ಒಮ್ಮೆ ಟ್ರೈ ಮಾಡಿ ಈ 20 ಸಿಂಪಲ್ ಹೆಲ್ತ್ ಟಿಪ್ಸ್..!

ಈ ಸುದ್ದಿಯನ್ನು ಶೇರ್ ಮಾಡಿ

Health-Tips--01

# ಆಯಾಸಗೊಂಡ ಪಾದವನ್ನು ಉಪ್ಪಿನೊಂದಿಗೆ ಮಿಶ್ರಣ ಮಾಡಿದ ಒಂದು ಬಕೆಟ್ ಬೆಚ್ಚಗಿನ ನೀರಿನಲ್ಲಿ ನೆನೆಸಿ.
# ಕೂದಲಿನ ತುದಿ ಸೀಳಾಗಿದೆಯೆ? ನಿಮ್ಮ ಕೂದಲನ್ನು ತಿರುಚಿ ಅಥವಾ ಗಂಟು ಕಟ್ಟುವ ರೀತಿ ವಿನ್ಯಾಸಗೊಳಿಸಿ. ಅದನ್ನು ತೆರೆಯಲು ಬಿಡಬೇಡಿ. ಸರಿಯಾದ ಬೆಳವಣಿಗೆಗೆ ಪ್ರತಿ 6 ವಾರಗಳಿಗೊಮ್ಮೆ ನಿಮ್ಮ ಕೂದಲನ್ನು ಟ್ರಿಮ್ ಮಾಡಿ.
# ಬಿರುಕುಬಿಟ್ಟ ಹಿಮ್ಮಡಿಗಳು? ಸಾಸಿವೆ ಎಣ್ಣೆ, ಪ್ಯಾರಾಫಿನ್ ಮೇಣದ ಮಿಶ್ರನವನ್ನು ಲೇಪಿಸಬೇಕು. 10-15 ದಿನಗಳಿಗೊಮ್ಮೆ ಇದನ್ನು ಪುನರಾವರ್ತನೆ ಮಾಡಬೇಕು.
# ಸ್ಯಾನ್ ಬರ್ನ್ : ತಲಾ ಅರ್ಧ ಚಮಚಗಳಷ್ಟು ಗ್ಲಿಸರಿನ್ ಮತ್ತು ರೋಸ್ ವಾಟರ್‍ನೊಂದಿಗೆ ಸೌತೆಕಾಯಿ ರಸವನ್ನು ಮಿಶ್ರಣ ಮಾಡಿ. ಕೆಲಕಾಲ ಅದನ್ನು ಬಿಡಿ.
# ತಲೆಹೊಟ್ಟು : 4 ಟೇಬಲ್ ಚಮಚಗಳಷ್ಟು ಕೂದಲಿನ ಎಣ್ಣೆಗೆ 10 ಹನಿಗಳಷ್ಟು ನಿಂಬೆ ರಸವನ್ನು ಸೇರಿಸಿ ತಲೆಗೆ ಹಚ್ಚಿಕೊಳ್ಳಬೇಕು.
# ನಿಮ್ಮ ಕಣ್ಣುಗಳನ್ನು ಉಜ್ಜಬೇಡಿ. ಬದಲಿಗೆ ನಿಮ್ಮ ಕಣ್ಣುಗಳನ್ನು ಮಿಟುಕಿಸಿ. ಇದು ಒಂದು ಉತ್ತಮ ವ್ಯಾಯಾಮ.
# ವಿಟಮಿನ್ ಬಿ2 ಬ್ಯೂಟಿ ವಿಟಿಮಿನ್ ಎಂದೇ ಗುರುತಿಸಿಕೊಂಡಿದೆ. ಈ ಸೌಚಿದರ್ಯವರ್ಧಕ ಜೀವಸತ್ವಗಳು ಸೇಬು, ಮೊಟ್ಟೆ ಹಾಗೂ ಪಪ್ಪಾಯಿಗಳಲ್ಲಿ ಇರುತ್ತದೆ.
# ವಿಟಮಿನ್ ಎ ಕ್ಯಾರೇಟ್, ಸಿಹಿ ಗೆಣಸು , ಪಾಲಕ್ ಮತ್ತು ಕುಂಬಳಕಾಯಿಯಲ್ಲಿ ಸಮೃದ್ದವಾಗಿರುತ್ತದೆ. ಇದು ಆರೋಗ್ಯಕರ ಚರ್ಮಕ್ಕೆ ಸಹಕಾರಿ. ಇದು ಧರ್ಮ ಸುಕ್ಕಾಗುವುದನ್ನು ತಡೆಗಟ್ಟುವ ಆಂಟಿ ರಿಂಕಲ್ ಏಜೆಂಟ್.
