ದೆಹಲಿಯಲ್ಲಿ 2ನೇ ತರಗತಿ ಬಾಲಕಿ ಮೇಲೆ ಅತ್ಯಾಚಾರ

ಈ ಸುದ್ದಿಯನ್ನು ಶೇರ್ ಮಾಡಿ

Minor-Girls--01

ನವದೆಹಲಿ, ಆ.10-ಎಳೆ ಮಕ್ಕಳ ಮೇಲೆ ಅತ್ಯಾಚಾರ ಎಸಗಿದವರನ್ನು ಗಲ್ಲಿಗೇರಿಸುವ ಕಾನೂನು ಜಾರಿಗೆ ಬಂದಿದ್ದರೂ, ಕಾಮುಕರ ಅಟ್ಟಹಾಸ ಮುಂದುವರಿದಿದೆ. ರಾಜಧಾನಿ ದೆಹಲಿಯ ಗೋಲ್ ಮಾರ್ಕೆಟ್‍ನಲ್ಲಿರುವ ನ್ಯೂ ಡೆಲ್ಲಿ ಮುನ್ಸಿಪಲ್ ಕೌನ್ಸಿಲ್(ಎಂಡಿಎಂಸಿ) ಶಾಲೆಯ ಎರಡನೇ ತರಗತಿಯ ಬಾಲಕಿ ಮೇಲೆ ಶಿಕ್ಷಣ ಸಂಸ್ಥೆಯ ಆವರಣದಲ್ಲೇ ಅತ್ಯಾಚಾರ ನಡೆದಿದೆ. ಈ ಹೀನ ಕೃತ್ಯದ ಸಂಬಂಧ ಎಲೆಕ್ಟ್ರಿಷಿಯನ್ ರಾಮ್ ಆಸ್ರೆ(37) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ನಿನ್ನೆ ಶಾಲೆಯಿಂದ ಅಳುತ್ತಾ ಮನೆಗೆ ಬಂದ ಬಾಲಕಿಯು ತನ್ನ ಮೇಲೆ ನಡೆದ ಕೃತ್ಯವನ್ನು ಪೋಷಕರಿಗೆ ತಿಳಿಸಿದ ನಂತರ ಪ್ರಕರಣ ಬೆಳಕಿಗೆ ಬಂದಿತು. ಈತ ಎನ್‍ಡಿಎಂಸಿಯ ಕಾಯಂ ಎಲೆಕ್ಟ್ರಿಷಿಯನ್ ಉದ್ಯೋಗಿಯಾಗಿದ್ದು, ಒಂದು ತಿಂಗಳ ಹಿಂದಷ್ಟೇ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.  ಆರೋಪಿ ರಾಮ್ ಆಸ್ರೆಯನ್ನು ಬಂಧಿಸಿ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೊೀಕ್ಸೊ) ಕಾಯ್ದೆಯ ವಿವಿಧ ಸೆಕ್ಷನ್‍ಗಳ ಅಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗಿದೆ.

Facebook Comments

Sri Raghav

Admin