ವಿವಿ ಪ್ಯಾಟ್ ಪರಿಶೀಲನೆ ಕೋರಿ ಸುಪ್ರೀಂಗೆ ಕಾಂಗ್ರೆಸ್ ಅರ್ಜಿ

ಈ ಸುದ್ದಿಯನ್ನು ಶೇರ್ ಮಾಡಿ

vvpat
ನವದೆಹಲಿ, ಆ.10-ಮಧ್ಯಪ್ರದೇಶದ ಮುಂದಿನ ವಿಧಾನಸಭೆ ಚುನಾವಣೆಗಳಲ್ಲಿ ವಿದ್ಯುನ್ಮಾನ ಮತ ಯಂತ್ರದೊಂದಿಗೆ ಬಳಸುವ ವಿವಿಪ್ಯಾಟ್ ಮೆಷಿನ್‍ಗಳ ಪರಿಶೀಲನೆ ಕೋರಿ ಕಾಂಗ್ರೆಸ್ ನಾಯಕ ಕಮಲ್‍ನಾಥ್ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಮತ್ತು ನ್ಯಾಯಮೂರ್ತಿ ಎ.ಎಂ.ಖಾನ್ವಿಲ್ಕರ್ ಅವರನ್ನು ಒಳಗೊಂಡ ಪೀಠವು ಈ ಅರ್ಜಿ ಕುರಿತ ವಿಚಾರಣೆ ನಡೆಸಿತು. ಈ ವಿಚಾರಣೆಯನ್ನು ಮುಂದಿನ ವಾರ ಕೈಗೆತ್ತಿಕೊಳ್ಳುವುದಾಗಿ ನ್ಯಾಯಾಲಯ ತಿಳಿಸಿದೆ.

ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಪ್ರತಿ ಕ್ಷೇತ್ರದ ಮತಗಟ್ಟೆಗಳಲ್ಲಿ ಶೇಕಡ 10ರಷ್ಟು ಮತದಾನ ಆದ ನಂತರ ಇವಿಎಂಗಳೊಂದಿಗೆ ಇರುವ ವಿವಿಪ್ಯಾಟ್ ಚೀಟಿಗಳನ್ನು ಯಾದೃಚ್ಚಿಕ ಪರಿಶೀಲನೆ ನಡೆಸಲು ಚುನಾವಣಾ ಆಯೋಗಕ್ಕೆ ಸೂಚನೆ ನೀಡಬೇಕೆಂದು ಕಮಲ್‍ನಾಥ್ ತಮ್ಮ ಅರ್ಜಿಯಲ್ಲಿ ಕೋರಿದ್ದರು.
ಅಲ್ಲದೆ, ಮತದಾರರ ಪಟ್ಟಿಯನ್ನು ಪಠ್ಯ ನಮೂನೆಯಲ್ಲಿ ಸಹ ನೀಡಬೇಕೆಂದು ಅವರು ಮನವಿ ಮಾಡಿದ್ದರು.

Facebook Comments

Sri Raghav

Admin