# ನಿಮ್ಮ ಚರ್ಮದ ಮೇಲೆ ಆರೋಗ್ಯಕರ ಹೊಳಪಿಗಾಗಿ ಮುಂಜಾನೆಯ ಎಳೆ ಬಿಸಿಲಿನಲ್ಲಿ ಒಂದು ಅಥವಾ ಎರಡು ಗಂಟೆಗಳ ಕಾಲ ಇರಬೇಕು.
# ವಿಪರೀತ ಬೆವರು ಸುರಿಯುವಿಕೆಯು ಮಂಕಾದ ಚರ್ಮಕ್ಕೆ ಕಾರಣವಾಗುತ್ತದೆ.
# ನಿಮ್ಮ ಮುಖವನ್ನು ನೀರು ಮತ್ತು ನಿಂಬೆ ರಸದೊಂದಿಗೆ ನೆನೆಸಿ. ಇದು ನಿಮ್ಮ ಚರ್ಮದ ಕಾಂತಿಗೆ ನೆರವಾಗುತ್ತದೆ.
# ಸಾಕಷ್ಟು ನೀರು ಕುಡಿಯುವುದರೊಂದಿಗೆ ನಿಮ್ಮ ದಿನಚರಿಯನ್ನು ಆರಂಭಿಸಿ.
# ಚಾಕೋಲೆಟ್‍ಗಳು ಮತ್ತು ಕರಿದ ತಿಂಡಿ ಪದಾರ್ಥಗಳು ಮೊಡವೆಗಳಿಗೆ ಕಾರಣವಾಗುತ್ತದೆ. ಅಪೌಷ್ಟಿಕ ಆಹಾರದಿಂದಲೂ ಈ ಸಮಸ್ಯೆ ಉಂಟಾಗಬಹುದು.
# ಸುಗಂಧದ್ರವ್ಯಗಳ ಪರಿಮಳ ದೀರ್ಘಕಾಲ ಇರುವಂತಾಗಲು ನಿಮ್ಮ ಸೊಂಟ ಮತ್ತು ಕತ್ತಿನ ಭಾಗಗಳಿಗೆ ಪಫ್ರ್ಯೂಮ್‍ನನ್ನು ಸಿಂಪಡಿಸಿಕೊಳ್ಳಿ.
# ಗರ್ಭಿಣಿಯುರ ರಕ್ತ ಪೂರೈಕೆಯನ್ನು ಹೆಚ್ಚಿಸಿಕೊಳ್ಳಲು ಹಾಗೂ ಸುಲಭವಾಗಿ ಹೆರಿಗೆ ಆಗಲು ಬಾಳೆಹಣ್ಣುಗಳನ್ನು ಸೇವಿಸಬೇಕು.
# ಪಪ್ಪಾಯಿ ಒಂದು ಉತ್ತಮ ಜೀರ್ಣಕಾರಿ. ಆದ್ದರಿಂದ ಊಟವಾದ ನಂತರ ಪಪ್ಪಾಯಿ ಹಣ್ಣು ಸೇವಿಸಬೇಕು.
# ಬೇಧಿ ಮತ್ತು ಅತಿಸಾರ ಸಮಸ್ಯೆಯಿಂದ ನರಳುತ್ತಿರುವ ರೋಗಿಗಳು ಖರ್ಜೂರಗಳನ್ನು ಸೇವಿಸುವ ಮೂಲಕ ಈ ತೊಂದರೆಯಿಂದ ಪರಿಹಾರ ಪಡೆಯಬಹುದು.
# ಯಥೇಚ್ಚವಾಗಿ ಕಬ್ಬಿನಹಾಲನ್ನು ಕುಡಿಯುವ್ಯದರಿಂದ ಕಾಮಾಲೆ ರೋಗವನ್ನು ತಡೆಗಟ್ಟಬಹುದು.
# ಪ್ರತಿದಿನ ಆಹಾರದಲ್ಲಿ ಈರುಳ್ಳಿಯನ್ನು ಸೇವಿಸುವ್ಯದರಿಂದ ಹೃದ್ರೋಗ ಸಮಸ್ಯೆಗಳನ್ನು ತಡೆಗಟ್ಟಬಹುದು.
# ಉಪ್ಪು ನೀರಿನೊಂದಿಗೆ ಗಂಟಲು ಮುಕ್ಕಳಿಸುವ್ಯದರಿಂದ ಹಾಗೂ ಈ ದ್ರಾವಣದಿಂದ ಬಾಯಿ ತೊಳೆದುಕೊಳ್ಳುವ್ಯದರಿಂದ ಗಂಟಲು ಹುಣ್ಣು, ಗಂಟಲು ನೋವು ಹಾಗೂ ಹಲ್ಲು ನೋವನ್ನು ಗುಣಪಡಿಸಿಕೊಳ್ಳಬಹುದು.

Facebook Comments

Sri Raghav

Admin