಿಗೆ ಒಪ್ಪಿಸುವ ಕುರಿತೂ ಆಗಿನ ಸರಕಾರ ಚಿಂತನೆ ನಡೆಸಿತ್ತು. ಆದರೆ, ಆದೇಶವು ಗೋಕರ್ಣ ದೇವಸ್ಥಾನಕ್ಕೆ ಮಾತ್ರ ಸೀಮಿತವಾಯಿತು.

ಇದಾದ ಬೆನ್ನಲ್ಲೇ ಸರಕಾರದ ಆದೇಶ ಪ್ರಶ್ನಿಸಿ ಕೋರ್ಟ್ ಮೊರೆ ಹೋಗಲಾಗಿತ್ತು. ಇದೀಗ ನ್ಯಾಯಾಲಯದಲ್ಲಿ ಈ ಆದೇಶ ರದ್ದುಗೊಂಡಿರುವ ಹಿನ್ನೆಲೆಯಲ್ಲಿ ರಾಮಚಂದ್ರಾಪುರ ಮಠಕ್ಕೆ ಒಂದೇ ಮಾರ್ಗ ಉಳಿದಿದೆ. ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆ ಹೋಗಬಹುದು. ಅಲ್ಲಿಯೂ ಹಿನ್ನಡೆಯಾದರೆ ಗೋಕರ್ಣ ದೇವಸ್ಥಾನವನ್ನು ಬಿಟ್ಟುಕೊಡುವುದು ರಾಮಚಂದ್ರಾಪುರ ಮಠಕ್ಕೆ ಅನಿವಾರ್ಯವಾಗುತ್ತದೆ.

# ಪ್ರಕರಣದ ಹಿನ್ನೆಲೆ :
ಗೋಕರ್ಣ ದೇವಾಲಯ  ಯಡಿಯೂರಪ್ಪನವರು ರಾಜ್ಯದ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅಂದರೆ 14.08.2008ರಲ್ಲಿ ಗೋಕರ್ಣ ದೇವಾಲಯವನ್ನು ಹಿಂದೂ ಧಾರ್ಮಿಕ ದತ್ತಿ ಮತ್ತು ಧರ್ಮದಾಯಿ ಇಲಾಖೆಯ ವ್ಯಾಪ್ತಿಯಿಂದ ಹೊಸನಗರ ರಾಮಚಂದ್ರಾಪುರ ಮಠದ ಸುಪರ್ದಿಗೆ ವಹಿಸಲಾಗಿತ್ತು.   ಇತಿಹಾಸ ಪ್ರಸಿದ್ದ ಗೋಕರ್ಣ ಮಹಾಬಲೇಶ್ವರ ದೇವಾಲಯವನ್ನು ಸರಕಾರ ಮತ್ತೆ ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಇಂಗಿತ ವ್ಯಕ್ತ ಪಡಿಸಿರುವ ಹಿನ್ನಲೆಯಲ್ಲಿ, ಸರಕಾರದ ವಿರುದ್ದ ಭಾರೀ ವಿರೋಧ ವ್ಯಕ್ತ ವಾಗಿತ್ತು. ಗೋಕರ್ಣ ದೇವಸ್ಥಾನ ಯಾವತ್ತಿಗೂ ಕೂಡ ರಾಮಚಂದ್ರಾಪುರ ಮಠದ್ದೇ ಆಗಿರುವ ಕಾರಣ ಸರಕಾರಕ್ಕೆ ಈ ದೇವಸ್ಥಾನದ ಮೇಲೆ ಎಂದಿಗೂ ಹಕ್ಕು ಇರಲಿಲ್ಲ. ಪ್ರಚಲಿತ ಕಾನೂನಿನಂತೆ ಗೋಕರ್ಣ ದೇವಸ್ಥಾನವನ್ನು ಅಧಿಸೂಚಿತ ಪಟ್ಟಿಗೆ ಸೇರಿಸಲು ಸಾಧ್ಯವಿರಲಿಲ್ಲ.

ಈ ವಿಚಾರವನ್ನು ಸರಕಾರವೇ ತನ್ನ ಅದೇಶ ಪ್ರಕ್ರಿಯೆಯಲ್ಲಿ ಹಾಗೂ ನ್ಯಾಯಾಲಯದಲ್ಲಿ ನಿರ್ದಿಷ್ಟವಾಗಿ ಹೇಳಿತ್ತು. ಇದೇ ನಿಲುವನ್ನು ಆಧರಿಸಿ ಸರಕಾರ ಸರ್ವೋಚ್ಛ ನ್ಯಾಯಾಲಯದಲ್ಲಿ ಅಫಿಡವಿಟ್ ಸಲ್ಲಿಸಿದೆ ಎಂದು ಮಠ ಸ್ಪಷ್ಟನೆ ನೀಡಿತ್ತು. ಶ್ರೀಕ್ಷೇತ್ರ ಮಠದ ಆಡಳಿತಕ್ಕೆ ಬಂದಮೇಲೆ ದೇವಸ್ಥಾನದ ಸಂಪೂರ್ಣ ಆರ್ಥಿಕ ವ್ಯವಸ್ಥೆಯನ್ನು ಪಾರದರ್ಶಕ ಮಾಡಲಾಗಿದೆ. ಇಲ್ಲಿ ಬರುವ ಪ್ರತಿ ಪೈಸೆಯೂ ಕೂಡ ಅತ್ಯಂತ ಪಾರದರ್ಶಕವಾಗಿ ನಿರ್ವಹಿಸಲ್ಪಡುತ್ತದೆ ಎಂದು ಮಠ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿತ್ತು.

ಇವೆಲ್ಲದರ ನಡುವೆ, ದೇವಾಲಯವನ್ನು ರಾಮಚಂದ್ರಾಪುರ ಮಠಕ್ಕೆ ವಹಿಸಿದ್ದ ಅಂದಿನ ಸರಕಾರದ ಕ್ರಮವನ್ನು ಪ್ರಶ್ನಿಸಿ, ಬಾಲಚಂದ್ರ ವಿಘ್ನೇಶ್ವರ ದೀಕ್ಷಿತ್‌ ಎನ್ನುವವರು ನ್ಯಾಯಾಲಯದಲ್ಲಿ ತಕರಾರು ಅರ್ಜಿ ಸಲ್ಲಿಸಿದ್ದರು. ದೇವಾಲಯದಿಂದ ಬರುವ ಆದಾಯದಲ್ಲಿ ಕೋಟ್ಯಾಂತರ ರೂಪಾಯಿ ಅವ್ಯವಹಾರ ನಡೆಯುತ್ತಿದೆ. ಆ ಹಣವೆಲ್ಲಾ ಮಠದ ಪಾಲಾಗುತ್ತಿದೆ. ಹೀಗಾಗಿ, ದೇವಾಲಯವನ್ನು ಮರಳಿ ಸರಕಾರದ ವಶಕ್ಕೆ ಪಡೆಯಲು ಆದೇಶಿಸಬೇಕೆಂದು ದೀಕ್ಷಿತ್‌ ಕೋರಿದ್ದರು.

Facebook Comments

Sri Raghav

Admin